Gadag: ಮೈ ಮೇಲೆ ಮನೆ ಛಾವಣಿ ಕುಸಿತ: ನನಗೇನಾದ್ರೂ ಪರವಾಗಿಲ್ಲ ಮಕ್ಕಳ ರಕ್ಷಣೆ ಮಾಡಿ ಎಂದ ತಂದೆ!

By Govindaraj S  |  First Published May 20, 2022, 8:17 PM IST

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ‌ ಮನೆ ಅವಶೇಷಗಳ ಅಡಿ ಸಿಲುಕಿದ್ದ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರನ್ನ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಕಳೆದ ಎರಡು ದಿನದಿಂದ ಜಿಲ್ಲೆಯಾದ್ಯಂತ ಮಹಾ ಮಳೆ ಅಬ್ಬರಿಸ್ತಿದೆ. ಇದ್ರಿಂದಾಗಿ ಅನಕ ಮನೆಗಳು ಕುಸಿದಿವೆ. 


ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ

ಗದಗ (ಮೇ.20): ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ‌ ಮನೆ ಅವಶೇಷಗಳ ಅಡಿ ಸಿಲುಕಿದ್ದ (Roof Collapse) ಇಬ್ಬರು ಮಕ್ಕಳು ಸೇರಿದಂತೆ ನಾಲ್ವರನ್ನ ಗ್ರಾಮಸ್ಥರು (Villagers) ರಕ್ಷಣೆ ಮಾಡಿದ್ದಾರೆ. ಕಳೆದ ಎರಡು ದಿನದಿಂದ ಜಿಲ್ಲೆಯಾದ್ಯಂತ ಮಹಾ ಮಳೆ ಅಬ್ಬರಿಸ್ತಿದೆ. ಇದ್ರಿಂದಾಗಿ ಅನಕ ಮನೆಗಳು (House) ಕುಸಿದಿವೆ. ಶಿಗ್ಲಿ ಗ್ರಾಮದ ಗುರುಶಾಂತಯ್ಯ ಅನ್ನೋರ ಮನೆಯೂ ರಾತ್ರಿ ಕುಸಿದಿತ್ತು. ಕುಟುಂಬದೊಂದಿಗೆ (Family) ವಿಶ್ರಮಿಸುತ್ತಿದ್ದ ಗುರುಶಾಂತಯ್ಯ ಮೈ ಮೇಲೆ ಏಕಾ ಏಕಿ ಮಣ್ಣಿಗೆ ಗೋಡೆ, ಛಾವಣಿ ಬಿದ್ದಿದೆ. ಜೊತೆಗಿದ್ದ ಪತ್ನಿ ಶೈಲಾ, ಇಬ್ಬರು ಮಕ್ಕಳೂ ಮಣ್ಣಿನ ಅಡಿ ಸಿಲುಕಿದರು.

Latest Videos

undefined

ಮೈ ಮೇಲೆ ಮಣ್ಣು ಬಿದ್ರೂ ಮಕ್ಕಳ ರಕ್ಷಣೆಗೆ ಕೂಗಿಕೊಂಡ: ರಾತ್ರಿ 12 ಗಂಟೆ ಸುಮಾರಿಗೆ ಏಕಾ ಏಕಿ ಛಾವಣಿ ಕುಸಿದಿದೆ. ಭಯಗೊಂಡ ಗುರುಶಾಂತಯ್ಯ ಮಕ್ಕಳ ರಕ್ಷಣೆಗಾಗಿ ಕೂಗಿಕೊಂಡಿದಾರೆ. ನನಗೇ ಏನಾದ್ರೂ ಪರವಾಗಿಲ್ಲ ಮಕ್ಕಳು ಬದುಕಬೇಕು ಅನ್ನೋ ಹಂಬಲದಿಂದ ಜೋರಾಗಿ ಕಿರುಚಿದ್ರಂತೆ. ಗುರುಶಾಂತಯ್ಯ ಕೂಗಾಟ ಚೀರಾಟ ಕೇಳಿ ಪಕ್ಕದ ಮನೆಯ ಮಹಿಳೆ ಹೊರ ಬಂದಿದ್ರು. ಸುತ್ತಲ ಜನರನ್ನ ಸೇರಿಸಿ ರಕ್ಷಣೆ ಮಾಡುವಂತೆ ಕೇಳಿಕೊಂಡಿದ್ರು. ಸ್ಥಳಕ್ಕೆ ಬಂದಿದ್ದ ಜನರು ಗುರುಶಾಂತಯ್ಯ ಕುಟುಂಬವನ್ನ ರಕ್ಷಿಸಿದ್ದಾರೆ.

