Dharwad: ಅಳ್ನಾವರದಲ್ಲಿ ಕೈ ಬೀಸಿ ಕರೆಯುತ್ತಿದ್ದಾಳೆ ಸಾಲು ಮರದ ತಿಮ್ಮಕ್ಕ..!

By Girish GoudarFirst Published Apr 11, 2022, 12:01 PM IST
Highlights

*   ಅಳ್ನಾವರದಲ್ಲಿ ಸಾಲು ಮರದ ತಿಮ್ಮಕ್ಕಳ ಹೆಸರಿನಲ್ಲಿ ಉದ್ಯಾನವನ
*   ವಿಶೇಷ ಆಕರ್ಷಣೆ ಹೊಂದಿರುವ ಉದ್ಯಾನವನ ಉದ್ಘಾಟನೆ
*   ಉತ್ತಮವಾದ ವೃಕ್ಷ ಉದ್ಯಾನವನ ನಿರ್ಮಾಣ ಮಾಡಿದ ಅರಣ್ಯ ಇಲಾಖೆ 
 

ಶಶಿಕುಮಾರ ಪತಂಗೆ

ಅಳ್ನಾವರ(ಏ.11): ಅಲ್ಲಿ ಬಗೆಬಗೆಯ ಹೂವಿನ ಗಿಡಗಳು, ಅದರೊಳಗೆ ಬಣ್ಣ ಬಣ್ಣದ ಚಿಟ್ಟೆಗಳು, ಝುಳು ಝುಳು ನೀರಿನ ನಿನಾದದ ಮಧ್ಯೆ ತಣ್ಣನೆ ಬೀಸುವ ತಂಗಾಳಿ. ಪ್ರಾಣಿ-ಪಕ್ಷಿಗಳ ಚಿತ್ರಗಳು. ಇಂದಿನ ಕಾಂಕ್ರಿಟ್‌ ಕಾಡುಗಳ ನಡುವೆ ಇಂತಹ ವಾತಾವರಣ ಎಲ್ಲಿದೆಯಪ್ಪಾ ಅಂತೀರಾ? ಮಲೆನಾಡಿನ ಸೆರಗಿನಲ್ಲಿರುವ ಅಳ್ನಾವರ ಪಟ್ಟಣದಲ್ಲಿ ಕೈ ಬಿಸಿ ಕರೆಯುತ್ತಿದೆ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ.

Latest Videos

ಹೌದು. ತಾಲೂಕು ಸ್ಥಾನಮಾನ ದೊರೆತ ನಂತರ ಪಟ್ಟಣದಲ್ಲಿ ಮೊದಲ ಬಾರಿಗೆ ಇಂತಹದೊಂದು ಉದ್ಯಾನವನ ಅಳ್ನಾವರದಲ್ಲಿ ಏ.11ರ ಸೋಮವಾರ ಲೋಕಾರ್ಪಣೆಗೊಳ್ಳಲು ಅಣಿಯಾಗಿದೆ. ಉದ್ಯಾನವನವನ್ನು ಜಿಲ್ಲಾ ಉಸ್ತವಾರಿ ಸಚಿವ ಹಾಲಪ್ಪ ಆಚಾರ(Halappa Achar) ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಸಿ.ಎಂ. ನಿಂಬಣ್ಣವರ ವಹಿಲಿದ್ದು, ಸಂಸದ ಪ್ರಹ್ಲಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಉಮೇಶ ಕತ್ತಿ, ಶಾಸಕ ಜಗದೀಶ ಶೆಟ್ಟರ, ಎಸ್‌.ವಿ. ಸಂಕನೂರ, ಸಲೀಂ ಅಹ್ಮದ, ಪ್ರದೀಪ ಶೆಟ್ಟರ ಭಾಗವಹಿಸಲಿದ್ದಾರೆ.

