ಎಮ್ಮೆಲ್ಲೆ ಬಸನಗೌಡ ಹೇಳ್ಯಾರಾ, ಕರೆಂಟ್‌ ಬಿಲ್‌ ಕಟ್ಟಂಗಿಲ್ಲ, ಏನ್ಮಾಡ್ತಿರಾ ಮಾಡ್ಕೊಳ್ಳಿ

By Kannadaprabha News  |  First Published May 18, 2023, 9:50 AM IST

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರ 200 ಯೂನಿಟ್‌ ವಿದ್ಯುತ್‌ ಜೂನ್‌ ತಿಂಗಳಿನಿಂದ ಉಚಿತವಾಗಿ ಕೊಡಲಾಗುವುದು ಎಂದು ಗ್ಯಾರೆಂಟಿ ನೀಡಿಲಾಗಿದೆ. ಮಸ್ಕಿ ಕ್ಷೇತ್ರದ ಅಂಕುಶದೊಡ್ಡಿ ಗ್ರಾಪಂ ವ್ಯಾಪ್ತಿ ಸೇರಿದಂತೆ ವಿವಿಧ ಕಡೆ ಕರೆಂಟ್‌ ಬಿಲ್‌ ಪಾವತಿ ಮಾಡುವಂತೆ ಜೆಸ್ಕಾಂ ಸಿಬ್ಬಂದಿ ಹೋಗಿ ಕೇಳಿದರೆ ಕರೆಂಟ್‌ ಫ್ರೀ ಅಂದಿದ್ದಾರೆ ಬಿಲ್‌ ಕಟ್ಟಲ್ಲ ಎನ್ನುವು ವೀಡಿಯೋ ವೈರಲ್‌ ಆಗಿದೆ.


ಮಸ್ಕಿ (ಮೇ.18) : ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರ 200 ಯೂನಿಟ್‌ ವಿದ್ಯುತ್‌ ಜೂನ್‌ ತಿಂಗಳಿನಿಂದ ಉಚಿತವಾಗಿ ಕೊಡಲಾಗುವುದು ಎಂದು ಗ್ಯಾರೆಂಟಿ ನೀಡಿಲಾಗಿದೆ. ಮಸ್ಕಿ ಕ್ಷೇತ್ರದ ಅಂಕುಶದೊಡ್ಡಿ ಗ್ರಾಪಂ ವ್ಯಾಪ್ತಿ ಸೇರಿದಂತೆ ವಿವಿಧ ಕಡೆ ಕರೆಂಟ್‌ ಬಿಲ್‌ ಪಾವತಿ ಮಾಡುವಂತೆ ಜೆಸ್ಕಾಂ ಸಿಬ್ಬಂದಿ ಹೋಗಿ ಕೇಳಿದರೆ ಕರೆಂಟ್‌ ಫ್ರೀ ಅಂದಿದ್ದಾರೆ ಬಿಲ್‌ ಕಟ್ಟಲ್ಲ ಎನ್ನುವು ವೀಡಿಯೋ ವೈರಲ್‌ ಆಗಿದೆ.

ರಾಜ್ಯದಲ್ಲಿ ಮೇ 10ರಂದು ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ 200 ಯೂನಿಟ್‌ವರೆಗೆ ವಿದ್ಯುತ್‌ ಫ್ರೀ ಸೇರಿದಂತೆ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಇದೀಗ ಚುನಾವಣೆ ಮುಗಿದು ರಾಜ್ಯದಲ್ಲಿ ಸ್ಪಷ್ಟಬಹುಮತದೊಂದಿದೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್‌ ನೀಡಿರುವ ವಿದ್ಯುತ್‌ ಫ್ರೀ ಭರವಸೆಯಂತೆ ನಾವೂ ಇಂದಿನಿಂದ ವಿದ್ಯುತ್‌ ಬಿಲ್‌ ಪಾವತಿ ಮಾಡುವುದೇ ಇಲ್ಲವೆಂದು ಹೇಳುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಲ್ಲಿ ವೈರಲ್‌ ಆಗುತ್ತಿವೆ. ಇದರಿಂದ ವಿದ್ಯುತ್‌ ಬಿಲ್‌ ವಸೂಲಾತಿಗಾಗಿ ಮನೆ-ಮನೆಗೆ ಹೋಗುವ ಜೆಸ್ಕಾಂ ಸಿಬ್ಬಂದಿ ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಳ್ಳುವಂತಾಗಿದೆ.

Tap to resize

Latest Videos

ಕರೆಂಟ್‌ ಬಿಲ್‌ ಕೊಡಬೇಡಿ, ನಾವು ಕಟ್ಟಲ್ಲ: ಮೆಸ್ಕಾಂ ಮೀಟರ್ ಬೋರ್ಡ್‌ಗೆ ಚೀಟಿ ಅಂಟಿಸಿದ ಉಡುಪಿ ನಾಗರಿಕ

ಈಗಾಗಲೆ ಕಾಂಗ್ರೆಸ್‌ನವರು ಜೂನ್‌ ತಿಂಗಳಿನಿಂದ ಉಚಿತವಾಗಿ ವಿದ್ಯುತ್‌ ಕೊಡುತ್ತೇವೆಂಬ ಭರವಸೆಯನ್ನು ಚುನಾವಣೆಗೆ ಮುಂಚಿತವಾಗಿ ಹೇಳಿರುವ ಕಾರಣ ಕಾಂಗ್ರೆಸ್‌ ಸರ್ಕಾರ ರಚನೆಯಾದ ನಂತರ ಸರ್ಕಾರದಿಂದ ಅಧಿಕೃತವಾಗಿ ಅಧಿಸೂಚನೆ ಬಂದ ನಂತರದಲ್ಲಿ ಗ್ರಾಹಕರ ಮನೆಗಳಿಗೆ ಯಾವ ಮಾನದಂಡದಡಿಯಲ್ಲಿ ವಿದ್ಯುತ್‌ ಫ್ರೀ ನೀಡುತ್ತಾರೆಂಬುದು ತಿಳಿಯಲಿದೆ. ಆದರೆ, ಜೆಸ್ಕಾಂ ಸಿಬ್ಬಂದಿ ಹಳೆಯ ಬಾಕಿ ಇರುವ ಬಿಲ್‌ ವಸೂಲಾತಿ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ ಎನ್ನಲಾಗುತ್ತಿದೆ. ಆದ್ದರಿಂದ ಸರ್ಕಾರ ಇದಕ್ಕೆ ಆದಷ್ಟುಶೀಘ್ರ ಗ್ರಾಹಕರಿಗೆ ಹಾಗೂ ಜೆಸ್ಕಾಂ ಇಲಾಖೆಗೆ ಪರಿಹಾರ ದೊರಿಸಬೇಕಿದೆ.

ಗ್ರಾಹಕರಿಗೆ ವಿದ್ಯುತ್‌ ಉಚಿ​ತ ಕೊಡುವ ಸಂಬಂಧ ಸರ್ಕಾರದಿಂದ ಅಧಿಕೃತವಾಗಿ ಸೂಚನೆ ಬಂದರೆ ಕೊಡಲಾಗುವುದು. ಆದರೆ ಗ್ರಾಹಕರು ಈಗ ಹಳೆಯ ಬಾಕಿ ಇರುವ ವಿದ್ಯುತ್‌ ಬಿಲ್‌ ಪಾವತಿ ಮಾಡಬೇಕು.

- ವೇಂಕಟೇಶ ಎಇಇ ಮಸ್ಕಿ

ಕಾಂಗ್ರೆಸ್‌ ಗ್ಯಾರಂಟಿಗೆ ಚಿತ್ರದುರ್ಗ ಜನತೆ ಟಕ್ಕರ್‌ : ವಿದ್ಯುತ್‌ ಬಿಲ್‌ ಕಟ್ಟಲ್ಲ ಎಂದು ಪಟ್ಟು- ವಿಡಿಯೋ ವೈರಲ್‌ 

click me!