ಕರ್ನಾಟಕ ಪರಿಶಿಷ್ಟ ಜಾತಿ-ಪಂಗಡಗಳ ಸುಳ್ಳು ಜಾತಿ ಪ್ರಮಾಣ ಪತ್ರಗಳ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಜು.28 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ
ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ-ಪಂಗಡಗಳ ಸುಳ್ಳು ಜಾತಿ ಪ್ರಮಾಣ ಪತ್ರಗಳ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಜು.28 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಈ ಪ್ರತಿಭಟನೆಗೆ ದಾವಣಗೆರೆ ಜಿಲ್ಲೆಯಿಂದ ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿ ತೆರಳಲಿದ್ದೇವೆ ಎಂದು ಸಮಿತಿಯ ರಾಜ್ಯ ಸಂಚಾಲಕ ಹೆಚ್ ಮಲ್ಲೇಶ್ ತಿಳಿಸಿದರು.
ಸುದ್ಸಿಗೋಷ್ಠಿಯಲ್ಲಿ ಮಾತನಾಡಿದ ಅವರು ವೀರಶೈವ ಲಿಂಗಾಯತ ಸಮುದಾಯದವರು ಸತ್ಯದ ಪ್ರತಿಪಾದನೆ ಎಂದು ಬಿಂಬಿಸಿಕೊಂಡು ತಾವೂ ಕೂಡ ಬುಡ್ಗಜಂಗಮ ಎಂಬ ಮಹಾ ಸುಳ್ಳನ್ನು ನಂಬಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು. ನಾವೇ ಬೇಡ ಜಂಗಮರು ಎಂದು ಸುಳ್ಳನ್ನು ಪ್ರತಿಪಾದಿಸುತ್ತಾ ಪರಿಶಿಷ್ಟರ ತಟ್ಟೆಗೆ ಕೈ ಹಾಕಿ ಮೀಸಲಾತಿ ಎಂಬ ಅನ್ನದ ಅಗುಳನ್ನು ಕಿತ್ತುಕೊಳ್ಳುತ್ತಿರುವುದು ಖಂಡನೀಯ.
undefined
ನಕಲಿ ಜಾತಿ ಪ್ರಮಾಣ ಪತ್ರ ಕೊಟ್ಟು ಸಿಕ್ಕಿ ಬಿದ್ದ ಗ್ರಾಪಂ ಸದಸ್ಯೆ.!
ಸುಳ್ಳು ಜಾತಿ ಪ್ರಮಾಣಪತ್ರದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಲು ಪ್ರತಿ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಶಾಲಾ ದಾಖಲೆಗಳಲ್ಲಿ 1 ನೇ ತರಗತಿಯಲ್ಲಿ ಬೇಡ ಜಂಗಮ ಎಂದು ದಾಖಲಿಸಲು ಪ್ರಾರಂಭಿಸುವುದರಿಂದ ಜಾತಿಸುಳ್ಳು ಎಂದು ತಿಳಿದು ಬಂದಲ್ಲಿ ವಂಶವೃಕ್ಷ ತೆಗೆದುಕೊಂಡು ಪರಿಶೀಲಿಸಿ ಜಾತಿ ಪ್ರಮಾಣ ಪತ್ರ ಅಂಗೀಕರಿಸಬೇಕು. ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟವನ್ನು ರಚಿಸಿಕೊಂಡು ಮೀಸಲಾತಿ ಕಬಳಿಕೆಯ ಅಪರಾಧವನ್ನು ಮುಚ್ಚಿ ಹಾಕಲು ಸುಳ್ಳು ಹೋರಾಟ ಮಾಡುತ್ತಿರುವ ಆ ಒಕ್ಕೂಟದ ಪದಾಧಿಕಾರಿಗಳ ವಿರುದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ನಮ್ಮ ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುವುದು ಎಂದರು.
ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಇಸ್ರೋದಲ್ಲಿ ಕೆಲಸ!
ಬೇಡ ಜಂಗಮ ಹೆಸರಿನಲ್ಲಿ ಈಗಾಗಲೇ ಎರಡು ಸಾವಿರ ಶಾಲಾ ದಾಖಲಾತಿಗಳಲ್ಲಿ ಪ್ರಮಾಣಪತ್ರ ದೊರೆತಿವೆ. ಆಡಳಿತ ಹಾಗೂ ವಿರೋಧ ಪಕ್ಷಗಳು ಎಸ್‌ಸಿ,ಎಸ್‌ಟಿ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ. ಮೀಸಲಾತಿ ಹೆಸರಿನಲ್ಲಿ ಸರ್ಕಾರವನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸುತ್ತಿರುವವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಶೇಖರ್ ನಾಯ್ಕ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಚಂದ್ರಪ್ಪ ಎಲ್.ಆರ್. ರವಿಕುಮಾರ್, ಮಲ್ಲಿಕಾರ್ಜುನ್, ರೇವಣಸಿದ್ದಪ್ಪ ಇದ್ದರು.