Gadag: ತೋಂಟದಾರ್ಯ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಬೇಡ: ಹಿಂದೂ ಸಂಘಟನೆಗಳಿಂದ ಪ್ರತಿಭಟನೆ!

By Govindaraj S  |  First Published Apr 10, 2022, 5:38 PM IST

ಗದಗದ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಕೂಡದು ಅನ್ನೋ ಪೋಸ್ಟ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು ಇವತ್ತು ಫೀಲ್ಡ್‌ಗೆ ಇಳಿದಿದ್ರು.


ವರದಿ: ಗಿರೀಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಗದಗ (ಏ.10): ಗದಗದ ಜಗದ್ಗುರು ತೋಂಟದಾರ್ಯ (Gadag Tontadarya) ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ (Muslim Traders) ಅವಕಾಶ ನೀಡಕೂಡದು ಅನ್ನೋ ಪೋಸ್ಟ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ (Social Media) ಅಭಿಯಾನ ಆರಂಭಿಸಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು ಇವತ್ತು ಫೀಲ್ಡ್‌ಗೆ ಇಳಿದಿದ್ರು. ಶ್ರೀರಾಮ ಸೇನೆ ಕಾರ್ಯಕರ್ತರು ಹಾಗೂ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಗದಗ ತೋಂಟದಾರ್ಯ ಮಠದ ಎದುರು ಪ್ರತಿಭಟನೆ (Protest) ಮಾಡುವ ಮೂಲಕ ಏಪ್ರಿಲ್ 15 ರಿಂದ ಆರಂಭವಾಗುವ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳನ್ನ ಬ್ಯಾನ್ ಮಾಡುವಂತೆ ಆಗ್ರಹಿಸಿದರು.

Latest Videos

undefined

ಮುಖ್ಯಮಂತ್ರಿಗಳಿಗೂ ತಟ್ಟಲಿದೆಯಾ ಪ್ರತಿಭಟನೆ ಬಿಸಿ..!: ಜಾತ್ರೆಗೆ ಈ ಬಾರಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಆಗಮಿಸಲಿದ್ದಾರೆ. ಲಿಂಗೈಕ್ಯ ತೋಂಟದ ಸಿದ್ದಲಿಂಗ ಶ್ರೀಗಳ ಐಕ್ಯ ಮಂಟಪವನ್ನು ಸಿಎಂ ಉದ್ಘಾಟಿಸಲಿದ್ದಾರೆ. ಒಂದು ವೇಳೆ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಿದರೆ ಸಿಎಂ ಬರಲಿ ಇಲ್ಲ ಪಿಎಂ ಬರಲಿ ಪ್ರತಿಭಟನೆ ನಿಲ್ಲಲ್ಲ ಅನ್ನೋ ಸಂದೇಶವನ್ನ ಶ್ರೀರಾಮ ಸೇನೆ ಧಾರವಾಡ ವಿಭಾಗ ಸಂಚಾಲಕ ರಾಜೂ ಖಾನಪ್ಪನವರ್ ಕೊಟ್ಟಿದ್ದಾರೆ. ಮಾರ್ಚ್ 28 ರಂದು ಶ್ರೀಮಠದವಾಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು, ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕೊಡುವಂತೆ ಮನವಿ ಮಾಡಿದರು. 

