
ಕಲಬುರಗಿ(ಜು.15): ಕಲಬುರಗಿ ಹಾಗೂ ಬೆಂಗಳೂರು ನಡುವೆ ಹೊಸ ರೈಲು ಓಡಿಸಬಕಬೇಕೆಂದ ಈ ಭಾಗದ ಜನರ ಬೇಡಿಕೆಗೆ ಇದೇ ಮೊದಲ ಬಾರಿಗೆ ರೇಲ್ವೆ ಖಾತೆ ಸಚಿವ ಅಶ್ವಿನ್ ವೈಷ್ಣವ್ ಸ್ಪಂದಿಸಿದ್ದಾರೆ. ಇಲ್ಲಿನ ಸಂಸದ ಡಾ. ಉಮೇಶ ಜಾಧವ್ ಕೋರಿಕೆಗೆ ಸ್ಪಂದಿಸಿರುವ ಅಶ್ವೀನ್ ವೈಷ್ಣವ್ ಈ ವಿಚಾರವಾಗಿ ಪ್ರಸ್ತಾವನೆಯನ್ನು ಪರಿಗಣಿಸೋದಾಗಿ ಹೇಳಿದ್ದಾರೆ.
ದೆಹಲಿಯಲ್ಲಿ ಕಲ್ಬುರ್ಗಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಬೇಡಿಕೆಯೊಂದಿಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವರನ್ನು ಕಲಬುರ್ಗಿ ಸಂಸದರಾದ ಡಾ. ಉಮೇಶ್ ಜಾಧವ್ ಭೇಟಿ ನೀಡಿದ್ದರು. ಈ ಹಂತದಲ್ಲಿ ಅನೇಕ ಸಂಗತಿಗಳು ಚರ್ಚೆಗೊಳಗಾದವು.
ಪಂಚ ಗ್ಯಾರಂಟಿ ಸ್ಕೀಂ: ಬಿಜೆಪಿ, ಜೆಡಿಎಸ್ ನಾಯಕರಿಂದ ಅಪಪ್ರಚಾರ, ಶಾಸಕ ಅಲ್ಲಂಪ್ರಭು
ಪ್ರಮುಖವಾದ ಕಲಬುರಗಿ ಮತ್ತು ಬೆಂಗಳೂರು ಮಧ್ಯೆ ಹೊಸ ರೈಲು ನಡೆಸುವುದು, ಮುಂಬೈ ಸೋಲಾಪುರ್ ಒಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಕಲ್ಬುರ್ಗಿವರೆಗೆ ವಿಸ್ತರಿಸುವುದು, ಇಲ್ಲವಾದರೆ ಬೆಂಗಳೂರು ಕಲ್ಬುರ್ಗಿ ಮಧ್ಯೆ ಹೊಸ ಒಂದೇ ಭಾರತ್ ರೈಲನ್ನು ಪ್ರಾರಂಭಗೊಳಿಸುವುದರ ಬಗ್ಗೆ ಚರ್ಚಿಸಲಾಗಿದೆ.
ಹಾಗೆಯೇ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ವಿವಿಧ ರೈಲ್ವೆ ಸಂಬಂಧಿತ ಪ್ರತಿಭಟನೆಗಳನ್ನು ಉಲ್ಲೇಖಿಸಿದರು ಮತ್ತು ಕಲ್ಬುರ್ಗಿ ಬೆಂಗಳೂರು ಹೋಗುವ ರೈಲಿನ್ ಬೋಗಿಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣುಸುತ್ತಿರುವ ದಿನಪತ್ರಿಕೆಗಳಲ್ಲಿ ಆಗಿರುವ ಸುದ್ದಿಗಳ ಬಗ್ಗೆ ಪ್ರಸ್ತಾಪಿಸಿದರು ಮತ್ತು ಕಲ್ಬುರ್ಗಿ ಬೆಂಗಳೂರು ರೈಲು ಪ್ರಯಾಣಿಕರ ಸಂಖ್ಯೆಯ ಕುರಿತು ಇತ್ತೀಚಿನ ತಿಂಗಳಿನಲ್ಲಿ ತಿಂಗಳು ಒಂದುವರೆ ಲಕ್ಷಕ್ಕೂ ಹೆಚ್ಚು ಜನ ಕಲ್ಬುರ್ಗಿ ಬೆಂಗಳೂರು ಕಲ್ಬುರ್ಗಿ ಮಧ್ಯೆ ಪ್ರಯಾಣುಸುತ್ತಿರುವ ಮಾಹಿತಿ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದೆ ಎಂದು ಸಂಸದ ಡಾ. ಉಮೇಶ ಜಾಧವ್ ಹೇಳಿದ್ದಾರೆ.
ಹಾಗೆಯೆ ಜಿಲ್ಲೆಯ ಶಹಾಬಾದ್ ಸ್ಟೇಷನ್‌ನಲ್ಲಿ ಚೆನ್ನೈ ಎಗ್ಮೊರ್ ಎಕ್ಸ್‌ಪ್ರೆಸ್, ಮುಂಬೈ ನಾಗರ್ಕೋಯಿಲ್ ಎಕ್ಸ್‌ಪ್ರೆಸ್, ಕೊನಾರ್ಕ್ ಎಕ್ಸ್‌ಪ್ರೆಸ್, ಮುಂಬೈ ಹೈದರಾಬಾದ್ ಎಕ್ಸ್‌ಪ್ರೆಸ್, ಹೈದರಾಬಾದ್ ವಿಜಯಪುರ ಎಕ್ಸ್‌ಪ್ರೆಸ್ ಐದು ರೈಲುಗಳ ನಿಲ್ಲಿಸುವುದರ ಬಗ್ಗೆ ಚರ್ಚಿಸಲಾಯ್ತು.
ಜಾಲನಾ ತಿರುಪತಿ ಸ್ಪೆಷಲ್ ಎಕ್ಸ್‌ಪ್ರೆಸ್, ಸೋಲಾಪುರ್ ಮುಂಬೈ ಎಕ್ಸ್‌ಪ್ರೆಸ್, ಸೋಲಾಪುರ್ ತಿರುಪತಿ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲುಗಳನ್ನು ಕಡ್ಡಾಯವಾಗಿ ಕಮಲಪುರ ರೈಲ್ವೆ ಸ್ಟೇಷನ್‌ನಲ್ಲಿ ನಿಲ್ಲಿಸಲು ಮನವಿ ಮಾಡಲಾಗಿದೆ. ಚಿತ್ತಾಪುರ ರೈಲ್ವೆ ಸ್ಟೇಷನ್‌ನಲ್ಲಿ ಗಾಡಿ ಸಂಖ್ಯೆ 07003/04 ನ್ನು ನಿಲ್ಲಿಸಲು ಕೊರಲಾಗಿದೆ.
ಅಫಜಲ್ಪುರ: ಧರೆಗಿಳಿಯದ ಮಳೆ, ಆತಂಕದಲ್ಲಿ ರೈತರು
ಕೋವಿಡ್ ಮುಂಚೆ ನಡೆಯುವ ಎಲ್ಲಾ ರೈಲುಗಳನ್ನು ಪುನಃ ಸ್ಥಾಪನೆಗೊಳಿಸಲು ಮನವಿ ಮಾಡಿದರು ಅದರಲ್ಲಿ ವಿಶೇಷವಾಗಿ ಸೋಲಾಪುರ್ ಕಲ್ಬುರ್ಗಿ ಗುಂತಕಲ್ ಡೆಮೋ ಸಿಕಂದರಾಬಾದ್ ಚಿತ್ತಾಪುರ ಮೇಮು ಮತ್ತು ಫಲಕನುಮಾ ವಾಡಿ ಕಾಚಿಗುಡ ಎಕ್ಸ್‌ಪ್ರೆಸ್‌ನ್ನು ಕಲ್ಬುರ್ಗಿ ವರೆಗೆ ವಿಸ್ತರಿಸಬೇಕು ಎಂದು ಡಾ. ಜಾಧವ್ ರಲ್ವೆ ಸಚಿವರ ಗಮನ ಸೆಳೆದಿದ್ದಾರೆ.
ಇದಕ್ಕೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವರು ಶೀಘ್ರವೇ ಕಲ್ಬುರ್ಗಿ ಬೆಂಗಳೂರು ಮಧ್ಯೆ ರೈಲು ಶುರು ಮಾಡುವ ಬಗ್ಗೆ ಭರವಸೆ ನೀಡಿದರು ಹಾಗೆಯೇ ಸಂಸದರು ಕೋರಿದ ವಿವಿಧ ಬೇಡಿಕೆಗಳಿಗೆ ಶೀಘ್ರವೇ ಅನುಷ್ಠಾನಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಿದರು.