ನಾನು ನನ್ನ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧ ಎಂದು ಬಳ್ಳಾರಿ ಉಸ್ತುವಾರ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಹೊಸಪೇಟೆ (ಫೆ.28): ಸಮಾಜ ಕಲ್ಯಾಂ ಸಚಿವ ಬಿ. ಶ್ರೀರಾಮುಲು ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತರೆ ನಾನು ಬಿಟ್ಟುಕೊಡಲು ಸಿದ್ಧನಾಗಿರುವೆ ಎಂದು ಮೂಲ ಸೌಕರ್ಯ ಹಜ್ ಮತ್ತು ವಕ್ಫ್ ಖಾತೆ, ಬಳ್ಳಾರಿ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ವಿದ್ಯಾನಗರದಲ್ಲಿ ಮಾತನಾಡಿದ ಶಾಸಕ ಸೋಮಶೇಖರ್ ರೆಡ್ಡಿ ಅವರು ನಮ್ಮ ಅಣ್ಣನಂತೆ. ಅಣ್ಣ ಏಕವಚನದಲ್ಲಿಮಾತನಾಡಿದರೆ ತಪ್ಪೇನಿಲ್ಲ ಎಂದರು.
ಸಚಿವ ಆನಂದ್ ಸಿಂಗ್ ಅವರನ್ನು ಬಳ್ಳಾರಿಯಿಂದ ಹೊರಗೆ ಕಳಿಸುತ್ತೇವೆ ಎಂಬ ಶಾಸಕ ಸೋಮಶೇಖರ ರೆಡ್ಡಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ರಾಮುಲು ಅವರು ಬಳ್ಳಾರಿ ಉಸ್ತುವಾರಿ ಹೊಣೆ ಹೊತ್ತರೆ ನಾನು ಬಿಟ್ಟುಕೊಡಲು ಸಿದ್ಧ ಎಂದರು.
ಮಡಿವಾಳ ಸಮುದಾಯ SCಗೆ ಸೇರಿಸಲು ಅಧಿವೇಶನದಲ್ಲಿ ಗಮನ ಸೆಳೆಯುವೆ: ಸಿಂಗ್ ...
ಶ್ರವಣ್ ವಿಜಯನಗರ ಡಿಸಿ : ನೂತನ ವಿಜಯನಗರ ಜಿಲ್ಲೆಯ ವಿಶೇಷ ಅಧಿಕಾರಿಯಾಗಿ ಅನಿರುದ್ಧ ಶ್ರವಣ್ ಅವರನ್ನು ನೇಮಕ ಮಾಡುವ ಸಾಧ್ಯತೆ ಇದ್ದು, ಸರ್ಕಾರದಿಂದ ಆದೇಶ ಬರಬೇಕಿದೆ. ಉತ್ತಮ ಅಧಿಕಾರಿಯಾಗಿದ್ದು , ಅವರೊಂದಿಗೆ ಸೇರಿ ಅಭಿವೃದ್ಧಿ ಕಾರ್ಯ ಮಾಡುತ್ತೇವೆ ಎಂದರು.