ಕೇಸರಿ, ಖಾವಿ ಧರಿಸಿ ಕೋಳಿ ಕೊಯ್ಯಬೇಡಿ: ಸ್ವಾಮೀಜಿಗಳಿಗೆ ಕಾಂಗ್ರೆಸ್‌ ನಾಯಕನ ಮನವಿ

By Girish Goudar  |  First Published Apr 11, 2022, 12:54 PM IST

*  ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಬೇಡಿ
*  ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ 
*  ಸುಳ್ಳು ಹೇಳಿದ್ದರೆ ಕಮಲ್‌ ಪಂತರನ್ನು ಅಮಾನತು ಮಾಡಿ


ಕಾರಟಗಿ(ಏ.11):  ದೇಶದಲ್ಲಿ ಖಾವಿ ಮತ್ತು ಕೇಸರಿಗೆ ಒಂದು ಗೌರವ ಇದೆ. ಕೇಸರಿ ಮತ್ತು ಖಾವಿ ತೊಟ್ಟುಕೊಂಡು ಕೋಳಿ ಕೊಯ್ಯಬೇಡಿ ಎಂದು ಜಿಲ್ಲಾ ಕಾಂಗ್ರೆಸ್‌(Congress) ಅಧ್ಯಕ್ಷ ಶಿವರಾಜ್‌ ತಂಗಡಗಿ(Shivaraj Tangadagi) ಮನವಿ ಮಾಡಿದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವ(Hindutva) ಪ್ರತಿಪಾದನೆ ಮಾಡುವ ಕಾಳಿ ಸ್ವಾಮೀಜಿಗಳೇ (ಋುಷಿಕುಮಾರ ಸ್ವಾಮೀಜಿ), ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ದಯವಿಟ್ಟು ಖಾವಿ ಬಟ್ಟೆ ಹಾಕಿಕೊಂಡು ಕೋಳಿ(Chicken) ಕೊಯ್ಯಬೇಡಿ ಎಂದು ಮನವಿ ಮಾಡಿದರು.

Tap to resize

Latest Videos

Koppal: ಅಪಘಾತದಲ್ಲಿ ಗಾಯಗೊಂಡಿದ್ದವರ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಗವಿಸಿದ್ದೇಶ್ವರ ಸ್ವಾಮೀಜಿ

ಖಾವಿ ಧರಿಸಿದವರು ಎಂಥವರೇ ಇರಲಿ ಆ ವ್ಯಕ್ತಿಗಳಿಗೂ ಜನ ಕಾಲು ಮುಟ್ಟಿನ ಮಸ್ಕರಿಸುತ್ತಾರೆ. ಆದರೆ, ನೀವು ಖಾವಿ ಬಟ್ಟೆಧರಿಸಿ ಕೋಳಿ ಕೊಯ್ದು ಹಿಂದೂಗಳ(Hindu0 ಧಾರ್ಮಿಕ ಭಾವನೆಗೆ ಧಕ್ಕೆ ತರಬೇಡಿ ಎಂದರು.
ರಾಜ್ಯದಲ್ಲಿ(Karnataka) ನಡೆಯುತ್ತಿರುವ ಎಲ್ಲ ಧಾರ್ಮಿಕ ದಂಗಲ್‌ಗಳಿಗೆ ರಾಜ್ಯ ಸರ್ಕಾರವೇ(Government of Karnataka\) ನೇರ ಹೊಣೆ ಎಂದು ಕಿಡಿಕಾರಿದ ತಂಗಡಗಿ, ಹೆಣದ ಮೇಲೆ ರಾಜಕಾರಣ(Politics) ಮಾಡೋದು ಬಿಜೆಪಿಯವರ ಸಂಸ್ಕೃತಿ. ಯಾರೇ ಸತ್ತರೂ ದುಃಖ ಆಗುತ್ತದೆ. ಆದರೆ, ಹೆಣದ ಮೇಲೆ ರಾಜಕಾರಣ ಮಾಡುವವರು ದುಷ್ಟರು. ಇದನ್ನು ಬಿಜೆಪಿ(BJP) ನಾಯಕರು ಸಮರ್ಥನೆ ಮಾಡುತ್ತಾರೆ. ಇವರಿಗೆ ಚುನಾವಣೆ ಬಂದ ತಕ್ಷಣ ಪಾಕಿಸ್ತಾನ, ಸೈನಿಕರು, ಧರ್ಮ ನೆನಪಾಗುತ್ತವೆ ಎಂದು ಲೇವಡಿ ಮಾಡಿದರು

