ಮುಖ್ಯಮಂತ್ರಿ ಆಕಾಂಕ್ಷಿ ಸಿದ್ದರಾಮಯ್ಯ ಅವರ ಕೋರಿಕೆಯ ಮೇರೆಗೆ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿಯ ಪ್ರಸಾದವನ್ನು ಕ್ಷೇತ್ರದಿಂದ ಬೆಂಗಳೂರಿಗೆ ವಿಶೇಷ ಪ್ರತಿನಿಧಿ ಮೂಲಕ ಕಳಿಸಿಕೊಡಲಾಗಿದೆ.
ಬೆಳ್ತಂಗಡಿ(ಮೇ.18): ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತ ಪಡೆದು ಸರ್ಕಾರ ರಚನೆಗೆ ಮುಂದಾಗಿದೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿ ಸಿದ್ದರಾಮಯ್ಯ ಅವರ ಕೋರಿಕೆಯ ಮೇರೆಗೆ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿಯ ಪ್ರಸಾದವನ್ನು ಕ್ಷೇತ್ರದಿಂದ ಬೆಂಗಳೂರಿಗೆ ವಿಶೇಷ ಪ್ರತಿನಿಧಿ ಮೂಲಕ ಕಳಿಸಿಕೊಡಲಾಗಿದೆ.
Karnataka Election Result 2023: ಬಾದಾಮಿ ಋಣ ತೀರಿಸಿ ಭೀಮಸೇನ ಚಿಮ್ಮನಕಟ್ಟಿ ಗೆಲ್ಲಿಸಿಕೊಟ್ಟ ಸಿದ್ದರಾಮಯ್ಯ
ಶ್ರೀ ಮಂಜುನಾಥಸ್ವಾಮಿಯ ತೀರ್ಥ ಬಾಟಲಿ, ಬೆಲ್ಲಕಾಯಿ ಪ್ರಸಾದ, ಮಹಾಗಣಪತಿ ಪಂಚಕಜ್ಜಾಯ, ಶ್ರೀ ಪ್ರಸಾದ, ಕಲ್ಲುಸಕ್ಕರೆ, ದ್ರಾಕ್ಷಿ, ಕುಂಕುಮ ಪ್ರಸಾದ ಹೊಂದಿರುವ 6 ಸೆಟ್ ಪ್ರಸಾದವನ್ನು ಬೆಂಗಳೂರಿಗೆ ಕಳಿಸಿಕೊಡಲಾಗಿದೆ. ಅವರು ತನ್ನ ಆಪ್ತರ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪ್ರಸಾದ ತರಿಸಲು ಸೂಚಿಸಿದ್ದರು. ಆಪ್ತರು ಅವರ ಬೆಂಗಳೂರಿನ ಮನೆಗೆ ಪ್ರಸಾದವನ್ನು ತಲುಪಿಸಿದ್ದಾರೆ ಎಂದು ತಿಳಿದುಬಂದಿದೆ.