2023-24ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್ನ್ನು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ್ದು, ಗದಗ ಜಿಲ್ಲೆಗೆ ಯಾವುದೇ ಹೇಳಿಕೊಳ್ಳುವಂತ ಯೋಜನೆ ಘೋಷಿಸದಿದ್ದರೂ ಕುಂಟುತ್ತ ಸಾಗಿದ್ದ ಹಳೆಯ ಯೋಜನೆಗಳಿಗೆ ಬಲ ತುಂಬಿದ್ದಾರೆ.
ಗದಗ (ಫೆ.18) : 2023-24ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್ನ್ನು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ್ದು, ಗದಗ ಜಿಲ್ಲೆಗೆ ಯಾವುದೇ ಹೇಳಿಕೊಳ್ಳುವಂತ ಯೋಜನೆ ಘೋಷಿಸದಿದ್ದರೂ ಕುಂಟುತ್ತ ಸಾಗಿದ್ದ ಹಳೆಯ ಯೋಜನೆಗಳಿಗೆ ಬಲ ತುಂಬಿದ್ದಾರೆ.
ಗದಗ(Gadag) ಸೇರಿದಂತೆ ಉತ್ತರ ಕರ್ನಾಟಕ(North Karnataka) ಭಾಗದ 4 ಜಿಲ್ಲೆ 11 ತಾಲೂಕುಗಳಿಗೆ ಅನುಕೂಲವಾಗುವ ಮಹದಾಯಿ ಯೋಜನೆ(Mahadayi project)ಗೆ .1000 ಕೋಟಿ ಮೀಸಲಿಟ್ಟಿರುವುದು ಮಹದಾಯಿ ಹೋರಾಟಗಾರರು ಮತ್ತು ಮಲಪ್ರಭಾ ಅಚ್ಚುಕಟ್ಟು ರೈತರಲ್ಲಿ ಹರ್ಷ ತಂದಿದೆ. ಪಿಎಂ ಅಭಿಂ ಅಡಿಯಲ್ಲಿ ತೃತೀಯ ಹಂತದ ಆರೈಕೆಯನ್ನು ಒದಗಿಸುವ ಸಲುವಾಗಿ ಗದಗ ಆಸ್ಪತ್ರೆಯಲ್ಲಿ 50 ಹಾಸಿಗೆಯ ಕ್ರಿಟಿಕಲ… ಕೇರ್ ಬ್ಲಾಕ್ ಸ್ಥಾಪನೆಗೆ ಹಾಗೂ ಶಿರಹಟ್ಟಿಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ತಾಲೂಕಾಸ್ಪತ್ರೆಯನ್ನಾಗಿ ಮೇಲ್ದರ್ಜೆ ಏರಿಸುವ ಘೋಷನೆ ಮಾಡಿದ್ದಾರೆ.
undefined
ಅಶ್ವತ್ಥ ನಾರಾಯಣ ಸಚಿವರಾಗಿರಲು ನಾಲಾಯಕ್: ಸಿದ್ದರಾಮಯ್ಯ
ರೈಲು ಯೋಜನೆಗೆ ವೇಗ:
ಗದಗ-ವಾಡಿ ರೈಲ್ವೆ ಮಾರ್ಗಕ್ಕೆ .200 ಕೋಟಿ ಹಾಗೂ ಗದಗ-ಹೋಟಗಿ ಡಬ್ಲಿಂಗ್ ಕಾಮಗಾರಿಗೆ ಬಜೆಟ್‌ನಲ್ಲಿ .170 ಕೋಟಿ ಮೀಸಲಿಟ್ಟಿದೆ. ಇನ್ನುಳಿದಂತೆ ಸಾಮಾನ್ಯವಾಗಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣ, ಅತಿ ಹೆಚ್ಚು ದಾಖಲಾತಿ ಹೊಂದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ಗಳಿಗೆ ವೃದ್ಧಿ ಯೋಜನೆ ಅಡಿ .2 ಕೋಟಿ ವೆಚ್ಚದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಉನ್ನತ ಶಿಕ್ಷಣ ಸಂಸ್ಥೆಗಳನ್ನಾಗಿಸುವ ಗುರಿ ಹೊಂದಿದ್ದಾರೆ.
ಕೈಗಾರಿಕೆ ಬರಲಿಲ್ಲ:
ಪ್ರಸಕ್ತ ಬಜೆಟ್‌ನಲ್ಲಿ ಗದಗ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆ ಮಾಡಲು ಹಲವು ಕಂಪನಿಗಳು ಮುಂದು ಬಂದಿದ್ದು, ಅದಕ್ಕಾಗಿ ಬಜೆಟ್‌ನಲ್ಲಿ ಪೂರಕ ಅಂಶಗಳು ಘೋಷಣೆಯಾಗಬಹುದು ಎಂಬ ನಿರೀಕ್ಷೆಯನ್ನು ಜಿಲ್ಲೆಯ ಜನತೆ ಹೊಂದಿದ್ದರು. ಪುಣೆ-ಬೆಂಗಳೂರು ಎಕ್ಸ್ಪ್ರೆಸ್ ಹೈವೇಗೆ ಕೇಂದ್ರ ಸರ್ಕಾರ ಡಿಪಿಆರ್ ಸಿದ್ಧತೆ ಮಾಡಿದೆ. ಈ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ. ಹಿನ್ನೆಲೆಯಲ್ಲಿ ಇದಕ್ಕೆ ವಿಶೇಷ ಭೂ ಸ್ವಾಧೀನಕ್ಕಾಗಿ ಅನುದಾನ ಬಿಡುಗಡೆಯಾಗಬೇಕಿತ್ತು. ಅದು ಆಗಿಲ್ಲ.
ರಾಜ್ಯದಲ್ಲಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆಯಾಗಿರುವ ಗದಗನಲ್ಲಿ ಈರುಳ್ಳಿ ಸಂಸ್ಕರಣಾ ಘಟಕ ಮತ್ತು ಸಂಗ್ರಹಕ್ಕೆ ಶೈತ್ಯಾಗಾರಗಳು, ಅಕ್ಕಪಕ್ಕ ರಾಜ್ಯಗಳಲ್ಲಿ ಅತ್ಯಂತ ಬೇಡಿಕೆ ಇರುವ ಮೆಣಸಿನಕಾಯಿ ಬೆಳೆಯುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೆಣಸಿನಕಾಯಿ ಸಂಗ್ರಹಗಾರಗಳು, ಅದಕ್ಕಾಗಿ ಬ್ಯಾಡಗಿ ಮಾರುಕಟ್ಟೆಯಂತೆ ವಿಶೇಷ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ನೀಡುವ ವಿಶ್ವಾಸ ಹುಸಿಯಾಗಿದೆ.
ಕುಮಾರಸ್ವಾಮಿ ಸಿಎಂ ಆಗುವ ಆಸೆ ಈಡೇರೋದಿಲ್ಲ; ಸಚಿವ ಸಿ.ಸಿ.ಪಾಟೀಲ್
ಹನಿ ನೀರಾವರಿ...
ಗದಗ ಜಿಲ್ಲೆಯಲ್ಲಿ ಇಸ್ರೇಲ್ ಮಾದರಿಯ ಹನಿ ನೀರಾವರಿ(Israel model of drip irrigation) ಕೃಷಿಗೆ ಆದ್ಯತೆ ನೀಡುವ ಉದ್ದೇಶದಿಂದ ಸಿಂಗಟಾಲೂರ ಏತ ನೀರಾವರಿ ಯೋಜನೆæಯನ್ನೇ ಬಳಕೆ ಮಾಡಿಕೊಳ್ಳುವ ಯೋಜನೆ ಅನುಷ್ಠಾನವಾಗಿದ್ದು, ಈಗ ಪ್ರಾಥಮಿಕ ಹಂತದಲ್ಲಿದಲ್ಲಿದೆ. ಅದು ಸಂಪೂರ್ಣವಾಗಿ ವಿಸ್ತಾರಗೊಳ್ಳಲು ಹೆಚ್ಚಿನ ಅನುದಾನ ಬೇಕಿದೆ. ಈ ಹಿಂದೆ ಇದೇ ಯೋಜನೆಯ ಅನುಷ್ಠಾನ ಮಾಡುವ ಸಂದರ್ಭದಲ್ಲಿ ಸಚಿವರಾಗಿದ್ದ ಬೊಮ್ಮಾಯಿ ಅವರು ಈಗ ಸಿಎಂ ಆಗಿದ್ದಾರೆ ಎಂಬ ಕಾರಣಕ್ಕೆ ಜಿಲ್ಲೆಯ ಜನರು ಅನುದಾನ ಸಿಗಬಹುದು ಎಂಬ ವಿಶ್ವಾಸದಲ್ಲಿದ್ದರು. ಅದೂ ಈ ಬಜೆಟ್‌ನಲ್ಲಿ ಸೇರ್ಪಡೆಯಾಗಿಲ್ಲ.