ಗದಗ ತೋಂಟದಾರ್ಯ ಜಾತ್ರಾ ಮಹೋತ್ಸವದಲ್ಲೂ ವ್ಯಾಪಾರ ಧರ್ಮ ಸಮರ

ಅಲ್ಲದೇ ಟೆಂಡರ್ ಪ್ರತಿಯೆ ಹಾಗೂ ಟೆಂಟರ್ ಪಡೆದವರ ಹೆಸರು ಬಹಿರಂಗ ಪಡೆಸುವಂತೆ ಮನವಿ ಮಾಡಿದರು. ಆದರೆ ಸ್ಪಂದನೆ ಸಿಗಲಿಲ್ಲ ಅನ್ನೋ ಕಾರಣ ಮುಂದಿಟ್ಟುಕೊಂಡು ಶ್ರೀರಾಮ ಸೇನೆ ಧರಣಿ ನಡೆಸಿದೆ. ಜಾತ್ರೆಯ ಟೆಂಟರ್ ಬಹಿರಂಗವಾಗ್ಬೇಕು ಅನ್ನೋ ನಿಲುವು ತಾಳಿರುವ ರಾಮ ಸೇನೆ, ಹಿಂದೂ ವ್ಯಕ್ತಿಗೇ ಜಾತ್ರೆಯ ವ್ಯಾಪಾರದ ಮಳಿಗೆಗಳ ಟೆಂಡರ್ ಸಿಗ್ಬೇಕು ಅನ್ನೋದೂ ಸೇನೆ ವಾದ. ಆದರೆ ಈ ಬಗ್ಗೆ ಜಾತ್ರಾ ಮಂಡಳಿ, ಹಾಗೂ ಮಠದ ಪೀಠಾಧಿಪತಿ ಸಿದ್ದರಾಮ ಶ್ರೀಗಳು ಪ್ರತಿಕ್ರಿಯೆ ನೀಡಿಲ್ಲ. ಶ್ರೀಮಠದ ಜಾತ್ರೆಯನ್ನು ಭಾವೈಕ್ಯತೆ ಹಾಗೂ ಸಾಹಿತ್ಯದ ಉತ್ಸವವನ್ನಾಗಿ ಆಚರಿಸಲಾಗುತ್ತೆ. ಅರ್ಥಪೂರ್ಣ ಕಾರ್ಯಕ್ರಮಗಳಿಂದ ಜಾತ್ರೆ ಗಮನ ಸಳೆಯುತ್ತೆ.ಆದ್ರೆ ಈ ಬಾರಿ ಮಠಕ್ಕೂ ಪ್ಯಾಪಾರ ಧರ್ಮ ದಂಗಲ್ ಎಂಟ್ರಿಕೊಡುವ ಎಲ್ಲ ಲಕ್ಷಣ ಕಾಣುತ್ತಿವೆ. 
 
2A ಧ್ವನಿ ಎತ್ತಿರುವ ಜಯ ಮೃತ್ಯುಂಜಯ ಸ್ವಾಮಿಗಳು ಪೀಠತ್ಯಾಗ ಮಾಡಲಿ: ಪುಟ್ಟಸಿದ್ದ ಶೆಟ್ಟಿ

ಕೊರೊನಾ (Coronavirus) ಕಾರಣದಿಂದ ಕಳೆದಕೆಲ ವರ್ಷದಿಂದ ಜಾತ್ರೆ ಮಂಕಾಗಿತ್ತು. ಈ ಬಾರಿ ಏಪ್ರಿಲ್ 1ರಿಂದ ಜಾತ್ರೆಗೆ ಚಾಲನೆ ಸಿಗಲಿದೆ. ತಿಂಗಳುಗಳ ಕಾಲ ಶ್ರೀಮಠದ ಆವರಣದಲ್ಲಿ ವ್ಯಾಪಾರ ವ್ಯವಹಾರ ಭರ್ಜರಿಯಾಗೇ ನಡೆಯಲಿದೆ. ಜಾತ್ರೆ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗ್ತಿದ್ದಂತೆ, ಹಿಂದೂಗಳಿಗೆ ಮಾತ್ರ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು ಅನ್ನೋ ಕೂಗು ಕೇಳಿ ಬರ್ತಿದೆ.‌ ಈ ಹಿಂದೆ ಹಿಂದೂ ಸಂಘಟನೆ ಫೇಸ್ ಬುಕ್, ವಾಟ್ಸಾಪ್ ಅಭಿಯಾನಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ಪರ ವಿರೋಧ ಮಾತುಗಳು ಕೇಳಿ ಬಂದಿದ್ದವು. ನೂರಾರು ವರ್ಷಗಳ ಇತಿಹಾಸ ಹೊಂದಿರೋ ಮಠದ ಜಾತ್ರಾ ