ಓಬಿಸಿಗೆ 27% ಶಿಕ್ಷಣ ಮೀಸಲು ನೀಡಿದ ಪ್ರಧಾನಿ ಮೋದಿ: ಕೆ.ಎಸ್.ಈಶ್ವರಪ್ಪ

By Kannadaprabha NewsFirst Published Mar 1, 2024, 8:30 PM IST
Highlights

ಪ್ರಧಾನಿ ಮೋದಿ ಹಿಂದುಳಿದ ಜಾತಿಯಲ್ಲ ಎಂದು ಟೀಕಿಸುವ ರಾಹುಲ್ ಗಾಂಧಿಗೆ ತನ್ನ ಜಾತಿಯ ಮೂಲ ಗೊತ್ತಿದೆಯಾ? ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು. 
 

ಶಿಕಾರಿಪುರ (ಮಾ.01): ಪ್ರಧಾನಿ ಮೋದಿ ಹಿಂದುಳಿದ ಜಾತಿಯಲ್ಲ ಎಂದು ಟೀಕಿಸುವ ರಾಹುಲ್ ಗಾಂಧಿಗೆ ತನ್ನ ಜಾತಿಯ ಮೂಲ ಗೊತ್ತಿದೆಯಾ? ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು. ಪಟ್ಟಣದ ಶ್ರೀ ಮಾರಿಕಾಂಬಾ ದೇವಸ್ಥಾನದ ರಂಗಮಂದಿರದಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗದ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ರಾಘಣ್ಣ ಸಂಸದರಾದ ನಂತರ ಅತಿಹೆಚ್ಚು ಯೋಜನೆಯನ್ನು ಶಿವಮೊಗ್ಗ ಜಿಲ್ಲೆಗೆ ತಂದಿದ್ದು, ಇದನ್ನು ಕಾಂಗ್ರೆಸ್ ಪಕ್ಷದ ನಾಯಕರೂ ಒಪ್ಪಿಕೊಳ್ಳುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಸಮುದಾಯದವರು ಅನುದಾನದಿಂದ ವಂಚಿತರಾಗಿಲ್ಲ. ಹಿಂದುಳಿದವರಿಗೆ ಶೇ.27 ಮೀಸಲಾತಿಯನ್ನು ಶಿಕ್ಷಣದಲ್ಲಿ ನೀಡಿದ ಮೊದಲ ಪ್ರಧಾನಿ ನರೇಂದ್ರ ಮೋದಿಯವರಾಗಿದ್ದಾರೆ ಎಂದರು.

ಬಿಜೆಪಿ ಅಧಿಕಾರಾವಧಿಯಲ್ಲಿ ಎಲ್ಲ ಹಿಂದುಳಿದ, ದಲಿತ ಮಠಗಳಿಗೆ ಅನುದಾನ ನೀಡಿದ್ದು, ಕಾಗಿನೆಲೆ, ಮಾದಾರ ಪೀಠ, ಮಡಿವಾಳ ಸಹಿತ ಎಲ್ಲ ಸಮುದಾಯಕ್ಕೆ ನೀಡಲಾಗಿದೆ. ನಾನು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸವಾಲು ಎಸೆಯುತ್ತೇನೆ. ಹಿಂದುಳಿದ ವರ್ಗಗಳಿಗೆ ನೀವು ಎಷ್ಟು ಅನುದಾನ ನೀಡಿದ್ದೀರಿ. ನಾವು ಎಷ್ಟು ಅನುದಾನ ನೀಡಿದ್ದೇವೆ ಎಂಬುದಕ್ಕೆ ಬಹಿರಂಗ ಚರ್ಚೆಯಾಗಲಿ. ಒಂದು ಗುಲಗಂಜಿಯಷ್ಟು ಬಿಜೆಪಿಗಿಂತ ಹೆಚ್ಚು ಸಾಧನೆಯನ್ನು ಕಾಂಗ್ರೆಸ್ ಮಾಡಿದಲ್ಲಿ ಪಟ್ಟಿ ಬಿಡುಗಡೆ ಮಾಡಿ ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಸವಾಲು ಹಾಕಿದರು.

ಪ್ರಧಾನಿ ಮೋದಿ ಪರವಾಗಿ ಬುಲೆಟ್ ರಾಣಿ ರಾಜ ಲಕ್ಷ್ಮಿಯಿಂದ ದೇಶಾದ್ಯಂತ ಪ್ರಚಾರ!

