ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್..
ವಿಜಯಪುರ (ಮೇ20) : ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಜೋರಾಗಿದೆ. ನಿನ್ನೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯವಸ್ತಗೊಂಡಿದೆ. ಈ ನಡುವೆ ನಗರದಲ್ಲಿ ಅಲ್ಲಲ್ಲಿ ಬೃಹತ್ ಮರಗಳು ನೆಲಕ್ಕುರುಳುತ್ತಿದ್ದು ವಾಹನ ಸವಾರರಲ್ಲಿ ಆತಂಕ ಹುಟ್ಟಿಸಿದೆ.
ಬೈಕ್ ಸವಾರರ ಮೇಲೆ ಉರುಳಿದ ಬೃಹತ್ ಮರ!
ವಿಜಯಪುರ ನಗರದ ಬಡಿ ಕಮಾನ್ ರಸ್ತೆಯ ವಾಟರ್ ಬೋರ್ಡ್ ಎದುರು ಬೃಹತ್ತಾಕಾರದಲ್ಲಿ ಬೆಳೆದು ನಿಂತಿದ್ದ ಗುಲ್ಮೋಹರ್ ಮರ ಧರೆಗುರುಳಿದೆ. ಈ ವೇಳೆ ಬಡಿಕಮಾನ್ ಮಾರ್ಗವಾಗಿ ಹೋಗುತ್ತಿದ್ದ ಬೈಕ್ ಸವಾರರ ಮೇಲೆ ಮರ ಉರುಳೀ ಬಿದ್ದಿದೆ. ಎರಡು ಬೈಕ್ ಗಳು ಜಖಂ ಆಗಿವೆ. ಉರುಳಿ ಬಿದ್ದ ಮರದ ಕೆಳಗೆ ಬೈಕ್ ಸವಾರನೊಬ್ಬ ಸಿಲುಕಿ ಒದ್ದಾಡಿದ ಘಟನೆಯು ನಡೆದಿದೆ. ಶಾಪೇಟೆ ನಿವಾಸಿ ವ್ಯಾಪಾರಸ್ಥ ಸುಧೀರ್ ಪಾಟೀಲ್ ಉರುಳಿ ಬಿದ್ದ ಮರದ ಕೆಳಗೆ ಸಿಕ್ಕು ನರಳಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಸುಧೀರ್ ರನ್ನ ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
15 ತಿಂಗಳಾದ್ರೂ ಫಲಿತಾಂಶವಿಲ್ಲ, ವಯಸ್ಸು ಮೀರುವ ಆತಂಕದಲ್ಲಿ ಕೆಎಎಸ್ ಆಕಾಂಕ್ಷಿಗಳು!
ಕೆಲಕಾಲ ಬಂದ್ ಆಗಿದ್ದ ಬಡೀ ಕಮಾನ್ ರಸ್ತೆ
ಮರ ಉರುಳಿದ ಪರಿಣಾಮ ಗಂಟೆಗು ಅಧಿಕ ಕಾಲ ಬಡೀ ಕಮಾನ್ ನಿಂದ ಜಿಲ್ಲಾ ಪಂಚಾಯತ್ ಗೆ ಹೋಗುವ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಸ್ಥಳಕ್ಕಾಗಮಿಸಿದ ಪಾಲಿಕೆ ಸಿಬ್ಬಂದಿ ಮರವನ್ನ ಕತ್ತರಿಸಿ ವಾಹನಗಳನ್ನ ಹೊರಗೆ ತೆಗೆದಿದ್ದಾರೆ. ಬಡೀ ಕಮಾನ್ ಮೂಲಕ ಜಿಲ್ಲಾ ಪಂಚಾಯತ್ ಕಡೆಗೆ ತೆರಳಬೇಕಿದ್ದ ಜನ ಬೇರೆ ಮಾರ್ಗಗಳಿಂದ ಸಾಗಬೇಕಾಯ್ತು.
Chikkamagaluru ರಸ್ತೆಗೆ ಬಂಡೆ ಹಾಕಿ ಬೀಗ ಜಡಿದಿದ್ದ ಪ್ರಕರಣ, ಸ್ಥಳಿಯರಿಂದ ಬಂಡೆ ತೆರವು
ಆತಂಕ ಸೃಷ್ಟಿಸಿರುವ ರಸ್ತೆ ಬದಿಯ ಬೃಹತ್ ಮರಗಳು
ನಿನ್ನೆಯಿಂದ ಮಳೆ-ಗಾಳಿ ಜೋರಾಗಿದ್ದು ರಸ್ತೆ ಬದಿಯ ಮರಗಳು ಉರುಳಿ ಬಿದ್ರೆ ಹೇಗೆ ಎನ್ನುವ ಆತಂಕದಲ್ಲಿ ಸಾರ್ವಜನಿಕರಿದ್ದಾರೆ. ಬಡೀ ಕಮಾನ್ ರಸ್ತೆಯಲ್ಲಿ ಸಾಕಷ್ಟು ಮರಗಳಿದ್ದು, ಗಾಳಿ ಮಳೆಗೆ ಧರೆಗುರುಳುವ ಭಯ ಸ್ಥಳೀಯರಲ್ಲಿದೆ. ಹೀಗಾಗಿ ಬೃಹತ್ತಾಗಿ ಬೆಳೆದು ನಿಂತಿರುವ ಮರಗಳ ಟೊಂಗೆಗಳನ್ನಾದ್ರು ಕತ್ತರಿಸಿ ಟ್ರೀಮ್ ಮಾಡುವಂತೆ ಜನರು ಆಗ್ರಹಿಸಿದ್ದಾರೆ.
ಎಚ್ಚೆತ್ತುಕೊಳ್ಳಬೇಕಿದೆ ಮಹಾನಗರ ಪಾಲಿಕೆ
ತಿಂಗಳ ಹಿಂದೆ ಮಳೆ-ಗಾಳಿಗೆ ಎಸ್ಪಿ ಕಚೇರಿ ರಸ್ತೆ ಪೊಲೀಸ್ ಗ್ರೌಂಡ್ ಬಳಿ ಬೃಹತ್ ಮರ ಆಟೋ ಮೇಲೆ ಉರುಳಿ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಳು. ಕೆಲವರು ಗಾಯಗೊಂಡು ಆಸ್ಪತ್ರೆಯಲ್ಲಿ ನರಳಾಡಿದ್ದರು. ರಸ್ತೆ ಬದಿಯಲ್ಲಿನ ಬೃಹತ್ ಮರಗಳನ್ನ ಟ್ರೀಮ್ ಮಾಡಿದಲ್ಲಿ ಮರಗಳನ್ನು ಉಳಿಸಿಕೊಳ್ಳಬಹುದು, ಜೊತೆಗೆ ವಾಹನ ಸವಾರರ ಜೀವವನ್ನ ಕಾಪಾಡಬಹದು. ಈ ಹಿನ್ನೆಲೆ ಪಾಲಿಕೆ ಬೃಹತ್ ಮರಗಳನ್ನ ಟ್ರೀಮ್ ಮಾಡುವ ಕೆಲಸ ಮಾಡಬೇಕಿದೆ.