ನಕಲಿ ಬೀಜ ಮಾರಾಟ ಹಗರಣ: ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ, ಸಚಿವ ಪಾಟೀಲ

Suvarna News   | Asianet News
Published : May 01, 2020, 03:04 PM IST
ನಕಲಿ ಬೀಜ ಮಾರಾಟ ಹಗರಣ: ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ, ಸಚಿವ ಪಾಟೀಲ

ಸಾರಾಂಶ

ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ಬೀಜ ವಶಕ್ಕೆ ಪಡೆದ ಪ್ರಕರಣ|ಈ ವಿಚಾರದಲ್ಲಿ ಯಾವುದೇ ಮುಲಾಜಿಲ್ಲಾ, ನಾನು ಒತ್ತಡಕ್ಕೆ ಬಲಿಯಾದರೆ ತಾಯಿಯೆ ವಿಷ ಕುಡಿಸಿದಂತಾಗುತ್ತದೆ| ನಾನು ಕೃಷಿ ಮಂತ್ರಿಯಾಗಿ ಯಾವುದೇ ಪ್ರಭಾವಕ್ಕೂ ಮಣಿಯುವುದಿಲ್ಲಾ|ಕೃಷಿ ಇಲಾಖೆ ಯಾವಾಗಲು ರೈತರ ಪರವಾಗಿರುತ್ತೆ: ಬಿ. ಸಿ. ಪಾಟೀಲ|

ಹಾವೇರಿ(ಮೇ.01): ನಕಲಿ ಬೀಜ ಮಾರಾಟ ಮಾಡುತ್ತಿದ್ದ ಮಾಲೀಕರ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ. ನಾನು ಒತ್ತಡಕ್ಕೆ ಬಲಿಯಾದರೆ ತಾಯಿಯೇ ವಿಷ ಕುಡಿಸಿದಂತಾಗುತ್ತದೆ. ನಾನು ಕೃಷಿ ಮಂತ್ರಿಯಾಗಿ ಯಾವುದೇ ಪ್ರಭಾವಕ್ಕೂ ಮಣಿಯುವುದಿಲ್ಲ. ಕೃಷಿ ಇಲಾಖೆ ಯಾವಾಗಲು ರೈತರ ಪರವಾಗಿಯೇ ಇರುತ್ತದೆ ಎಂದು ಕೃಷಿ ಸಚಿವ  ಬಿ.ಸಿ.ಪಾಟೀಲ್‌ ಅವರು ಹೇಳಿದ್ದಾರೆ. 

ಇಂದು(ಶುಕ್ರವಾರ) ಜಿಲ್ಲೆಯ ಹಿರೇಕೆರೂರಿನ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಲ್ಡ್ ಸ್ಟೋರೆಜ್ ಮತ್ತು ನಕಲಿ ಬೀಜ ಮಾರಾಟ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ನಕಲಿ ಬೀಜದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೇ ಶಾಕ್ ಆಗಿದ್ದಾರೆ. ಈ ರೀತಿಯಾದರೆ ರೈತರು ಬದುಕುತ್ತಾರಾ? ಈ ಹಗರಣದಲ್ಲಿ ಯಾರೇ ಭಾಗಿಯಾಗಿದ್ರು ಅವರನ್ನ ಬಂಧಿಸಬೇಕು  ಎಂದು ಮುಖ್ಯಮಂತ್ರಿಗಳು ಆದೇಶ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಕೃತಕ ಅಭಾವ ಸೃಷ್ಟಿಸುವ ಮಾಫಿಯಾ: 3.5 ಕೋಟಿ ಮೌಲ್ಯದ ಬಿತ್ತನೆ ಬೀಜ ವಶ

ವ್ಯಾಪಾರಸ್ಥರದ್ದು ಕೇವಲ ಹಣ ಮಾಡುವುದೊಂದೇ ಉದ್ದೇಶವಾಗಿದೆ. ಬಿಡಿ ಬೀಜಗಳನ್ನು ರೈತರು ಖರೀದಿ ಮಾಡಬಾರದು ಎಂದು ಸಚಿವ ಬಿ. ಸಿ. ಪಾಟೀಲ ಅವರು ಮನವಿ ಮಾಡಿದ್ದಾರೆ. 
 

PREV
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