ಪಟ್ಟಣದಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಯೋಜನೆಯಡಿ 1ನೇ ಹಂತದಲ್ಲಿ 17.40 ಕೋಟಿ ರು. ನಂತರ 2ನೇ ಹಂತದಲ್ಲಿ 20.55 ಕೋಟಿ ರು. ಸೇರಿ ಒಟ್ಟು ಸುಮಾರು 37 ಕೋಟಿ ರು. ಸೇರಿ ಒಟ್ಟಾರೆಯಾಗಿ 47 ಕೋಟಿ ರು. ವೆಚ್ಚದಲ್ಲಿ ಸಮರ್ಪಕ ಕುಡಿಯುವ ನೀರಿನ ಸರಬರಾಜು ಕಾಮಗಾರಿ ಶೀಘ್ರವೇ ಪೂರ್ಣಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ (ಜ.02): ಪಟ್ಟಣದಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಯೋಜನೆಯಡಿ 1ನೇ ಹಂತದಲ್ಲಿ 17.40 ಕೋಟಿ ರು. ನಂತರ 2ನೇ ಹಂತದಲ್ಲಿ 20.55 ಕೋಟಿ ರು. ಸೇರಿ ಒಟ್ಟು ಸುಮಾರು 37 ಕೋಟಿ ರು. ಸೇರಿ ಒಟ್ಟಾರೆಯಾಗಿ 47 ಕೋಟಿ ರು. ವೆಚ್ಚದಲ್ಲಿ ಸಮರ್ಪಕ ಕುಡಿಯುವ ನೀರಿನ ಸರಬರಾಜು ಕಾಮಗಾರಿ ಶೀಘ್ರವೇ ಪೂರ್ಣಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಪಟ್ಟಣದ ನೀರು ಸರಬರಾಜು ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧ ಪಟ್ಟ ಸಹಾಯಕ ಇಂಜಿನಿಯರ್ ಪ್ರಕಾಶ್ ಸಜ್ಜನ್, ಮಧು, ಹಾಗೂ ಪುರಸಭೆ ಮುಖ್ಯಾಧಿಕಾರಿ ವೀರಭದ್ರಯ್ಯರೊಂದಿಗೆ ಚರ್ಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಟ್ಟಣಕ್ಕೆ ಹೊಂದಿರುವ ಮಲ್ಲದೇವರ ಕಟ್ಟೆಹೊರತುಪಡಿಸಿ ಪಟ್ಟಣದ ಉಳಿದೆಲ್ಲಾ ವಾರ್ಡ್‌ಗಳು ಸೇರಿ ಸುಮಾರು ಒಟ್ಟು 36ಕಿ.ಮೀ.ವ್ಯಾಪ್ತಿಯಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು ಈ ಯೋಜನೆಯಿಂದ ಪಟ್ಟಣದ ಸುಮಾರು 3,100 ಮನೆಗಳಿಗೆ ಸಮರ್ಪಕ ನೀರಿನ ಸೌಲಭ್ಯ ಒದಗಿಸಲಿದೆ ಎಂದರು. ಈ ಹಿಂದೆ 50ಎಚ್.ಪಿ ಮೋಟಾರ್ ಇತ್ತು ಇದೀಗ ಹೊಸದಾಗಿ 120 ಎಚ್.ಪಿ.2 ಮೋಟಾರ್ ಹಾಗೂ 60 ಎಚ್.ಪಿ.2 ಮೋಟಾರ್‌ಗಳ ಸಹಾಯದಿಂದ ನೀರು ಪೂರೈಸಲಾಗುತ್ತದೆ ಎಂದರು.
ಶಿರಾಡಿ ಘಾಟ್ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 1976 ಕೋಟಿ ಬಿಡ್ ಆಹ್ವಾನ: ನಳಿನ್ ಕಟೀಲ್‌ಗೆ ನಿತಿನ್ ಗಡ್ಕರಿ ಪತ್ರ
ಒಟ್ಟಾರೆಯಾಗಿ ಪಟ್ಟಣದಲ್ಲಿ ಪದವಿ ಕಾಲೇಜು, 3.75 ಕೋಟಿ, ಪ್ರವಾಸಿ ಮಂದಿರ 4 ಕೋಟಿ, ಯುಜಿಡಿ 60 ಕೋಟಿ, ರಸ್ತೆಗಳು 14 ಕೋಟಿ, ನಗರೋತ್ಥಾನ 11 ಕೋಟಿ, ರಸ್ತೆ ಲೈಟಿಇಂಗ್ 1.70 ಕೋಟಿ, ಉದ್ಯಾನವನ, ಶಾಲೆ ಆಸ್ಪತ್ರೆ,ವಿವಿಧ ಕಾಮಗಾರಿಗಳು ಸೇರಿ ಒಂದು ವರ್ಷದಲ್ಲಿ 125 ಕೋಟಿ ರುಪಾಯಿಯಷ್ಟುಅನುದಾನ ತರಲಾಗಿದೆ ಎಂದು ಮಾಹಿತಿ ನೀಡಿದರು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂಜಿನಿಯರ್ ಪ್ರಕಾಶ್ ಸಜ್ಜನ್, ಮಧು, ಪುರಸಭೆ ಮುಖ್ಯಾಧಿಕಾರಿ ಎಸ್.ಆರ್.ವೀರಭದ್ರಯ್ಯ, ಉಪಾಧ್ಯಕ್ಷೆ ರಂಚಿತಾ ಚನ್ನಪ್ಪವಡ್ಡಿ, ಮಾಜಿ ಅಧ್ಯಕ್ಷ ಬಾಬೂ ಹೋಬಳದಾರ್,ಕೆ.ವಿ.ಶ್ರೀಧರ್, ಸೇರಿ ಸದಸ್ಯರು, ಪುರಸಭೆ ಇಂಜಿಯರ್ ದೇವರಾಜ್,ಗುತ್ತಿಗೆದಾರ ಮಲ್ಲಿಕಾರ್ಜನ್ ಮುಖಂಡರು ಇತರರಿದ್ದರು.
ಜಕಣಾಚಾರಿಯವರ ಕಲೆ ವಿಶ್ವವೇ ಮೆಚ್ಚುವಂತದ್ದು: ಶಿಲೆಯಲ್ಲಿ ಕಲೆಯನ್ನು ಅರಳಿಸಿದ ಅಮರ ಶಿಲ್ಪಿ ಜಕಣಾಚಾರಿ ಅವರು ಶಿಲ್ಪಕಲೆಯಲ್ಲಿ ಅದ್ಭುತ ಸಾಧನೆ ಮಾಡಿ ಹೆಸರಿಗೆ ತಕ್ಕಂತೆ ಅಮರರಾಗಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಅಮರ ಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕಾಡುಗಲ್ಲಿಗೆ ಸುಂದರ ರೂಪ ಕೊಟ್ಟು ದೈವತ್ವ ನೀಡಿ ಮೂರ್ತಿಯಾಗಿ ಪರಿವರ್ತಿಸಿ ಜೀವಕಳೆ ತುಂಬಿ ನೋಡುಗರು ಅವುಗಳಿಗೆ ತಮಗರಿವಿಲ್ಲದೇ ಪ್ರಣಾಮಗಳ ಅರ್ಪಿಸುವಂತೆ ಮಾಡಿದ ಜಕಣಾಚಾರಿ ಅವರ ಕಲೆ ವಿಶ್ವ ಮೆಚ್ಚುವಂತದ್ದು ಎಂದು ಬಣ್ಣಿಸಿದರು.
ಬಿಜೆಪಿ ಬಗ್ಗೆ ಮಾತನಾಡುವದಕ್ಕಿಂತ ಡಿಕೆಶಿ ತಮ್ಮ ಪಕ್ಷ ಸರಿಮಾಡಿಕೊಳ್ಳಲಿ: ಸಚಿವ ನಾಗೇಶ್
ಶಿಲ್ಪಿ ಜಕಣಾಚಾರಿ ಅವರ ಹೆಸರಿನ ಮೊದಲು ಅಮರ ಎಂದು ನಾಮಾಂಕಿತಗೊಂಡಿದ್ದು ಅವರ ಕಲಾ ಸಿರಿವಂತಿಕೆಗೆ ಹಿಡಿದ ಕೈಗನ್ನಡಿ. ಬೇಲೂರು, ಹಳೆಬೀಡು ಸೇರಿ ಅನೇಕ ಶಿಲ್ಪ ದೇವಾಲಯಗಳನ್ನು ವೀಕ್ಷಿಸಿದಾಗ ಅದ್ಭುತ ಕಲಾ ಪ್ರಕಾರಗಳು ಜಗತ್ತಿಗೆ ತೆರೆದುಕೊಳ್ಳುತ್ತವೆ ಎಂದು ಹೇಳಿದರು. ಅಮರ ಶಿಲ್ಪಿ ಜಕಣಾಚಾರಿ ಅವರ ಎಲ್ಲಾ ದೇವಸ್ಥಾನಗಳನ್ನು ಪರಿಶೀಲಿಸಿದಾಗ ಮನುಷ್ಯರ ಕೈಯಲ್ಲಿ ಸಾಧಿಸಲಾಗದ ಕಾರ್ಯಗಳನ್ನು ಜಕಣಾಚಾರಿಯವರು ಸಾಧಿಸಿ ತೋರಿಸಿದ್ದಾರೆ. ಅವರ ಕೆಲಸ ಅಳಿಸಲಾಗದ ಕಲಾಪ್ರಕಾರಗಳಲ್ಲಿ ಶಾಶ್ವತವಾಗಿ ಉಳಿದಿವೆ ಎಂದರು.