ಕಲಬುರಗಿಯಲ್ಲಿ ಬಿಸಿಲ ಬೆಂಕಿಗೆ ಜನರು ತತ್ತರ..!

Published : May 18, 2023, 10:45 AM IST
ಕಲಬುರಗಿಯಲ್ಲಿ ಬಿಸಿಲ ಬೆಂಕಿಗೆ ಜನರು ತತ್ತರ..!

ಸಾರಾಂಶ

ಸೂರ್ಯೋದಯವಾಗುತ್ತಿದ್ದಂತೆಯೇ ತಣ್ಣಗೆ ಏರುವ ಬಿಸಿಲ ತಾಪ ಮಧ್ಯಾಹ್ನದ ವೇಳೆಗೆ ಹೆಚ್ಚುತ್ತ ಹೋಗಿ ಭೂಮಿ ಕಾದ ಕೆಂಡವಾದಂತಾಗುತ್ತಿದೆ. ಸಾಯಂಕಾಲ ಆರು ಗಂಟೆಯವರೆಗೂ ಬಿಸಿಲ ತಾಪ ಹೆಚ್ಚಾಗಿಯೇ ಇರುವುದರಿಂದ ಈ ಅವಧಿಯಲ್ಲಿ ಜನ ಹೊರಗಡೆ ಓಡಾಡಲು ಹೆದರುವಂತಾಗಿದೆ. 

ಕಲಬುರಗಿ(ಮೇ.18):  ಕಳೆದ 4 ದಿನದಿಂದ ಕಲಬುರಗಿ ಕಾದ ಕಾವಲಿಯಂತಾಗಿದೆ. ಸೂರ್ಯ ಬೆಳಗ್ಗೆ 6 ಗಂಟೆಯಿಂದಲೇ ಬೆಂಕಿ ಬಿಸಿಲು ಸೂಸುತ್ತ ಜನ- ಜಾನುವಾರು ಕಂಗಾಲಾಗಿಸಿದ್ದಾನೆ. ಹೀಗಾಗಿ ಬಿಸಿಲ ಪ್ರಖರತೆ ಹೆಚ್ಚುತ್ತಲೇ ಹೊರಟಿದೆ. ಬೆಂಕಿಯಂತ ಬಿಸಿಲಿಗೆ ಜನ ಬಸವಳಿದು ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಸೋಮವಾರ ಗರಿಷ್ಠ 41, ಕನಿಷ್ಠ 25.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಮಂಗಳವಾರವೂ ಹೆಚ್ಚುಕಮ್ಮಿ ಇದೇ ಅಳತೆಯಲ್ಲೇ ತಾಪಮಾನ ಸಾಗಿದೆ. ಬುಧವಾರ ಇನ್ನೂ ಹಚ್ಚುವ ಸಂಭವಗಳು ಗೋಚರಿಸಿದೆ. ಪ್ರಸಕ್ತ ವರ್ಷ ಅತಿ ಹೆಚ್ಚು ತಾಪಮಾನ 41 ಡಿಸೆ ದಾಖಲಾದ ದಿನ ಇದಾಗಿದೆ.

ಮಾಳಿಗೆ ಮೇಲೆ ಮನೆ ಮಂದಿ, ಹಚ್ಚುತ್ತಿದೆ ಕಳ್ಳರ ಕಾಟ:

ಹಗಲು ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣಕ್ಕೆ ರಾತ್ರಿ ಧಗೆಯೂ ಹೆಚ್ಚಾಗುತ್ತಿದ್ದು, ಧಗೆಯ ಕಾರಣಕ್ಕೆ ಜನ ಮನೆ ಮಾಳಿಗೆಯಲ್ಲಿ ಮಲಗುತ್ತಿರುವುದು ಸಾಮಾನ್ಯವಾಗಿದೆ. ಧಗೆಯ ಕಾರಣಕ್ಕೆ ಮನೆ ಮಾಳಿಗೆ ಮೇಲೆ ಮಲಗಿದ್ದ ಸಮಯ ಸಾಧಿಸಿ ಕಳ್ಳರು ಮನೆ ಕಳವು ಮಾಡಿದಂತಹ ಪ್ರಕರಣಗಳು ನಗರದ ಅಲ್ಲಲ್ಲಿ ನಡೆದಿರುವುದು ಬೆಳಕಿಗೆ ಬಂದಿರುವುದರಿಂದ ಜನ ಮನೆಗೆ ಬೀಗ ಹಾಕಿ ಮನೆ ಮಾಳಿಗೆ ಮೇಲೆ ಮಲಗಲೂ ಸಹ ಭಯ, ಆತಂಕ ಪಡುವಂತಾಗಿದೆ.

ರಾಜ್ಯದಲ್ಲಿ ಮಳೆ: ಚಿಕ್ಕಮಗಳೂರಲ್ಲಿ ಉಷ್ಣಾಂಶ ದಿಢೀರ್‌ 10 ಡಿಗ್ರಿ ಕುಸಿತ..!

