ಲಾಕ್‌ಡೌನ್ ಸಡಿಲಿಕೆಯಾಗಿದ್ದರಿಂದ ಬಾಗಲಕೋಟೆ ಜಿಲ್ಲೆಗೆ ಆಗಮಿಸುತ್ತಿರುವ ಕಾರ್ಮಿಕರು| ಜಿಲ್ಲೆಯ ಬಾದಾಮಿ ತಾಲೂಕಿನ ಗೋವಿನಕೊಪ್ಪ ಗ್ರಾಮದ ಬಳಿ ಇರುವ ಚೆಕ್ ಪೋಸ್ಟ್| ಬಾದಾಮಿ ತಾಲೂಕಿಗೆ ಆಗಮಿಸಿದ 120ಕ್ಕೂ ಅಧಿಕ ಕಾರ್ಮಿಕರ ಆರೋಗ್ಯ ತಪಾಸಣೆ| ಚೆಕ್‌ಪೋಸ್ಟ್‌ನಲ್ಲಿ ತೀವ್ರ ಕಟ್ಟೆಚ್ಚರ|
ಬಾಗಲಕೋಟೆ(ಮೇ.01): ಏಕಾಏಕಿ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಅಸಂಖ್ಯಾತ ಕೂಲಿ ಕಾರ್ಮಿಕರು ರಾಜ್ಯ ಹಾಗೂ ಅನ್ಯ ರಾಜ್ಯಗಳಲ್ಲಿ ಸಿಲುಕಿಹಾಕಿಕೊಂಡಿದ್ದರು. ಇದೀಗ ಸ್ವಲ್ಪ ಮಟ್ಟಿಗೆ ಲಾಕ್‌ಡೌನ್ ಸಡಿಲಿಕೆ ಆಗಿದ್ದರಿಂದ ಸಂಕಷ್ಟದಲ್ಲಿದ್ದ ಕೂಲಿ ಕಾರ್ಮಿಕರನ್ನ ತವರೂರಿಗೆ ಕರೆತರುತ್ತಿದೆ.
ಹೀಗಾಗಿ ಜಿಲ್ಲೆಗೆ ವಲಸೆ ಕಾರ್ಮಿಕರು ನಿರಂತರವಾಗಿ ಬರುತ್ತಿದ್ದಾರೆ. ಜಿಲ್ಲೆಯ ಬಾದಾಮಿ ತಾಲೂಕಿನ ಗೋವಿನಕೊಪ್ಪ ಚೆಕ್‌ಪೋಸ್ಟ್‌ನಲ್ಲಿ ವಲಸೆ ಕಾರ್ಮಿಕರ ಆರೋಗ್ಯವನ್ನ ತೀವ್ರ ತಪಾಸಣೆ ಮಾಡಲಾಗುತ್ತಿದೆ. ಇಂದು ಬೆಳಿಗ್ಗೆ(ಶುಕ್ರವಾರ) ಸರ್ಕಾರಿ ಬಸ್‌ಗಳ ಮೂಲಕ ಕಾರ್ಮಿಕರು ಆಗಮಿಸುತ್ತಿದ್ದಾರೆ.
ಲಾಕ್‌ಡೌನ್: ಬಾಗಲಕೋಟೆಯಲ್ಲಿ ಸಿಲುಕಿಕೊಂಡ ಅಂತಾರಾಜ್ಯ ಕಾರ್ಮಿಕರು..!
ಮಂಗಳೂರಿನಿಂದ ಬಾದಾಮಿ ತಾಲೂಕಿಗೆ ಆಗಮಿಸಿದ 120ಕ್ಕೂ ಅಧಿಕ ಕಾರ್ಮಿಕರ ಆರೋಗ್ಯ ತಪಾಸಣೆಯನ್ನ ಮಾಡಲಾಗಿದೆ. ಜಿಲ್ಲಾದ್ಯಂತ ಇರುವ ಚೆಕ್‌ಪೊಸ್ಟ್‌ಗಳಲ್ಲಿ ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.