Akshayaaahara: ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ?

By Kannadaprabha News  |  First Published Feb 3, 2023, 9:52 AM IST

2012 ರಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಅಕ್ಷಯ ಆಹಾರ ¶ೌಂಡೇಷನ್‌ ಈಗ ದಶಮಾನೋತ್ಸವ ಸಂಭ್ರಮದಲ್ಲಿದೆ. ಕಳೆದ ಹತ್ತು ವರ್ಷಗ್ಳಳಲ್ಲಿ ಸುಮಾರು 60 ಲಕ್ಷ ಮಂದಿಗೆ ಆಹಾರ ಪೂರೈಸಿದ್ದು, ಸರ್ಕಾರ, ಸಂಘ, ಸಂಸ್ಥೆಗಳ ನೆರವಿನಿಂದ ‘ಹಸಿವು ಮುಕ್ತ ಮೈಸೂರು’ ಗುರಿ ಹೊಂದಿದೆ.


 

ಅಂಶಿ ಪ್ರಸನ್ನಕುಮಾರ್‌

Tap to resize

Latest Videos

ಮೈಸೂರು (ಫೆ.3) : 2012 ರಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಅಕ್ಷಯ ಆಹಾರ ¶ೌಂಡೇಷನ್‌ ಈಗ ದಶಮಾನೋತ್ಸವ ಸಂಭ್ರಮದಲ್ಲಿದೆ. ಕಳೆದ ಹತ್ತು ವರ್ಷಗ್ಳಳಲ್ಲಿ ಸುಮಾರು 60 ಲಕ್ಷ ಮಂದಿಗೆ ಆಹಾರ ಪೂರೈಸಿದ್ದು, ಸರ್ಕಾರ, ಸಂಘ, ಸಂಸ್ಥೆಗಳ ನೆರವಿನಿಂದ ‘ಹಸಿವು ಮುಕ್ತ ಮೈಸೂರು’ ಗುರಿ ಹೊಂದಿದೆ.

ಮದುವೆ, ಹುಟ್ಟುಹಬ್ಬ, ನಿಶ್ಚಿತಾರ್ಥ, ನಾಮಕರಣ, ಸತ್ಯನಾರಾಯಣ ಪೂಜೆ, ಗೃಹ ಪ್ರವೇಶ, ಸರ್ಕಾರಿ, ಖಾಸಗಿ ಸಭೆ- ಸಮಾರಂಭಗಳಲ್ಲಿ ಆಹಾರ ಅಪವ್ಯಯವಾಗುವುದನ್ನು ಕಂಡು ಡಾ.ಎಚ್‌.ಆರ್‌. ರಾಜೇಂದ ಮತ್ತು ಎಂ.ಕೆ. ಶ್ವೇತ್ರಾ ದಂಪತಿ 2012 ರಲ್ಲಿ ಸಣ್ಣ ಪ್ರಮಾಣದಲ್ಲಿ ಆಹಾರ ಸಂಗ್ರಹಿಸಿ, ನಿರಾಶ್ರಿತರಿಗೆ ವಿತರಿಸುವ ಕಾಯಕ ಆರಂಭಿಸಿದರು.

ರಾಜ್ಯದಲ್ಲಿ ಮತ್ತೆ ನಮೋ ಮೇನಿಯಾ ಶುರು: ಈ ತಿಂಗಳು ಮೂರು ಬಾರಿ ಪ್ರಧಾನಿ ಆಗಮನ

ಈಗ ಕೆ.ಆರ್‌. ಆಸ್ಪತ್ರೆ ವೃತ್ತ, ಸಿದ್ದಾರ್ಥನಗರ, ಕುವೆಂಪುನಗರ, ಶ್ರೀರಾಂಪುರ ಹಾಗೂ ಜೆ.ಪಿ. ನಗರದಲ್ಲಿ -ಕಿಯಾಸ್‌್ಕಗಳಿವೆ. ಅಲ್ಲಿಗೆ ದಾನಿಗಳು ನೀಡುವ ಆಹಾರವನ್ನು ಸ್ವಯಂಸೇವಕರು ಸ್ವೀಕರಿಸುತ್ತಾರೆ ಅದೇ ರೀತಿ ಅಲ್ಲಿಗೆ ಬರುವ ನಿರಾಶ್ರಿತರಿಗೆ ಪೂರೈಸುತ್ತಾರೆ. ಇದಲ್ಲದೇ ರಾಜೀವ್‌ ಆವಾಸ್‌ ಯೋಜನೆಯ ಕೊಳಗೇರಿಗಳು, ಅನಾಥಾಶ್ರಮ, ವೃದ್ಧಾಶ್ರಮ, ರೈಲ್ವೆ ನಿಲ್ದಾಣ ಮೊದಲಾದ ಕಡೆ ತೆರಳಿ, ನಿರಾಶ್ರಿತರು, ನಿರ್ಗತಿಕರು, ಅಲೆಮಾರಿಗಳಿಗೆ ತಲುಪಿಸುತ್ತಾರೆ.

ಮೈಸೂರು ನಗರ ಮಾತ್ರವಲ್ಲದೇ ಮಂಡ್ಯ, ಕೆ.ಆರ್‌. ಪೇಟೆ, ನಂಜನಗೂಡು, ಹುಣಸೂರು, ಕೆ.ಆರ್‌. ನಗರ ಮತ್ತಿತರ ಕಡೆಗಳಿಂದಲೂ ಪಲಾವ್‌, ಅನ್ನ, ಸಾಂಬರ್‌, ಮೊಸರುಬಜ್ಜಿ, ಸಿಹಿ ತಿಂಡಿಗಳು ಸೇರಿದಂತೆ ಉಳಿದಿರುವ ಆಹಾರವನ್ನು ಕಿಯಾಸ್‌್ಕಗಳಿಗೆ ತಂದುಕೊಡಲಾಗುತ್ತದೆ. ಕೆಲವೊಮ್ಮೆ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಿಂದಲೂ ಕರೆ ಬರುವುದುಂಟು. ಸ್ಥಳೀಯವಾಗಿ ಅಲ್ಲಿಯೇ ವಿತರಿಸಿ ಎಂದು ಮನವಿ ಮಾಡುತ್ತೇವೆ ಎನ್ನುತ್ತಾರೆ ರಾಜೇಂದ್ರ.

ನಗರದ ಇತರೆ ಕಿಯಾಸ್‌್ಕಗಳ ಬಳಿ ಊಟಕ್ಕೆ ಬರುವವರ ಸಂಖ್ಯೆ ನೂರರ ಅಸುಪಾಸಿನಲ್ಲಿದ್ದರೆ ಕೆ.ಆರ್‌. ಆಸ್ಪತ್ರೆ ಕಿಯಾಸ್‌್ಕಗೆ ಬರುವವರ ಸಂಖ್ಯೆ ಒಂದು ಸಾವಿರ ದಾಟುತ್ತದೆ. ಕೆಲವೊಮ್ಮೆ ಎರಡು ಸಾವಿರ ಕೂಡ ಆಗುತ್ತದೆ. ಪಕ್ಕದಲ್ಲಿಯೇ ಕೆ.ಆರ್‌. ಆಸ್ಪತ್ರೆ, ಚಲುವಾಂಬ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ, ಬಸ್‌ ಹಾಗೂ ರೈಲು ನಿಲ್ದಾಣ ಇರುವುದು ಇದಕ್ಕೆ ಕಾರಣ.

ಹಿನ್ನಲೆ

ಸಿದ್ಧಾರ್ಥನಗರದಲ್ಲಿರುವ ಪ್ರಾದೇಶಿಕ ಪ್ರಾಕೃತಿಕ ವಸ್ತು ಸಂಗ್ರಹಾಲಯದ (ಆರ್‌ಎಂಎನ್‌ಎಚ್‌) ನೌಕರ ಎಚ್‌.ಆರ್‌. ರಾಜೇಂದ್ರ ಮತ್ತು ಅವರ ಪತ್ನಿ ಶ್ವೇತಾ ಅವರು ಮೊದಲ ಪರಿವರ್ತನ ಸಂಸ್ಥೆ ನಡೆಸುತ್ತಿದ್ದರು. ರಾಜೇಂದ್ರ ಅವರು ಮದುವೆಯೊಂದಕ್ಕೆ ಹೋಗಿದ್ದರು. 1,500 ಮಂದಿಗೆ ಆಹಾರ ಸಿದ್ಧವಾಗಿತ್ತು. ಹೊರಗೆ ಧೋ... ಎಂದು ಜೋರುಮಳೆ. ಹೀಗಾಗಿ ಬಂದವರು ಸಂಖ್ಯೆ 200 ದಾಟಿಲ್ಲ ಎಂಬುದು ಕೈತೊಳೆಯಲು ಹೋದಾಗ ಅಡುಗೆ ಭಟ್ಟರನ್ನು ವಿಚಾರಿಸಿದಾಗ ಗೊತ್ತಾಯಿತು.

ಅಲ್ಲಿ ಆಹಾರ ಪದಾರ್ಥ ನಷ್ಟವಾಗುತ್ತಿರುವುದನ್ನು ಗಮನಿಸಿದರು. ಅಲ್ಲಿಂದ ಮನೆಗೆ ವಾಪಸಾಗುತ್ತಿದ್ದಾಗ ಕಲ್ಯಾಣ ಮಂಟಪದ ಬಳಿಯೇ ಇದ್ದ ಕಸದ ತೊಟ್ಟಿಸುತ್ತಮುತ್ತ ಏಳೆಂಟು ಮಕ್ಕಳು ಕುಳಿತು, ಅಲ್ಲಿ ಎಸೆದಿದ್ದ ಎಂಜಲೆಲೆಯಲ್ಲಿದ್ದ ಅನ್ನವನ್ನು ತಿನ್ನುತ್ತಿದ್ದರು. ಆಗ ರಾಜೇಂದ್ರ ಅವರ ಕರಳು ಚುರುಕ್‌... ಎಂದಿತು. ಇದಕ್ಕೆ ಏನಾದರೂ ಪರಿಹಾರ ಹುಡುಕಬೇಕು ಎಂದು ಮನಸ್ಸಿನಲ್ಲಿಯೇ ಲೆಕ್ಕ ಹಾಕಿ, ಪತ್ನಿ ಶ್ವೇತಾ ಅವರ ಬಳಿ ಪ್ರಸ್ತಾಪಿಸಿದರು. ಅವರು ಕೂಡ ಸಂತೋಷದಿಂದ ಒಪ್ಪಿ, ಈ ಕಾರ್ಯಕ್ಕೆ ಸಾಥ್‌ ನೀಡುತ್ತಾ ಬಂದಿದ್ದಾರೆ.

ಈ ದಂಪತಿ ನಗರದಲ್ಲಿರುವ ಎಲ್ಲಾ ಕಲ್ಯಾಣ ಮಂಟಪಗಳು, ಹುಟ್ಟುಹಬ್ಬ ಮತ್ತಿತರ ಕಾರ್ಯಕ್ರಮಗಳು ನಡೆಸುವ ಸಭಾಂಗಣಗಳ ಪಟ್ಟಿಮಾಡಿದರು. ಅದರ ಜೊತೆಗೆ ನಗರದಲ್ಲಿರುವ 18 ಅನಾಥಾಶ್ರಮಗಳು, 77 ಕೊಳಗೇರಿಗಳ ಪಟ್ಟಿಮಾಡಿದರು. ಅವರೆಲ್ಲರ ಸಂಪರ್ಕ ದೂರವಾಣಿ ಪಡೆದುಕೊಂಡರು. ‘ಆಹಾರ ಉಳಿದರೆ ಕಸದತೊಟ್ಟಿಗೆ ಸುರಿಯಬೇಡಿ, ಬದಲಿಗೆ ಫೋನ್‌ ಮಾಡಿದರೆ ಬಂದು ತೆಗೆದುಕೊಂಡು ಹೋಗುತ್ತೇವೆ’ ಎಂದು ತಿಳಿಸಿದರು. ಅದೇ ರೀತಿ ಅನಾಥಾಶ್ರಮಗಳು, ಕೊಳಗೇರಿಯವರಿಗೂ ಮಾಹಿತಿ ನೀಡಿ, ‘ಆಹಾರ ಉಳಿದರೆ ನಿಮಗೆ ಮುಂಚಿತವಾಗಿ ತಿಳಿಸಿ, ತಂದು ತಲುಪಿಸುತ್ತೇವೆ’ ಎಂದರು. ಯಾವುದೇ ಜಾತಿ, ಧರ್ಮ ತಾರತವ್ಯವಿಲ್ಲದೇ ಪ್ರತಿದಿನ ಕೆಲಸ ಮಾಡತೊಡಗಿದರು. ಎರಡೂ ಕಡೆಗಳಿಂದಲೂ ಉತ್ತಮ ಸ್ಪಂದನೆ ಸಿಕ್ಕಿತು.

ಹೆಸರು ಬದಲು

ಈ ದಂಪತಿ ಮಾಡುತ್ತಿರುವ ಕಾರ್ಯವನ್ನು ಗಮನಿಸಿದ ಹಲವರು, ಸಂಸ್ಥೆಗೆ ‘ಪರಿವರ್ತನ’ ಹೆಸರು ಹೊಂದುವುದಿಲ್ಲ, ಬದಲಿಗೆ ‘ಅಕ್ಷಯ ಆಹಾರ ಜೋಳಿಗೆ ಅಥವಾ ¶ೌಂಡೇಷನ್‌’ ಎಂಬ ಹೆಸರಿಡಿ ಎಂದು ಸಲಹೆ ಮಾಡಿದರು. ಹೀಗಾಗಿ ‘ಪರಿವರ್ತನ’ ಸಂಸ್ಥೆಯ ಹೆಸರು ‘ಅಕ್ಷಯ ಆಹಾರ ಜೋಳಿಗೆ’ ಎಂದು ಬದಲಾಯಿತು.

ಈ ಕಾರ್ಯಕ್ರಮಕ್ಕೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಪ್ರತಿನಿತ್ಯ ನೂರಾರು ಮಂದಿಯ ಹಸಿವನ್ನು ತಣಿಸುತ್ತಿರುವ ತೃಪ್ತಿ ಇದೆ ಎನ್ನುತ್ತಾರೆ ರಾಜೇಂದ್ರ.

ಇವರ ಆಹಾರ ಪೂರೈಕೆ ಕೇವಲ ಅನಾಥಾಲಯಗಳು, ಕೊಳಗೇರಿಗಳಿಗೆ ಸೀಮಿತವಾಗಿಲ್ಲ. ರೈಲ್ವೆ ನಿಲ್ದಾಣಕ್ಕೂ ರಾತ್ರಿ ವೇಳೆ ಹೋಗುತ್ತಾರೆ. ಅಲ್ಲಿ ಕಲ್ಲು ಬೆಂಚಿನ ಮೇಲೆ ಮಲಗಿರುವರನ್ನು ಎಬ್ಬಿಸಿ, ಊಟ ನೀಡುತ್ತಾರೆ. ಮೊದಮೊದಲು ಆಟೋರಿಕ್ಷಾದಲ್ಲಿ ತೆಗೆದುಕೊಂಡು ಹೋಗಿ ತಲುಪಿಸುತ್ತಿದ್ದರು. ಇವರ ನಿಸ್ವಾರ್ಥ ಸೇವೆ ಗಮನಿಸಿದ ದಾನಿಗಳು ವಾಹನ ಕೊಡಿಸಿದ್ದಾರೆ. ಇವರ ಬಳಿ ಪಾತ್ರೆಗಳಿವೆ. ಎಷ್ಟುಆಹಾರ ಉಳಿದಿದೆ ಎಂಬುದನ್ನು ತಿಳಿದು, ಅದು ಯಾವ ಅನಾಥಾಲಯಕ್ಕೆ ಅಥವಾ ಕೊಳಗೇರಿ ನಿವಾಸಿಗಳಿಗೆ ನೀಡಬಹುದು ಎಂಬುದನ್ನು ಗಮನಿಸಿ, ಮುಂಚಿತವಾಗಿ ತಿಳಿಸಿ, ಅಲ್ಲಿಗೆ ತಲುಪಿಸುತ್ತಾರೆ.

ಅಸಹಾಯಕರು, ದೀನರಿಗೆ ಆಹಾರ, ನೀರು ಮತ್ತು ಸಾರ್ವಜನಿಕ ಸಹಾನುಭೂತಿ ಸಿಗಬೇಕು. ಹಸಿವುಮುಕ್ತ, ಆರೋಗ್ಯಕರ, ಉತ್ಸಾಹ ತೃಪ್ತ ಸಮಾಜ ನಿರ್ಮಾಣ ಆಗಬೇಕು ಎಂಬುದು ರಾಜೇಂದ್ರ ಅವರ ಕಳಕಳಿ.

ನನ್ನ ಸೇವೆಯನ್ನು ಗಮನಿಸಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ, ಖಾಸಗಿ ಟಿವಿ ವಾಹಿನಿಗಳ ಪ್ರಶಸ್ತಿ ಸಿಕ್ಕಿದೆ. ಆದರೆ ಇದೆಲ್ಲಕ್ಕಿಂತ ಮಿಗಿಲಾಗಿ ನನಗೆ ನಗರಪಾಲಿಕೆ, ಎಂಡಿಎ, ಜಿಲ್ಲಾಡಳಿತ, ರೋಟರಿ, ಲಯನ್ಸ್‌ನಂತಹ ಸಂಘ- ಸಂಸ್ತೆಗಗಳು, ಬೆಂಬಲ ಸಿಗಬೇಕಾಗಿದೆ. ಖಾಸಗಿ ಕೈಗಾರಿಕೆಗಳವರು ಸಿಎಸ್‌ಆರ್‌ ನಿಧಿಯಲ್ಲಿ ಕೂಡ ನೆರವಾಗಬಹುದು. ನಮಗೆ ನೆರವಾದಲ್ಲಿ ಆದಾಯ ತೆರಿಗೆಯಿಂದ ವಿನಾಯ್ತಿಯ ಸೌಲಭ್ಯವೂ ಸಿಗುತ್ತದೆ.