Dharwad: ಮುಸ್ಲಿಂ ಅಂಗಡಿ ಮೇಲೆ ದಾಳಿ: ನಾಲ್ವರು ಶ್ರಿರಾಮಸೇನೆ ಕಾರ್ಯಕರ್ತರ ಬಂಧನ

ಉದ್ಯಾನವನವು(Garden) ಈ ಹಿಂದೆ ಕಟ್ಟಿಗೆ ದಾಸ್ತಾನು ಅಡ್ಡೆಯಾಗಿತ್ತು. ತದ ನಂತರದಲ್ಲಿ ಪಾಳು ಬಿದ್ದ ಜಾಗೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯು(Forest Department) ಈ ಜಾಗದಲ್ಲಿ ಸುಂದರವಾದ ಪಾರ್ಕ್‌(Park) ನಿರ್ಮಿಸಿದೆ. ಒಟ್ಟು 19 ಎಕರೆ ಜಾಗದಲ್ಲಿ ನಿರ್ಮಿಸಲಾಗಿದ್ದು, ಇಲ್ಲಿನ ಚಿಟ್ಟೆಜೋನ್‌ಗೆ ವಿದೇಶದಿಂದಲೂ ನಾನಾ ತರಹದ ಚಿಟ್ಟೆಗಳು ಬರುವ ನಿರೀಕ್ಷೆಯಿದೆ. ಅವುಗಳಿಗಾಗಿ 113 ಜಾತಿಯ ಹೂವಿನ ಗಿಡಗಳನ್ನು ನೆಡಲಾಗಿದ್ದು, ಈಗಾಗಲೆ 36 ಬಗೆಯ ಚಿಟ್ಟೆಗಳು ಇಲ್ಲಿ ನೋಡಲು ಸಿಗುತ್ತವೆ. ಆಯುಷ್‌ ವಿಭಾಗದ ಮಾರ್ಗದರ್ಶನದಲ್ಲಿ ಹಲವಾರು ಔಷಧಿಯ ಸಸ್ಯಗಳನ್ನು(Medicinal Plants) ನೆಡಲಾಗಿದೆ. ಮಕ್ಕಳಿಗಾಗಿ ಆಟದ ಸಾಮಗ್ರಿಗಳಿದ್ದು ರಜಾ ದಿನಗಳಲ್ಲಿ ಕಾಲಕಳೆಯಲು ಹಾಗೂ ಸಾರ್ವಜನಿಕರಿಗೆ ಸಂಜೆ ವಾಯು ವಿಹಾರಕ್ಕೆ ಸೂಕ್ತವಾದ ಜಾಗವಾಗಿದೆ.

'ಕಲ್ಲಂಗಡಿ ಹಣ್ಣಿನ ಬಗ್ಗೆ ಕನಿಕರ ತೋರಿಸುವವರು, ತಲೆ ಒಡೆದಾಗ ಯಾಕೆ ಕನಿಕರ ತೋರಿಸಲಿಲ್ಲ'

ಏನಿದೆ?

ಹಿರಿಯ ವಯಸ್ಕರಿಗಾಗಿ ವಿಶ್ರಾಂತಿ ಧಾಮ, ಮಕ್ಕಳಿಗೆ 12 ತರಹದ ಆಟಿಗೆಗಳು, ವಯಸ್ಕರಿಗೆ ಕಸರತ್ತು ಮಾಡಲು 11 ತರಹದ ವ್ಯಾಯಾಮ ಸಾಧನಗಳು, ಗಣೇಶನ ದೇವಸ್ಥಾನ, ಯೋಗಾಭ್ಯಾಸ ಮತ್ತು ಧ್ಯಾನಕ್ಕಾಗಿ ಮರದ ಕೆಳಗಡೆ ದೊಡ್ಡ ಕಟ್ಟೆಗಳು, ಮಕ್ಕಳ ಮನಸೆಳೆಯಲು ಹಾರ್ನ್‌ಬಿಲ್‌ ಸೇರಿದಂತೆ ಇತರೆ ಜಾತಿಯ ಪಕ್ಷಿಗಳಿದ್ದು(Birds), ಮಧ್ಯದಲ್ಲಿ ಸಾಲುಮರದ ತಿಮ್ಮಕ್ಕನ ಮೂರ್ತಿ ಇಡಲಾಗಿದೆ. ಪಾರ್ಕಿನ ಒಂದು ಭಾಗದಲ್ಲಿ ಚಿಟ್ಟೆಗಳಿಗಾಗಿಯೇ ವಿವಿಧ ಬಗೆಯ ಹೂವಿನ ಗಿಡಗಳ ತೋಟವನ್ನು ಮಾಡಲಾಗಿದೆ. ಮೊಬೈಲ್‌ ಸ್ಕ್ಯಾನಿಂಗ್‌ಗಳ ಮೂಲಕ ಇಲ್ಲಿನ ಪ್ರತಿಯೊಂದು ವಸ್ತುವಿನ ವಿಶೇಷತೆಗಳನ್ನು ಮೊಬೈಲ್‌ನಲ್ಲಿ ನೊಡಬಹುದಾಗಿದೆ ಎಂದು ಮಾಹಿತಿ ನೀಡುತ್ತಾರೆ ಉಪ ವಲಯಾರಣ್ಯಧಿಕಾರಿ ಪ್ರಕಾಶ ಕಂಬಾರ.

ಈ ಭಾಗದಲ್ಲಿ ಅರಣ್ಯ ಇಲಾಖೆಯು ಉತ್ತಮವಾದ ವೃಕ್ಷ ಉದ್ಯಾನವನ ನಿರ್ಮಾಣ ಮಾಡಿದ್ದು, ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರ ವಿಹಾರಕ್ಕೆ ಅತ್ಯತ್ತಮ ವಾತಾವರಣವಿದೆ. ಬರೀ ಅಳ್ನಾವರ ಮಾತ್ರವಲ್ಲದೇ ಸುತ್ತಲಿನ ಪ್ರದೇಶದ ಜನರೂ ಈ ಉದ್ಯಾನವನದ ಉಪಯೋಗ ಪಡೆಯಬಹುದು ಅಂತ ಹಳಿಯಾಳ ವಿಭಾಗದ ವಲಯಾರಣ್ಯಧಿಕಾರಿ ಸತೀಶ ಹಿರೇಮಠ ತಿಳಿಸಿದ್ದಾರೆ. 
 

click me!