
ಬೆಂಗಳೂರು(ಮಾ.18): ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ನೀಡಿದ್ದ ಶೇ.50ರಷ್ಟು ರಿಯಾಯಿತಿ ಸೌಲಭ್ಯ ಶನಿವಾರ(ಮಾ.18) ಅಂತ್ಯವಾಗಲಿದೆ. ಶುಕ್ರವಾರ ರಾಜಧಾನಿಯಲ್ಲಿ 36 ಸಾವಿರ ಪ್ರಕರಣಗಳಿಂದ 1.07 ಕೋಟಿ ಬಾಕಿ ದಂಡ ಸಂಗ್ರಹವಾಗಿದೆ.
ಇದರೊಂದಿಗೆ ಕಳೆದ 14 ದಿನಗಳಲ್ಲಿ 3.58 ಲಕ್ಷ ಪ್ರಕರಣಗಳಿಂದ ಒಟ್ಟು 10.37 ಕೋಟಿ ದಂಡ ಸಂಗ್ರಹವಾಗಿದೆ. ಶೇ.50ರ ರಿಯಾಯಿತಿ ಶನಿವಾರ ಅಂತ್ಯವಾಗುವ ಹಿನ್ನೆಲೆಯಲ್ಲಿ ಎರಡರಿಂದ ಮೂರು ಕೋಟಿ ರು. ದಂಡ ಸಂಗ್ರಹವಾಗುವ ಸಾಧ್ಯತೆಯಿದೆ.
Violation traffic rules: ಶೇ.50 ಟ್ರಾಫಿಕ್ ದಂಡ: 15 ದಿನ ವಿಸ್ತರಣೆ
ಕಳೆದ ಬಾರಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ದಂಡ ಪಾವತಿಗೆ ಮುಂದಾದ ಪರಿಣಾಮ ಕೇವಲ 9 ದಿನಗಳಲ್ಲಿ 43.35 ಲಕ್ಷ ಪ್ರಕರಣಗಳಿಂದ ಬರೋಬ್ಬರಿ 126.87 ಕೋಟಿ ದಂಡ ಸಂಗ್ರಹವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.