ಚಾಮರಾಜನಗರ ವೃತ್ತ ವಿಭಾಗದ 27 ಅರಣ್ಯ ವೀಕ್ಷಕರ ಹುದ್ದೆಗೆ ಬರೋಬ್ಬರಿ 13 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ. ರಾಜ್ಯದ ಬೆಳಗಾವಿ, ಬಾಗಲಕೋಟೆ, ಉತ್ತರಕನ್ನಡ ಸೇರಿದಂತೆ ನಾನಾ ಭಾಗಗಳಿಂದ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಅಧಿಕಾರಿಗಳು ಸರಿಯಾದ ಕ್ರಮದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿಲ್ಲ. ನೇಮಕಾತಿ ವೇಳೆ ತಪ್ಪೆಸಗಿದ್ದಾರೆಂದು ಆರೋಪಿಸಲಾಗಿದೆ.
ಚಾಮರಾಜನಗರ (ಮಾ.1) - ಚಾಮರಾಜನಗರ ಅರಣ್ಯಾಧಿಕಾರಿಗಳ ವಿರುದ್ಧ ಅರಣ್ಯ ವೀಕ್ಷಕರ ನೇಮಕಾತಿ ವೇಳೆ ಅಕ್ರಮವೆಸಗಿದ್ದಾರೆಂಬ ಆರೋಪ ಕೇಳಿಬಂದಿದೆ. ಎಲ್ಲಾ ಕಡೆಯೂ ಆರ್ಹತೆ ಹೊಂದಿರುವವರ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆದ್ರೆ ಇವರು ಒಳಗೊಳಗೆ ಬೇಕಾದ ಅಭ್ಯರ್ಥಿಗಳಿಗಷ್ಟೇ ಮೆಡಿಕಲ್ ಪರೀಕ್ಷೆಗೆ ಹಾಜರಾಗಲೂ ಸೂಚಿಸಿದ್ದಾರೆ. ಇದರಿಂದ ನಮಗೆಲ್ಲಾ ಅನ್ಯಾಯವಾಗ್ತಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
ಚಾಮರಾಜನಗರ ವೃತ್ತ ವಿಭಾಗದ 27 ಅರಣ್ಯ ವೀಕ್ಷಕರ ಹುದ್ದೆಗೆ ಬರೋಬ್ಬರಿ 13 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ. ರಾಜ್ಯದ ಬೆಳಗಾವಿ, ಬಾಗಲಕೋಟೆ, ಉತ್ತರಕನ್ನಡ ಸೇರಿದಂತೆ ನಾನಾ ಭಾಗಗಳಿಂದ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಅಧಿಕಾರಿಗಳು ಸರಿಯಾದ ಕ್ರಮದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿಲ್ಲ. ನೇಮಕಾತಿ ವೇಳೆ ತಪ್ಪೆಸಗಿದ್ದಾರೆಂದು ಆರೋಪಿಸಲಾಗಿದೆ. ನೇಮಕಾತಿ ವೇಳೆ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
undefined
ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದ ಪಿಡಿಒ; ಸಾಮೂಹಿಕ ರಾಜೀನಾಮೆಗೆ ಮುಂದಾದ ಗ್ರಾಪಂ ಸದಸ್ಯರು!