ಕೇಸರಿ ನಮಗೂ ಸೇರಿದ್ದು, ನಾನು ಒಬ್ಬ ಹಿಂದೂ. ಆದರೆ, ಬಿಜೆಪಿಯವರು ಕೆಟ್ಟ ಹಿಂದೂಗಳು. ಕೇಸರಿ ತ್ಯಾಗದ ಸಂಕೇತ. ಬಿಜೆಪಿಯವರು ಕೇಸರಿ ಹಾಕಿಕೊಂಡು ಜನರ ನಡುವೆ ಬೆಂಕಿ ಹಚ್ಚುತ್ತಾರೆ. ರಾಜ್ಯದಲ್ಲಿ ಈಗ ನಡೆಯುತ್ತಿರುವ ಬೆಂಕಿ ಹಚ್ಚುವ ಘಟನೆಗಳ ಹಿಂದೆ ಆರ್‌ಎಸ್‌ಎಸ್‌ ಇದೆ. ಇಡೀ ಸರ್ಕಾರ, ಮಂತ್ರಿ ಮಂಡಲದಿಂದಲೇ ಎಲ್ಲ ಬೆಳವಣಿಗೆ ನಡೆಯುತ್ತಿದೆ. ಆದರೂ ಮುಖ್ಯಮಂತ್ರಿ ಒಂದು ಮಾತೂ ಹೇಳುತ್ತಿಲ್ಲ. ಬಡವರು ಮಾರಾಟಕ್ಕಿಟ್ಟ ಕಲ್ಲಂಗಡಿ ಕಿತ್ತು ಬಿಸಾಕ್ತಾರೆ ಎಂದರೆ ಇವರದು ಎಂಥ ಮನಸ್ಥಿತಿ? ಸರ್ಕಾರದ ಕುಮ್ಮಕ್ಕಿನಿಂದಲೇ ಇದೆಲ್ಲ ನಡೀತಿದೆ. ಸರ್ಕಾರ ಸತ್ತು ಹೋಗಿದೆ ಎಂದು ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು.

ಸುಳ್ಳು ಹೇಳಿದ್ದರೆ ಕಮಲ್‌ ಪಂತರನ್ನು ಅಮಾನತು ಮಾಡಿ

ಬೆಂಗಳೂರಿನ ಜೆಪಿ ನಗರದ ಚಂದ್ರು ಹತ್ಯೆ ಪ್ರಕರಣಕ್ಕೆ(Chandru Murder) ಸಂಬಂಧಿಸಿದಂತೆ ಪೊಲೀಸ್‌ ಇಲಾಖೆ(Police Department) ಸುಳ್ಳು ಹೇಳಿದ್ದರೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರನ್ನು ರಾಜ್ಯ ಬಿಜೆಪಿ ಸರ್ಕಾರ ಕೂಡಲೆ ಅಮಾನತು ಮಾಡಲಿ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ(Priyank Kharge) ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧ ಎಲ್ಲವೂ ಗೊಂದಲದಿಂದ ಕೂಡಿದೆ. ಬಿಜೆಪಿ ಸರ್ಕಾರ ಒಂದು ಹೇಳಿಕೆ ನೀಡುತ್ತಿದ್ದರೆ, ಪೊಲೀಸ್‌ ಇಲಾಖೆ ಮತ್ತೊಂದು ಕಾರಣ ನೀಡುತ್ತಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಸುಳ್ಳು ಹೇಳುತ್ತಿರಬೇಕು, ಇಲ್ಲವೇ ಪೊಲೀಸ್‌ ಆಯುಕ್ತರು ಸುಳ್ಳು ಹೇಳಿರಬೇಕು. ಕಮಿಷನರ್‌ ಸುಳ್ಳು ಹೇಳಿ ಸರ್ಕಾರಕ್ಕೆ ತಪ್ಪು ಮಾಹಿತಿ ರವಾನಿಸಿದ್ದರೆ ಅವರನ್ನು ಕೂಡಲೇ ಸಸ್ಪೆಂಡ್‌ ಮಾಡಿ ಎಂದು ಆಗ್ರಹಿಸಿದರು.

