ವಿಜಯಪುರ: ಮಹಿಳಾ ವಿವಿಯಲ್ಲಿ ನೌಕರಿ ಆಮಿಷ: ಮೋಸ ಹೋಗದಿರಲು, ನಾವಿ ಮನವಿ

By Kannadaprabha News  |  First Published Jul 15, 2023, 10:27 PM IST

ಇದುವರೆಗೆ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದ ಯಾವುದೇ ಅಧಿಸೂಚನೆ ಹೊರಡಿಸಿರುವುದಿಲ್ಲ ಮತ್ತು ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ: ಕುಲಸಚಿವ ಪ್ರೊ.ಬಿ.ಎಸ್‌.ನಾವಿ 


ವಿಜಯಪುರ(ಜು.15):  ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನೌಕರಿ ಕೊಡಿಸುವುದಾಗಿ ವಿಶ್ವವಿದ್ಯಾನಿಲಯದ ಲಾಂಛನ ಮತ್ತು ಕವರ್‌ಗಳನ್ನು ಬಳಸಿ ಅನಾಮಿಕ ವ್ಯಕ್ತಿಗಳು ಹಿಂದಿನ ಮತ್ತು ಪ್ರಸ್ತುತ ಕುಲಸಚಿವರು ಮತ್ತು ಸಹಾಯಕ ಕುಲಸಚಿವರ ಸಹಿಯೊಂದಿಗೆ ಸುಳ್ಳುಪತ್ರಗಳನ್ನು ನೀಡುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದ್ದು ಇಂಥ ವ್ಯಕ್ತಿಗಳ ಮೋಸದ ಜಾಲದ ಬಗೆಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಕುಲಸಚಿವ ಪ್ರೊ.ಬಿ.ಎಸ್‌.ನಾವಿ ಮನವಿ ಮಾಡಿದ್ದಾರೆ.

ಇದುವರೆಗೆ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದ ಯಾವುದೇ ಅಧಿಸೂಚನೆ ಹೊರಡಿಸಿರುವುದಿಲ್ಲ ಮತ್ತು ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಸಾರ್ವಜನಿಕರ ಗಮನಕ್ಕೆ ತರಲಾಗಿದೆ. 

Tap to resize

Latest Videos

ವಿಜಯಪುರ: ಕೃಷ್ಣೆಯಲ್ಲೀಗ ಮರಳಿದೆ ಜಲ ಜೀವಕಳೆ..!

ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನೇಮಕಾತಿ ಮಾಡಿಸುವುದಾಗಿ ಯಾರಾದರೂ ಹೇಳುತ್ತಿದ್ದಲ್ಲಿ ಅಂಥವರ ಹೆಸರನ್ನು ವಿಶ್ವವಿದ್ಯಾನಿಲಯದ ಗಮನಕ್ಕೆ ತರುವುದು ಮತ್ತು ಸಮೀಪದ ಪೊಲೀಸ್‌ ಠಾಣೆಗಳನ್ನು ಸಂಪರ್ಕಿಸಬಹುದಾಗಿದೆ. ಯಾರಾದರೂ ಇಂಥ ಮೋಸದ ಜಾಲದಲ್ಲಿ ಸಿಲುಕಿದ್ದರೆ ಅದಕ್ಕೆ ವಿಶ್ವವಿದ್ಯಾಲಯ ಹೊಣೆ ಆಗುವುದಿಲ್ಲ ಎಂದು ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದು ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!