ಹುಬ್ಬಳ್ಳಿಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ: ರಕ್ತದಾನ ಶಿಬಿರಕ್ಕೆ ಸತ್ಯಾಕಿ ಸಾವರ್ಕರ್ ಚಾಲನೆ

By Anusha Kb  |  First Published Jul 27, 2022, 2:35 AM IST

ವಾಣಿಜ್ಯನಗರಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆಯನ್ನು ವಿನೂತನ ರೀತಿಯಲ್ಲಿ ಆಚರಣೆ ಮಾಡುವ ಮೂಲಕ ನಿರಾಮಯ ಫೌಂಡೇಶನ್ ವತಿಯಿಂದ ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.


ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆಯನ್ನು ವಿನೂತನ ರೀತಿಯಲ್ಲಿ ಆಚರಣೆ ಮಾಡುವ ಮೂಲಕ ನಿರಾಮಯ ಫೌಂಡೇಶನ್ ವತಿಯಿಂದ ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು. ವೀರ ಸಾವರ್ಕರ್  ಮೊಮ್ಮಗ  ಸಾತ್ಯಕಿ ಸಾವರ್ಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ವಿಜಯ ದಿವಸ್ ಮತ್ತು ಅಮೃತ ಮಹೋತ್ಸವ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಸೈನಿಕರಿಗೆ ಸನ್ಮಾನ ಹಮ್ಮಿಕೊಳ್ಳಲಾಯಿತು.

ದೇಶವನ್ನು ರಕ್ಷಿಸಲು ಸೈನಿಕರು ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾಡಿನಲ್ಲಿರುವವರು ದಾನ, ಧರ್ಮ ಮಾಡುವ ಮೂಲಕ ಪ್ರಕೃತಿ ಹಾಗೂ ಭಾಷೆ ಉಳಿಸುವ ಕಾಯಕ ಮಾಡಬೇಕಾಗಿದೆ. ಪ್ರತಿ ಮನೆ ಮನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸ್ಮರಿಸುವಂತಾಗಬೇಕು ಎಂದ ಸಾತ್ಯಕಿ ಸಾವರ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನೂ ಆರ್.ಎಸ್.ಎಸ್. ದಕ್ಷಿಣ ಕ್ಷೇತ್ರದ ಪ್ರಜ್ಞಾ ಪ್ರವಾಹ ರಘುನಂದನ, ಗದಗದ ಬೃಹನ್ಮಠ ಸದಾಶಿವಾನಂದ ಸ್ವಾಮೀಜಿ, ಮಲ್ಲಿಕಾರ್ಜುನ ಬಾಳಿಕಾಯಿ ಮತ್ತಿತರರ ಉಪಸ್ಥಿತಿಯಲ್ಲಿ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ಶಿಬಿರ ಆಯೋಜನೆ ಮಾಡಲಾಗಿತ್ತು.

Tap to resize

Latest Videos

ಚಿಕ್ಕಮಗಳೂರಿನಲ್ಲಿ ಗಿಡ ನೆಟ್ಟು ಕಾರ್ಗಿಲ್ ವಿಜಯ್ ದಿವಸ್ ಅರ್ಥಪೂರ್ಣ ಆಚರಣೆ

click me!