'ಹೆಚ್ಚು ಕಡಿಮೆ ಆದ್ರೆ ನಾವ್ ಜವಾಬ್ದಾರರಲ್ಲ'  ರೇವಣ್ಣ ಖಡಕ್ ಎಚ್ಚರಿಕೆ

By Suvarna NewsFirst Published May 1, 2020, 4:27 PM IST
Highlights

ಹಾಸನದಲ್ಲಿ ಮಾಜಿ ಸಚಿವ, ಶಾಸಕ ಎಚ್‌.ಡಿ.ರೇವಣ್ಣ ಸುದ್ದಿಗೋಷ್ಠಿ/ ಹಾಸನ ಜಿಲ್ಲೆಗೆ ಹೇಮಾವತಿ ನೀರು ಬಿಡಲು ಒತ್ತಾಯ/ ಹೆಚ್ಚುವರಿ ಪೊಲೀಸ್ ಭದ್ರತೆ ಯಾಕೆ?/ ಹಾಸನ, ಮಂಡ್ಯ ತ್ತು ತುಮಕೂರು ಜನ ಅಣ್ಣ ತಮ್ಮಂದಿರು

ಹಾಸನ (ಮೇ 01)   ಹೇಮಾವತಿ ಜಲಾಶಯ ಯೋಜನೆ 2020-21 ಸಲಹಾ ಸಮಿತಿ ಸಭೆ ಕರೆಯಬೇಕಿತ್ತು.  6 ಲಕ್ಷ 50 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಬಿಡಬೇಕಿತ್ತು. ಕಳೆದ ಹನ್ನೆರಡು ತಿಂಗಳಿನಿಂದ ನಾಲೆಗಳು, ಉಪನಾಲೆಗಳ ಕಾಮಗಾರಿಗಳಾಗಿಲ್ಲ.  ಹಾಸನ, ಮಂಡ್ಯ, ತುಮಕೂರು ಜಿಲ್ಲೆ ಬೇರೆ ಅಲ್ಲ. ಮೂರು ಜಿಲ್ಲೆಯ ಜನರು ಅಣ್ಣ ತಮ್ಮಂದಿರ ತರಹ ಇರಬೇಕು ಎಂಬ ಅಭಿಪ್ರಾಯವನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ, ಜೆಡಿಎಸ್ ಶಾಸಕರು ಹಾಗೂ ಸಂಸದ ಪ್ರಜ್ವಲ್ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಕುಡಿಯುವ ನೀರು ಬಿಡಿ ಎಂದು ಒತ್ತಾಯಿಸುತ್ತಿದ್ದೇವೆ. ಏಪ್ರಿಲ್ ಮೊದಲ ವಾರದಲ್ಲಿ ನೀರು ಬಿಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದರು.  ಬೆಳೆ ಮಾಡಲು ನಾನು ನೀರು ಕೇಳಿಲ್ಲ.  ಮಂಡ್ಯ, ತುಮಕೂರು ಜಿಲ್ಲೆಯ ನಾಲೆಯ ಅಚ್ಚುಕಟ್ಟು ಪ್ರದೇಶಕ್ಕೂ ನೀರು ಬಿಡಿ.  ತುಮಕೂರಿಗೆ ನೀರು ಬಿಡಲು ಅಡ್ಡಿ ಮಾಡುತ್ತಿದ್ದಾರೆ ಎಂದು ಕೆಲವರು ನಮ್ಮ ಕುಟುಂಬದ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ.  ಸರ್ಕಾರ ಮೂರು ಜಿಲ್ಲೆಯ ರೈತರ ಹಿತ ಕಾಪಾಡಬೇಕು ಎಂದು ರೇವಣ್ಣ ಒತ್ತಾಯಿಸಿದ್ದಾರೆ.

ಹೇಮಾವತಿ ನದಿಯ ಇತಿಹಾಸದಲ್ಲಿ ‌ಎಂದು ಸಹ ಇಷ್ಟು ಪೊಲೀಸ್ ಭದ್ರತೆ ಹಾಕಿಲ್ಲ. ಒಂದೊಂದು ಡಿಸ್ಟಿಬ್ಯೂಟರ್ಗೆ ಮೂರು ಜನ ಪೊಲೀಸರನ್ನು ನಿಯೋಜಿಸಿದ್ದಾರೆ. ಈ  ರೀತಿ ನೀರು ಬಿಡಲು ಸಿಸ್ಟಂ ಮಾಡಿರುವುದು ಇದೇ ಮೊದಲು.  ನೀರು ಬಿಡುವುದಕ್ಕೆ ತಡೆಯೊಡ್ಡಿರುವವರು ಯಾರು?  ಪೊಲೀಸ್ ಭದ್ರತೆ ಇಟ್ಕಂಡು ನೀರು ಬಿಡಬೇಕಾ?  ನೀರು ಬಿಡುವ ಮುನ್ನ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು ಎಂದು ರೇವಣ್ಣ ಆಗ್ರಹಿಸಿದರು.

ಕಾರ್ಮಿಕರಿಗೆ ಮಹತ್ವದ ಸೂಚನೆ ಕೊಟ್ಟ ಬಿಎಸ್ ಯಡಿಯೂರಪ್ಪ

ನೀರು ಬಿಡುವಾಗ ನಾಲೆಯ ಶಿಲ್ಟ್ ತೆಗೆಯುವುದು, ಗೇಟ್ ರಿಪೇರಿ ಮಾಡುತ್ತಿದ್ದಾರೆ.   ಅಧಿಕಾರ ಇದೇ ಅಂಥಾ, ಪೊಲೀಸ್ ಇಟ್ಕಂಡು, ನಮ್ಮನ್ನು ಕಂಟ್ರೋಲ್ ಮಾಡುವುದಾದರೆ ಹೆಚ್ಚು ಕಡಿಮೆ ಆದರೆ ನಾನು ಹೊಣೆ ಅಲ್ಲಾ. ತುಮಕೂರಿಗೆ ಹಾಸನಕ್ಕೂ ಒಬ್ಬರೇ ಉಸ್ತುವಾರಿ ಸಚಿವರಿದ್ದಾರೆ.  ನಾಳೆ ಹಾಸನ ಜಿಲ್ಲೆಯಲ್ಲೇನಾದರೂ ಗಲಾಟೆಯಾದರೆ ಸ್ಥಳೀಯ ಜನಪ್ರತಿನಿಧಿಗಳನ್ನು ಕೇಳುತ್ತಾರೆ.  ಎಷ್ಟು ಬೇಕು ಅಷ್ಟು ಕುಡಿಯುವ ನೀರು ಬಿಡಿ, ಬೆಳೆಗೆ ಬಿಡಬೇಡಿ. ನೀರು ಬಿಡಲು ಮಿನಿ ಎಮರ್ಜೆನ್ಸಿ ಡಿಕ್ಲೇರ್ ಮಾಡಿದ್ದಾರೆ. ಸರ್ಕಾರ ರೈತರನ್ನು ವಿಶ್ವಾಸಕ್ಕೆ ಪಡೆಯಬೇಕಿತ್ತು ಎಂದು ರೇವಣ್ಣ ಹೇಳಿದ್ದಾರೆ.

ಕೆಲ ಸಚಿವರಿಗೆ ಕಂಟಕ; ಕೋಡಿ ಶ್ರೀ ಭವಿಷ್ಯ

ತುಮಕೂರು ಜಿಲ್ಲೆಗೆ ಮಾತ್ರ ನೀರು ಹರಿಸುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ಜಿಲ್ಲೆಯ ಜನ ತಾಳ್ಮೆಕೆಟ್ಟರೆ ಏನಾದರೂ ಹೆಚ್ಚು ಕಡಿಮೆಯಾದರೆ ನಾನು ಹೊಣೆ ಅಲ್ಲ.  ಮೂರು ಜಿಲ್ಲೆಯ ಜನರಿಗೂ ಕುಡಿಯುವ ನೀಡು ಬಿಡಬೇಕು. ಸರ್ಕಾರ ಮೂರು ಜಿಲ್ಲೆಯ ಹಿತ ಕಾಯಬೇಕು.  ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ದ್ವೇಷ ಮಾಡಬಾರದು ಎಂದು ವಿನಂತಿಸಿದರು.

ಹನ್ನೆರಡು ತಿಂಗಳಿನಿಂದ ಹಾಸನ ಜಿಲ್ಲೆಗೆ ಒಂದು ರೂ ಕೆಲಸ ನೀಡಿಲ್ಲ.  ಬೇರೆ ಜಿಲ್ಲೆಗಳಲ್ಲಿ ಕೋಟಿಗಟ್ಟಲೆ ಕಾಮಗಾರಿ ನಡೆಯುತ್ತಿದೆ.  ಕೂಡಲೇ ಪೊಲೀಸ್ ಫೋರ್ಸ್ ವಾಪಸ್ ಪಡೆಯಬೇಕು ಎಂದು ರೇವಣ್ಣ ಒತ್ತಾಯ ಮಾಡಿದರು. 

 

click me!