Gadag: ಕೃಷಿ ಹೊಂಡದಲ್ಲಿ ಬಿದ್ದು ಮೂವರು ಬಾಲಕಿಯರ ಸಾವು!

ಗುರುಶಾಂತಯ್ಯ ಅವರ ಎದೆ, ಬೆನ್ನಿಗೆ ಬಲವಾದ ಪೆಟ್ಟಾಗಿದ್ದು ಮಾತ್ನಾಡೋದಕ್ಕೂ ಕಷ್ಟವಾಗ್ತಿದೆ. ಅವರನ್ನ ಕೂಡಲೇ ಶಿಗ್ಲಿ ಆಸ್ಪತ್ರೆಗೆ ಸೇರಿಸಲಾಗುತ್ತೆ. ನಂತರ ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅದೃಷ್ಟವಶಾತ್ ಗುರುಶಾಂತಯ್ಯ ಅವರ ಕುಟುಂಬದ ಯಾವ ಸದಸ್ಯನಿಗೂ ಗಂಭೀರ ಗಾಯಗಳಾಗಿಲ್ಲ. 

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಅನ್ನಪೂರ್ಣಾ ಮುದಕ್ಕಮ್ಮನವರ್, ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಗ್ರಾಮಸ್ಥರಿಂದ ಮಾಹಿತಿ ಪಡೆದಿದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ಎಸಿ ಅನ್ನಪೂರ್ಣ, ಯಾರಿಗೂ ಪ್ರಾಣಾಪಾಯ ಆಗಿಲ್ಲ. ಚಿಕಿತ್ಸೆ ನೀಡಲಾಗ್ತಿದೆ. ವರದಿ ಸಂಗ್ರಹಿಸಿ ಎನ್‌ಡಿಆರ್‌ಎಫ್ ಗೈಡ್‌ಲೈನ್ ಪ್ರಕಾರ ಪರಿಹಾರ ನೀಡುವ ವ್ಯವಸ್ಥೆ ಮಾಡುತ್ತೇವೆ ಅಂತಾ ತಿಳಿಸಿದ್ದಾರೆ.

ಬುದ್ಧಿ ಹೇಳಿದಕ್ಕೆ ಹೆತ್ತ ಅಪ್ಪನ ಹೆಣ ಉರುಳಿಸಿದ ಪಾಪಿ ಪುತ್ರ..!

ಮಹಾ ಮಳೆಗೆ ಜಿಲ್ಲೆಯಲ್ಲಿ ಮೊದಲ ಬಲಿ: ಗದಗ ಜಿಲ್ಲೆ ಮಂಡರಗಿ ತಾಲೂಕಿನ ಯಕ್ಲಾಸಪುರದ ಕೋತಿ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿಹೋಗಿದ್ದ ವ್ಯಕ್ತಿ ಶವ ಇಂದು ಪತ್ತೆಯಾಗಿದೆ. ಯಲ್ಲಾಸಪುರ ಗ್ರಾಮದ ಟಿಪ್ಪು ಸುಲ್ತಾನ್ (26) ಮೃತ ಯುವಕ ಅಂತಾ ಪತ್ತೆ ಹಚ್ಚಲಾಗಿದೆ. ಗುರುವಾರ ಕನ್ಯ ನೋಡಿ ಬರುವುದಾಗಿ ಹೋಗಿದ್ದ ಟಿಪ್ಪು ಸುಲ್ತಾನ, ಕೊಪ್ಪಳದ ಉಪ್ಪಿನ ಬೆಟಗೇರಿಗೆ ಹೋಗಿದ್ರು. ರಾತ್ರಿ ಮುಂಡರಗಿಯಲ್ಲೇ ಇದ್ದು, ಇಂದು ಗ್ರಾಮಕ್ಕೆ ಮರಳುವಂತೆ ಕುಟುಂಬ ತಿಳಿಸಿತ್ತಂತೆ. ಆದರೆ ಕುಟುಂಬಸ್ಥರ ಮಾತು ಕೇಳದೆ ರಾತ್ರಿ ಹಳ್ಳದಾಟಲು ಮುಂದಾಗಿದ್ದ ಟಿಪ್ಪು ಕೊಚ್ಚಿ ಹೋಗಿದ್ರು. ಬೈಕ್ ಸಮೇತ ನಾಪತ್ತೆಯಾಗಿದ್ದ ಟಿಪ್ಪು ದೇಹ ಇಂದು ಪತ್ತೆಯಾಗಿದೆ.

click me!