ಮೋದಿಯವರ ಕ್ಯಾಬಿನೇಟ್ ನಲ್ಲಿ 29 ಹಿಂದುಳಿದ ವರ್ಗದ ನಾಯಕರನ್ನ ಸಚಿವರನ್ನಾಗಿ ಮಾಡಲಾಗಿದೆ. ನಮಗೆ ಜಾತಿ ಗೊತ್ತಿಲ್ಲ ಕಾಂಗ್ರೆಸ್‌ನವರು ಜಾತಿ ವಿಷ ಬೀಜ ಬಿತ್ತುತ್ತಿ ದ್ದಾರೆ. ಶ್ರೀ ರಾಮ ಮಂದಿರ ಉದ್ಘಾಟನೆಗೆ ದಲಿತ, ಹಿಂದುಳಿದವರನ್ನು ಆಹ್ವಾನಿಸಿಲ್ಲ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದು, ಎಲ್ಲ ದಲಿತ, ಹಿಂದುಳಿದ ಶ್ರೀಗಳು ಹೋಗಿ ಬಂದಿದ್ದಾರೆ ಶ್ರೀರಾಮ, ಶ್ರೀ ಕೃಷ್ಣ ಹಿಂದುಳಿದವರು ಎಂಬುದು ಅವರಿಗೆ ತಿಳಿದಿಲ್ಲ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ರಾಘವೇಂದ್ರ,ಮಾಜಿ ಸಚಿವ ಲಕ್ಷ್ಮಿನಾರಾಯಣ, ಹರತಾಳು ಹಾಲಪ್ಪ,ಮುಖಂಡ ಗುರುಮೂರ್ತಿ, ಎಚ್‌.ಟಿ ಬಳಿಗಾರ್, ಶಾರದಾ ಅಪ್ಪಾಜಿಗೌಡ ಜಿಲ್ಲಾಧ್ಯಕ್ಷ ಮೇಘರಾಜ್, ಡಾ.ಧನಂಜಯ ಸರ್ಜಿ, ತಲ್ಲೂರು ರಾಜು, ರಾಮಾನಾಯ್ಕ, ಗಾಯತ್ರಿದೇವಿ ಮತ್ತಿತರರು ಉಪಸ್ಥಿತರಿದ್ದರು.

ಮೋದಿ ಜಾತಿಯನ್ನು ಪ್ರಶ್ನಿಸುವ ರಾಹುಲ್‌ಗೆ ತನ್ನ ಜಾತಿ ಗೊತ್ತಾ?: ಪ್ರಧಾನಿ ಮೋದಿರವರ ಜಾತಿಯನ್ನು ಪ್ರಶ್ನಿಸುವ ಕಾಂಗ್ರೆಸ್‌ ಹಿಂದುಳಿದವರಿಗೆ ಏನು ಕೊಡುಗೆ ನೀಡಿದೆ ಹಿಂದುಳಿದವರನ್ನು ಮೊದಲು ಪ್ರಧಾನಿಯಾಗಿಸಿದ ಹೆಗ್ಗಳಿಕೆ ಬಿಜೆಪಿ ಯದ್ದು, ರಾಹುಲ್‌ ಗಾಂಧಿ ಪ್ರಧಾನಿ ಮೋದಿ ಹಿಂದುಳಿದವರಲ್ಲ ಎಂದು ಟೀಕಿಸಿದ್ದು, ನಾನು ಪ್ರಶ್ನಿಸುತ್ತೇನೆ ನಿಮ್ಮ ತಂದೆ ರಾಜೀವ್‌ ಗಾಂಧಿ ಹಿಂದೂ, ತಾಯಿ ಸೋನಿಯಾ ಕ್ರಿಶ್ಚಿಯನ್‌, ಅಜ್ಜಿ ಇಂದಿರಾ ಹಿಂದೂ, ಅಜ್ಜ ಮುತ್ತಜ್ಜ ಯಾವ ಜಾತಿ ಎಂಬುದು ನಿನಗೆ ಗೊತ್ತಿದೆಯಾ? ಎಂದ ಅವರು ನಿಮ್ಮ ಜಾತಿ ನಿಮಗೆ ಗೊತ್ತಿಲ್ಲದೆ ಮೋದಿ ಜಾತಿಯನ್ನು ಪ್ರಶ್ನಿಸುತ್ತೀರಾ? ನಿಮಗೆ ನಾಚಿಕೆ ಮರ್ಯಾದೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

Shivamogga: 5 ಹೊಸ ಬಸ್ ಸಂಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಿಶಾನೆ!

ರಾಘಣ್ಣ ನೊಬೆಲ್‌ಗೆ ಅರ್ಹರು: ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಅವಧಿಯಲ್ಲಿ ಕೇವಲ 1 ಲೋಕಸಭಾ ಸ್ಥಾನ ಕಾಂಗ್ರೆಸ್‌ ಗೆದ್ದಿದ್ದು, ಇದೀಗ ಮರಿಹುಲಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ. ಯಡಿಯೂರಪ್ಪ ಹಾಗೂ ದೇವೇಗೌಡರು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಹಳ್ಳಿ ಹಳ್ಳಿಯನ್ನು ಅಭಿವೃದ್ಧಿ ಪಡಿಸಿದ ಯಡಿಯೂರಪ್ಪ ಹಾಗೂ ರಾಘವೇಂದ್ರ ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಮೋದಿ ಪುನಃ ಪ್ರಧಾನಿಯಾಗಲು ರಾಘಣ್ಣ ಸಂಸದರಾಗಬೇಕು ಎಂದರು.

click me!