ವಿಪಕ್ಷ ಉಪನಾಯಕ ಯು.ಟಿ.ಖಾದರ್ ಗೆ ರಾಹುಲ್ ಗಾಂಧಿ ಪಿಎ ಹೆಸರಲ್ಲಿ ಯಾಮಾರಿಸಲು ಯತ್ನಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದ್ದು, ಈ ಬಗ್ಗೆ ಯು.ಟಿ.ಖಾದರ್ ಮಂಗಳೂರು ಕಮಿಷನರ್ ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳೂರು ಸೈಬರ್ ಕ್ರೈಂ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಜ.2): ವಿಪಕ್ಷ ಉಪನಾಯಕ ಯು.ಟಿ.ಖಾದರ್ ಗೆ ರಾಹುಲ್ ಗಾಂಧಿ ಪಿಎ ಹೆಸರಲ್ಲಿ ಯಾಮಾರಿಸಲು ಯತ್ನಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದ್ದು, ಈ ಬಗ್ಗೆ ಯು.ಟಿ.ಖಾದರ್ ಮಂಗಳೂರು ಕಮಿಷನರ್ ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳೂರು ಸೈಬರ್ ಕ್ರೈಂ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ವಿಪಕ್ಷ ಉಪನಾಯಕ ಖಾದರ್ ಗೆ ರಾಹುಲ್ ಗಾಂಧಿ ಪಿಎ ಹೆಸರಲ್ಲಿ ನಕಲಿ ಕರೆ ಬಂದಿದೆ. ಇಂದು ಮಧ್ಯಾಹ್ನ ಹೊತ್ತಿಗೆ ಎರಡು ಬಾರಿ ಕರೆ ಬಂದಿದ್ದು, ಸಭೆಯಲ್ಲಿ ಇದ್ದ ಕಾರಣ ಯು.ಟಿ.ಖಾದರ್ ಕರೆ ಸ್ವೀಕರಿಸಿಲ್ಲ. 8146006626 ಸಂಖ್ಯೆಯಿಂದ ಖಾದರ್ ನಂಬರ್ ಗೆ ಕರೆ ಬಂದಿದ್ದು, ಬಳಿಕ ಅದೇ ಸಂಖ್ಯೆಯಿಂದ ಖಾದರ್ ನಂಬರ್ ಗೆ ಸಂದೇಶ ಬಂದಿದೆ.
Chikkamagaluru: 20 ವರ್ಷಗಳ ಬಳಿಕ ಸಿ.ಟಿ.ರವಿ ವಿರುದ್ಧ ಬಂಡಾಯದ ಕಹಳೆ
'Gud afternoon this side kanishka Singh pa to Rahul Gandhi ji cl me' ಎಂದು ಮೆಸೇಜ್ ಕಳಿಸಲಾಗಿದೆ. ಟ್ರೂ ಕಾಲರ್ ನಲ್ಲಿ ನಂಬರ್ ಹುಡುಕಿದಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೆಸರಲ್ಲಿ ನಂಬರ್ ಸೇವ್ ಆಗಿರುವುದು ಬೆಳಕಿಗೆ ಬಂದಿದ್ದು, ಬಳಿಕ ಈ ಬಗ್ಗೆ ಪರಿಶೀಲನೆ ವೇಳೆ ನಕಲಿ ಕರೆ ಎನ್ನುವುದು ಗೊತ್ತಾಗಿದೆ.
ಬೆಳಗಾವಿ ಕುಕ್ಕರ್ ಒಡೆದ್ರೆ ಡಿಕೆಶಿ ಮನೆ ಒಡೆಯುತ್ತದೆ: ನಳಿನ್ ಕುಮಾರ್ ಕಟೀಲ್ ವ್ಯಂಗ್ಯ
ಈ ಬಗ್ಗೆ ತನಿಖೆ ನಡೆಸಿ, ಕರೆ ಮಾಡಿದವರು ಯಾರು, ಯಾಕಾಗಿ ಕರೆ ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು ಎಂದು ಯು.ಟಿ. ಖಾದರ್ ಅವರು ಪೊಲೀಸ್ ಕಮಿಷನರ್ ಶಶಿಕುಮಾರ್‌ಗೆ ದೂರು ನೀಡಿದ್ದಾರೆ. ಮೇಲ್ನೋಟಕ್ಕೆ ನಕಲಿ ಹೆಸರಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಡೆಯಿಂದ ಎಂದು ಹೇಳಿ ಕರೆ ಮಾಡಿ, ಶಾಸಕರನ್ನು ಯಾಮಾರಿಸಲು ಯತ್ನಿಸಲು ನಡೆಸಿದ ಕೃತ್ಯ ಎಂದು ಹೇಳಲಾಗುತ್ತಿದೆ.