Ballari: ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್

By Govindaraj S  |  First Published Apr 11, 2022, 1:10 PM IST

ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಹಿನ್ನೆಲೆ ಉದ್ಯಮಿ ಮತ್ತು ಸಮಾಜ ಸೇವಕರಾದ ನರೇಂದ್ರ ಬಲ್ಡೋಟ, ಕನ್ನಡದ ಅರ್ಚಕ ಮತ್ತು ಸಾಹಿತಿ  ಹಿರೆಮಗಳೂರು ಕಣ್ಣನ್ ಹಾಗೂ ನ್ಯಾಯವಾದಿ ವೀರಶೈವ ಮಹಾಸಭೆಯ ಅಧ್ಯಕ್ಷ ಎನ್. ತಿಪ್ಪಣ್ಣ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದ್ದಾರೆ.


ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಏ.11): ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ (Sri Krishnadevaraya University) 9ನೇ ಘಟಿಕೋತ್ಸವ ಹಿನ್ನೆಲೆ ಉದ್ಯಮಿ ಮತ್ತು ಸಮಾಜ ಸೇವಕರಾದ ನರೇಂದ್ರ ಬಲ್ಡೋಟ (Narendra Baldota), ಕನ್ನಡದ ಅರ್ಚಕ ಮತ್ತು ಸಾಹಿತಿ  ಹಿರೆಮಗಳೂರು ಕಣ್ಣನ್ (Hiremagaluru Kannan) ಹಾಗೂ ನ್ಯಾಯವಾದಿ ವೀರಶೈವ ಮಹಾಸಭೆಯ ಅಧ್ಯಕ್ಷ ಎನ್. ತಿಪ್ಪಣ್ಣ (N Thippanna) ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದ್ದಾರೆ. ನಾಳೆ ಬೆಳಿಗ್ಗೆ ವಿವಿಯ ಆವರಣದಲ್ಲಿ ನಡೆಯಲಿರೋ ಘಟಿಕೋತ್ಸವದಲ್ಲಿ ಡಾಕ್ಟರೇಟ್ (Honorary Doctorate) ನೀಡಲಾಗುವುದು ಎಂದು ವಿವಿಕುಲಪತಿ ಡಾ. ಸಿದ್ದು ಪಿ ಅಲಗೂರು ತಿಳಿಸಿದ್ದಾರೆ.

Tap to resize

Latest Videos

undefined

ಇದೇ ಮೊದಲ ಬಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ (Thawar Chand Gehlot) ಆಗಮಿಸಲಿದ್ದು,  ರಾಜ್ಯಪಾಲರೇ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ. ಕುರುಕ್ಷೇತ್ರ ವಿವಿಯ ವಿಶ್ರಾಂತ ಕುಲಪತಿ ಡಾ.ಕೈಲಾಶ್ ಚಂದ್ರಶರ್ಮ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.  ಗೌರವ ಡಾಕ್ಟರೇಟ್ ಪದವಿಗಾಗಿ ಕಲಾವಿದ ಬಸಲಿಂಗಯ್ಯ ಹಿರೇಮಠ, ನರೇಂದ್ರಕುಮಾರ್, ಎನ್.ತಿಪ್ಪಣ್ಣ, ವೈದ್ಯಕೀಯ ಸೇವೆ ಮಲ್ಲಿಕಾರ್ಜುನ ವಿ.ಜಾಲಿ, ಸಾವಯುವ ಕೃಷಿ ಎಸ್.ಸಿ. ವೀರಭದ್ರಪ್ಪ ಅವರು ಹೆಸರುಗಳು ಪ್ರಸ್ತಾಪವಾಗಿದ್ದವು ಆದರೆ ರಾಜ್ಯಪಾಲರ ಸೂಚನೆ ನೇರೆಗೆ ಈ ಮೂವರ ಹೆಸರನ್ನು ಅಯ್ಕೆ ಮಾಡಲಾಗಿದೆ. ಇನ್ನೂ ಇದೇ ವೇಳೆ 42 ವಿದ್ಯಾರ್ಥಿಗಳು 51 ಚಿನ್ನದ ಪದಕ ಪಡೆಯಲಿದ್ದಾರೆ. 26 ವಿದ್ಯಾರ್ಥಿಗಳು ಪಿಹೆಚ್ ಡಿ ಪದವಿ ಪಡೆಯಲಿದ್ದಾರೆ.    

ಡಾಕ್ಟರೇಟ್ ಪದವಿ ಪಡೆದವರ ವಿವರ
ಎನ್. ತಿಪ್ಪಣ್ಣ:
ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷರು, ಸ್ವತಂತ್ರ್ಯ ಹೋರಾಟ, ಶಿಕ್ಷಣ, ಸಾಮಾಜಿಕ ಸೇವೆ ಪರಿಗಣಿಸಿ ಡಾಕ್ಟರೇಟ್ ನೀಡಲಾಗಿದೆ.

ಹಿರೇಮಗಳೂರು ಕಣ್ಣನ್: ಕನ್ನಡ ಭಾಷಾ ಪ್ರವೀಣರು, ದೂರದರ್ಶನ ಕಾರ್ಯಕ್ರಮಗಳ ನಿರೂಪಣೆ ಮಾಡಿದ ಸಾಧನೆ ಗೌರವಿಸಿ ಡಾಕ್ಟರೇಟ್ ನೀಡಲಾಗಿದೆ.

ನರೇಂದ್ರ ಕುಮಾರ್ ಬಲ್ಡೋಟ: ಅವರಿಗೆ ಸುಸ್ಥಿರ ಅಭಿವೃದ್ಧಿ ಮತ್ತು ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರೋ ಹಿನ್ನೆಲೆ ಗೌರವ ನೀಡಲಾಗಿತ್ತಿದೆ

ದಾವಣಗೆರೆ ವಿವಿಯಲ್ಲಿ ಒಂಭತ್ತನೇ ಘಟಿಕೋತ್ಸವ: ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿ ಕ್ಯಾಂಪಸ್ ನಲ್ಲಿ ಒಂಭತ್ತನೆ ಘಟಿಕೋತ್ಸವ ಜರುಗಿತು. ರಾಜ್ಯದ ವಿಶ್ವವಿದ್ಯಾನಿಲಯದ ಕುಲಾಧಿಪತಿ , ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅದ್ಯಕ್ಷತೆಯಲ್ಲಿ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಯಿತು. ಕೇಂದ್ರೀಯ ವಿವಿ ಮಾಜಿ ಕುಲಾಧಿಪತಿ ಡಾ.ಪಿ.ವಿ.‌ ಕೃಷ್ಣ ಭಟ್‌ರಿಂದ ಘಟಿಕೋತ್ಸವ ಭಾಷಣ ಮಾಡಿದರು. 

Ravichandran: ಕ್ರೇಜಿಸ್ಟಾರ್‌ ರವಿಚಂದ್ರನ್‌ಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್

ಈ ಬಾರಿ ಘಟಿಕೋತ್ಸವದಲ್ಲಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.ವಿ.ಎಂ.‌ ಶಶಿಕುಮಾರ್, ಡಾ‌.ಮೀರಾಸಾಬಿ ಶಿವಣ್ಣ, ಪ್ರೊ.ಲಕ್ಷ್ಮಣ ತೆಲಗಾವಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.ಘಟಿಕೋತ್ಸವದಲ್ಲಿ 5 ಎಂಫಿಲ್, 6 ಪಿ.ಎಚ್‌ಡಿ ಪದವಿ ಪ್ರದಾನ ಮಾಡಲಾಯಿತು.‌ ಜೊತೆಗೆ 9,724 ವಿದ್ಯಾರ್ಥಿಗಳಿಗೆ ಸ್ನಾತಕ 11,336 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು. ಸ್ನಾತಕ, ಸ್ನಾತಕೋತ್ತರ ಪದವಿಯಲ್ಲಿ 32 ವಿದ್ಯಾರ್ಥಿನಿಯರು, 12 ವಿದ್ಯಾರ್ಥಿಗಳು 79 ಚಿನ್ನದ ಪದಕಕ್ಕೆ ಭಾಜನರಾದರು.

click me!