ಕೇಂದ್ರ ಸರ್ಕಾರವು ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸವು ರೂಪಿಸಿವು ಯೋಜನೆಯನ್ನು ನಗರಪಾಲಿಕೆ ಜಾರಿ ಮಾಡುತ್ತದೆ. ಅದರ ಬದಲು ನನಗೆ ನೆರವು ನೀಡಿದಲ್ಲಿ ನಗರದ ಎಲ್ಲಾ ನಿರಾಶ್ರಿತರಿಗೆ ಆಹಾರ ಪೂರೈಸುವ ಕೆಲಸ ಮಾಡಿ, ನಗರವನ್ನು ಹಸಿವು ಮುಕ್ತ ಮಾಡುತ್ತೇನೆ.

‘ಅಕ್ಕಿ ಉಳಿದರೆ ನಾಳೆ ಅನ್ನ ಮಾಡಬಹುದು. ಆದರೆ ಅನ್ನ ಉಳಿದರೆ ನಾಳೆಗೆ ಬಳಕೆ ಮಾಡಲಾಗದು. ಅದು ಉತ್ತಮ ಸ್ಥಿತಿಯಲ್ಲಿದ್ದಾಗಲೇ ಅಗತ್ಯವಿರುವವರಿಗೆ ನೀಡಬೇಕು. ಇಲ್ಲದಿದ್ದಲ್ಲಿ ಕಸದತೊಟ್ಟಿಸೇರುತ್ತದೆ’ ಎನ್ನುವ ಅವರು, ‘ಅನ್ನದೇವತೆಯನ್ನು ಕಸದ ರಾಶಿ ಮಾಡಬೇಡಿ’, ‘ಚೆಲ್ಲಿಬೇಡಿರಣ್ಣ ಚಿನ್ನಕ್ಕಿಂತಲೂ ಹೆಚ್ಚು ಈ ಅನ’್ನ, ‘ನಮಗೆ ತಿನ್ನುವ ಹಕ್ಕಿದೆ, ಬೀಸಾಡುವ ಹಕ್ಕಿಲ್ಲ’, ‘ಅನ್ನದಾನಂ ಮಹಾದಾನಂ’, ‘ಅಕ್ಕಿ ಉಳಿದರೆ ಇಂದು ನಾಳೆ ಬಳಸಬಹುದು, ಅನ್ನ ಉಳಿದರೇ ನಾಶವೇ ಸರಿ‘, ‘ಆಹಾರ ಅಪವ್ಯಯ ಆಗದಿರಲಿ’ ಎಂಬ ಘೋಷಣೆಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಆಹಾರ ಪದಾರ್ಥ ಉಳಿದರೆ ಎಸೆಯಬೇಡಿ ನಮಗೆ ಕೊಡಿ ಎನ್ನುತ್ತಾರೆ ರಾಜೇಂದ್ರ. ಸಂಪರ್ಕ ಮೊಬೈಲ್‌ 91489 87375

 

ಸಂಸದರ ನಿಧಿ ಬಳಕೆ: ಈ ಬಾರಿಯೂ ಪ್ರತಾಪ್‌ ಸಿಂಹ ಫಸ್ಟ್‌, ಸಂಸದ ಬಚ್ಚೇಗೌಡ ದ್ವಿತೀಯ

ನನ್ನ ಬಳಿ ಈಗ ಮೂರು ವಾಹನಗಳಿವೆ. ಎಂಟು ಸಿಬ್ಬಂದಿ ಇದ್ದಾರೆ. ಉಳಿದ ಆಹಾರವನ್ನು ಯಾರೋ ನೀಡಬಹುದು. ಆದರೆ ಅದನ್ನು ಸಂಗ್ರಹಿಸಿ, ವಿತರಿಸುವ ಕೆಲಸಕ್ಕೆ ಯಾರೂ ನೆರವಾಗುವುದಿಲ್ಲ. ನನ್ನ ಸಂಬಳದ ಹಣದಿಂದ ವಾಹನಗಳಿಗೆ ಇಂಧನ, ಸಿಬ್ಬಂದಿಗೆ ಕೈಲಾದಷ್ಟುಗೌರವಧನ ನೀಡುತ್ತಿದ್ದೇನೆ. ಹೀಗಾಗಿ ಆಸಕ್ತರು ಕೈಜೋಡಿಸಿದರೆ ಮತ್ತಷ್ಟ ಸ್ಫೂರ್ತಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.

- ಡಾ.ಎಚ್‌.ಆರ್‌. ರಾಜೇಂದ್ರ

click me!