ಅರಣ್ಯ ಇಲಾಖೆ ನೇಮಕಾತಿ ನಡೆಗೆ ಆಕ್ಷೇಪ ವ್ಯಕ್ತವಾಗಿದೆ. ಪಾರದರ್ಶಕ ನೇಮಕಾತಿ ನಡೆಸಿಲ್ಲವೆಂದು ಆರೋಪಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಗೆ ಬಂದಿದ್ದ ನೂರಾರು ಆಭ್ಯರ್ಥಿಗಳು ಅರಣ್ಯ ಇಲಾಖೆ ಕಚೇರಿ ಮುಂದೆ ಜಮಾವಣೆಗೊಂಡು ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಲಿಸ್ಟ್ ಘೋಷಿಸಿಲ್ಲ. ತಮಗೆ ಬೇಕಾದರಿಗೆ ಕರೆ ಮಾಡಿ ಮೆಡಿಕಲ್ ಟೆಸ್ಟ್ ಗೆ ಸೂಚಿಸಿದ್ದಾರೆ. ಕದ್ದು ಮುಚ್ಚಿ ನೇಮಕಾತಿ ನಡೆಯುತ್ತಿದೆ.ದೈಹಿಕ ಪರೀಕ್ಷೆ ವೇಳೆಯೂ ಮೋಸ ನಡೆದಿದೆ. ಇದರಿಂದ ಅರಣ್ಯಾಧಿಕಾರಿಗಳು ಕೂಡಲೇ ಪುನಃ ದೈಹಿಕ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಇನ್ನೂ ಅಭ್ಯರ್ಥಿಗಳ ಆರೋಪವನ್ನು ಅರಣ್ಯಾಧಿಕಾರಿಗಳು ನಿರಾಕರಿಸಿದ್ದಾರೆ. 13 ಸಾವಿರಕ್ಕೂ ಹೆಚ್ಚು ಅರ್ಜಿ ಬಂದಿತ್ತು. ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ 1:20 ಅನುಪಾತದಲ್ಲಿ ದೈಹಿಕ ಪರೀಕ್ಷೆ ನಡೆಸಲಾಗಿದೆ. ದೈಹಿಕ ಪರೀಕ್ಷೆಯಲ್ಲಿ ಪಾಸಾದವರಿಗೆ ಪೋನ್ ಕರೆ ಮಾಡಿ 1:3 ಅನುಪಾತದಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಾಗ್ತಿದೆ. ಯಾವುದೇ ಅಕ್ರಮ ನಡೆದಿಲ್ಲ.ದೈಹಿಕ ಪರೀಕ್ಷೆಗೆ 358 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಇದೀಗಾ ಮೆರಿಟ್ ಹಾಗೂ ಅವರ ದೈಹಿಕ ಅರ್ಹತೆ ಪರೀಕ್ಷೆ ಆಧಾರದಲ್ಲಿ 81 ಮಂದಿ ಅಭ್ಯರ್ಥಿ ಸೆಲೆಕ್ಟ್ ಆಗಿದೆ.ಮೆಡಿಕಲ್ ನಂತರ ಒಂದು ಹುದ್ದೆಗೆ ಒಬ್ಬರ ನೇಮಕ ನಡೆಯಲಿದೆ. ನಂತರ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ ಅಂತಾರೆ ಅರಣ್ಯಾಧಿಕಾರಿಗಳು.
ನಾಗಮಲೆಗೆ ಹೋಗುವ ಭಕ್ತರಿಗೆ ನಿರ್ಬಂಧ ವಿಧಿಸಿದ ಅರಣ್ಯ ಇಲಾಖೆ; ಉದ್ಯೋಗ ಕಿತ್ತುಕೊಳ್ತಿದೆ ಎಂದು ಸ್ಥಳೀಯರು ಆಕ್ರೋಶ
ಒಟ್ನಲ್ಲಿ ಕಳೆದ ಮೂರು ದಿನದಿಂದ 27 ಅರಣ್ಯ ವೀಕ್ಷಕರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ದೈಹಿಕ ಪರೀಕ್ಷೆ ಪಾಸಾದವರ ಲಿಸ್ಟ್ ಯಾಕೆ ಪ್ರಕಟಗೊಂಡಿಲ್ಲ. ನಂತರ ಮೆಡಿಕಲ್ ಟೆಸ್ಟ್ ಗೆ ಹಾಜರಾಗುವವರ ವಿವರ ಯಾಕೆ ಬಹಿರಂಗ ಪಡಿಸಿಲ್ಲ ಎಂಬುದು ದೊಡ್ಡ ಪ್ರಶ್ನೆಯಾಗಿದೆ..