ಸೂರ್ಯೋದಯವಾಗುತ್ತಿದ್ದಂತೆಯೇ ತಣ್ಣಗೆ ಏರುವ ಬಿಸಿಲ ತಾಪ ಮಧ್ಯಾಹ್ನದ ವೇಳೆಗೆ ಹೆಚ್ಚುತ್ತ ಹೋಗಿ ಭೂಮಿ ಕಾದ ಕೆಂಡವಾದಂತಾಗುತ್ತಿದೆ. ಸಾಯಂಕಾಲ ಆರು ಗಂಟೆಯವರೆಗೂ ಬಿಸಿಲ ತಾಪ ಹೆಚ್ಚಾಗಿಯೇ ಇರುವುದರಿಂದ ಈ ಅವಧಿಯಲ್ಲಿ ಜನ ಹೊರಗಡೆ ಓಡಾಡಲು ಹೆದರುವಂತಾಗಿದೆ. ಜಿಲ್ಲೆಯಲ್ಲಿ ಇನ್ನೂ ಎರಡ್ಮೂರು ದಿನ ಬಿಸಿಲಿನ ತಾಪ ಇದೇ ರೀತಿ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಪ್ಪನ ಕೆರೆಯಲ್ಲಿ ಮಕ್ಕಳ ಈಜಿನ ಮೋಜಿನ ಆಟ:

ನಗರದಲ್ಲಿ ಬಿಸಿಲ ಝಳ ಹೆಚ್ಚುತ್ತಿದ್ದಂತೆಯೇ ಬ್ರಹ್ಮಪೂರ, ಬೋರಾಬಾಯಿ ನಗರ, ಸೇರಿದಂತೆ ಹಲವು ಪ್ರದೇಶಗಲಿಂದ ಮಕ್ಕಳು ತಂಡೋಪತಂಡವಾಗಿ ಇಲ್ಲಿನ ಅಪ್ಪನ ಕೆರೆಯತ್ತ ಧಾವಿಸಿ ಬರುತ್ತಿದ್ದಾರೆ. ಕೆರೆಗೆ ಬಂದವರೇ ಶರ್ಚ್‌ ಕಳೆದು ನೀರಿಗೆ ಧುಮುಕುತ್ತಿದ್ದಾರೆ.

ಬಿಸಿಗಾಳಿಗೆ ಉತ್ತರ ತತ್ತರ: ಪ್ರಯಾಗದಲ್ಲಿ 44.2 ದಾಖಲು , ಧಗಧಗಿಸಿದ ಧರೆ

ಗಂಟೆಗಟ್ಟಲೇ ಈಜಾಟವಾಡುತ್ತ ಮಕ್ಕಳೆಲ್ಲರೂ ಸಂಭವಿಸುತ್ತಿರುವ ನೋಟಗಳು ಕಂಡು ಬರುತ್ತಿವೆ. ಅಪ್ಪನ ಕೆರೆಯಲ್ಲಿ ಅರೆಬರೆ ಕೆರೆ ಅಭಿವೃದ್ಧಿ ಕಾಮಗಾರಿಯಾಗಿದೆ. ಈ ಪ್ರದೇಶದಲ್ಲೇ ಮಕ್ಕಳು ಈಜು- ಮೋಜಿನಲ್ಲಿ ತೊಡಗಿದ್ದಾರೆ. ಹೀಗಾಗಿ ಕೆರೆಯಲ್ಲಿ ನೀರು ಆಳವಾಗರೋದರಿಂದ ಅಪಾಯಗಳೇನಾದರೂ ಸಂಭವಿಸಿದರೆ ಯಾರು ಹೊಣೆ ಎಂಬಂತಾಗಿದೆ.

ಪಾಲಿಕೆಯವರು, ಪೊಲೀಸರು ಈ ಪ್ರದೇಶದಲ್ಲಿ ಕಾವಲಿಡಲೇಬೇಕು ಎಂದ ಅನೇಕರು ಆಗ್ರಹಿಸುತ್ತಿದ್ದಾರೆ. ಮೊದಲೇ ಅಪ್ಪನ ಕೆರೆಯಲ್ಲಿ ನೀರಲ್ಲಿ ಮುಳುಗಿ ಆವು- ನೋವ ಆಗಾಗ ಂಭವಿಸುತ್ತಲೇ ಇರುತತವೆ. ಈ ಹಂತದಲ್ಲಿ ಬೇಸಿಗೆ ಜಿನ ಮೋಜಿನಾಟದಲ್ಲಿ ಮುಳುಗುವ ಮಕ್ಕಳು ಅದೇ ಜೋಶ್‌ನಲ್ಲಿ ಆಳವಾದ ನೀರಿಗೆ ಹೋದಲ್ಲಿ ಅನಾಹುತಗಳಾಗದಂತೆ ತಪ್ಪಿಸಲು ಸೂಕ್ತ ಕಾವಲು ವ್ಯವಸ್ಥೆ ಅಪ್ಪನ ಕೆರೆ ಸುತ್ತಮುತ್ತ ಹಾಕಬೇಕಾಗಿದೆ.

PREV
Read more Articles on
click me!

Recommended Stories

ರೈತರಿಗೆ ಅನುಕೂಲ ಮಾಡುವುದೇ ಗುರಿ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್
ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