ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!

ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!

Published : Apr 04, 2026, 01:52 PM IST

ಹುಬ್ಬಳ್ಳಿಯಲ್ಲಿ ಜಿಮ್ ಓನರ್ ಸಮೀರ್ ಎಂಬಾತ ಹಿಂದೂ ಯುವತಿಯನ್ನು ಪ್ರೀತಿಯ ನಾಟಕವಾಡಿ ಮೋಸಗೊಳಿಸಿದ್ದಾನೆ. ಆಕೆಗೆ ಮತ್ತು ಬರುವ ಔಷಧಿ ನೀಡಿ, ದೌರ್ಜನ್ಯ ಎಸಗಿ, ಅದನ್ನು ಚಿತ್ರೀಕರಿಸಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದನು. ಈ ವಿಷಯ ತಿಳಿದ ಹಿಂದೂ ಸಂಘಟನೆಗಳು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಚೋಟ ಮುಂಬೈ ಹುಬ್ಬಳ್ಳಿಯಲ್ಲಿ ಏನಾದ್ರೂ ಸುದ್ದಿಯಾಗುತ್ತೆ.. ಅದರಲ್ಲೂ ಕೋಮು ಸಂಘರ್ಷದ ವಿಷಯ ಬಂದ್ರೆ ಹೊತ್ತಿ ಉರಿಯೋದಕ್ಕೆ ಶುರುವಾಗಿಬಿಡುತ್ತೆ.. ಇವತ್ತು ಇದೇ ಹುಬ್ಬಳ್ಳಿ ಒಂದು ಲವ್​ ಜಿಹಾದ್​​ ಕೇಸ್​​​ನಲ್ಲಿ ಮತ್ತೆ ಸುದ್ದಿಯಾಗಿದೆ.. ಜಿಮ್​ಗೆ ಬಂದ ಹಿಂದೂ ಯುವತಿಯನ್ನ ಟಾರ್ಗೆಟ್​​ ಮಾಡಿಕೊಂಡ ಜಿಮ್​​​ ಓನರ್​​​ ಒಬ್ಬ ಆಕೆಯನ್ನ ಪ್ರೀತಿಯಂಬ ಖೆಡ್ಡಾಗೆ ಬೀಳಿಸಿಕೊಂಡು ನಂತರ ಆಕೆಯನ್ನ ಬ್ಲ್ಯಾಕ್​ಮೇಲ್​​​ ಮಾಡೋದಕ್ಕೆ ಹೊರಟಿದ್ದಾನೆ.. ಆದ್ರೆ ಇವತ್ತು ಹಿಂದೂ ಸಂಘಟನೆಗಳು ಅವನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.. ಆದ್ರೆ ಇಷ್ಟಕ್ಕೆ ಎಲ್ಲಾ ಮುಗಿಯಲಿಲ್ಲ.. ಇಲ್ಲಿಂದಲೇ ಒಂದು ಹೈಡ್ರಾಮಾ ಶುರುವಾಗಿದ್ದು.. ಅಷ್ಟಕ್ಕೂ ಆ ಜಿಮ್​​​ ಓನರ್​​ ಯಾರು..? ಅವನಿಂದ ಮೋಸ ಹೋದ ಹುಡುಗಿ ಯಾರು..? ಹುಬ್ಬಳ್ಳಿ ಇವತ್ತು ಹೊತ್ತಿ ಉರಿದ್ದಿದ್ದೇಕೆ ಅನ್ನೋದನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್​​.ಐ.ಆರ್.. 

ಆಕೆ ತನ್ನ ಪಾಡಿಗೆ ಕಾಲೇಜು.. ಮನೆ ಅಂತ ಇದ್ದವಳು.. ಮೂರು ವರ್ಷದ ಹಿಂದೆ ಜಿಮ್​ಗೆ ಸೇರಬೇಕು ಅನ್ನೋ ಯೋಚನೆ ಮಾಡ್ತಾಳೆ.. ಆಗ ಈ ಸಮೀರ್​ನ ಅಕ್ಕ ತೈಸಿಮ್​​ನ ಪರಿಚಯವಾಗುತ್ತೆ.. ಅಕ್ಕ ಸಮೀರ್​​ನನ್ನ ಪರಿಚಯ ಮಾಡಿಸುತ್ತಾಳೆ.. ಇಬ್ಬರೂ ನಂತರ ಸ್ನೇಹಿತರಾಗ್ತಾರೆ.. ಸಮೀರ್​ ಆಕೆಯ ಜೊತೆ ಪ್ರೀತಿಯ ನಾಟಕವಾಡ್ತಾನೆ.. ನಂತರ ಒಂದು ದಿನ ಮನೆಗೆ ಕರೆಸಿಕೊಂಡು ಮತ್ತು ಬರೋ ಔಷಧಿ ಕೊಟ್ಟು ಮಾಡಬಾರದನ್ನ ಮಾಡಿಬಿಡ್ತಾನೆ.. ಅಷ್ಟೇ ಅಲ್ಲ ಅದನ್ನ ಚಿತ್ರಿಸಿಕೊಳ್ತಾನೆ ಕೂಡ.. ಆದ್ರೆ ಇದೆಲ್ಲಾ ಆಗಿ ಸ್ವಲ್ಪ ದಿನಕ್ಕೇ ಆ ನೀಚ ಖುಷಿಗೆ ಬ್ಲ್ಯಾಕ್​​​ಮೇಲ್​ ಮಾಡೋದಕ್ಕೆ ಶುರು ಮಾಡ್ತಾನೆ.. ಆತನಿಂದ ಆ ಹೆಣ್ಣುಮಗಳು ನರಕ ನೋಡ್ತಾಳೆ.. ಈ ವಿಷ್ಯಾ ಅದೇಗೋ ಹಿಂದೂ ಸಂಘಟನೆಯವರಿಗೆ ಗೊತ್ತಾಗಿ ಸೀದಾ ಸಮೀರ್​ ಮನೆಯ ಬಳಿ ಹೋಗ್ತಾರೆ.

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more