Koppal: ನಿವೃತ್ತ ಶಿಕ್ಷಕಿಯ ಬದುಕಿಗೆ ನರೇಗಾ ಆಸರೆ: ಇಳಿ ವಯಸ್ಸಲ್ಲೂ ದುಡಿದು ತಿನ್ನುವ ಪರಿಸ್ಥಿತಿ..!

ಆರಗ ಜ್ಞಾನೇಂದ್ರ ಅವರ ಇಲಾಖೆಯ ಮೇಲೆ ಹಿಡಿತವಿಲ್ಲದಷ್ಟುನಾಲಾಯಕ್‌ ಸಚಿವರಾಗಿದ್ದಾರೆ. ಇದನ್ನು ಒಪ್ಪಿಕೊಂಡು ಅವರನ್ನು ಸಚಿವ ಸಂಪುಟದಿಂದ ತಕ್ಷಣವೇ ಕೈಬಿಡಬೇಕೆಂದರು. ರಾಜ್ಯದಲ್ಲಿ ಸರ್ಕಾರವೇ ಮುಂದೆ ನಿಂತು ಜನರಲ್ಲಿ ಕೋಮು ಭಾವನೆ ಪ್ರಚೋದಿಸುವ ಕೆಲಸಕ್ಕೆ ಕೈಹಾಕುತ್ತಿದೆ ಎಂದು ಆರೋಪಿಸಿದರು.

ವಿದ್ಯಾರ್ಥಿನಿ ಮುಸ್ಕಾನ್‌(Muskan) ಬುರ್ಕಾ ವಿಚಾರವಾಗಿ ಆಲ್‌ಖೈದಾ ವಿಚಾರವಾಗಿ ಹರಿದಾಡುತ್ತಿರುವ ವಿಡಿಯೋವನ್ನು ಕೇಂದ್ರ ಸರ್ಕಾರ ಇನ್ನೂ ತನಿಖೆ ಮಾಡಲು ಮುಂದಾಗಿಲ್ಲ. ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಒಬ್ಬ ಪ್ಲಾಪ್‌ ಮಿನಿಸ್ಟರ್‌. ವಿದ್ಯಾರ್ಥಿನಿ ಮುಸ್ಕಾನ್‌ ಏನಾದರೂ ನಾನು ಆಲ್‌ಖೈದಾಕ್ಕೆ ಸಂಬಂಧಿಸಿದವರು ಎಂದು ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದ ಖರ್ಗೆ, ಅವಳ ತಂದೆ, ನಮ್ಮನ್ನು ನೆಮ್ಮದಿಯಿಂದ ಎಲ್ಲರೊಂದಿಗೆ ಸೇರಿಕೊಂಡು ಬದುಕಲು ಬಿಡಿ ಎಂದಿರುವುದನ್ನು ಬಿಜೆಪಿಗರು ಅರ್ಥಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಮಾಜಿ ಸಚಿವ ಶಿವರಾಜ ತಂಗಡಗಿ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.
 

click me!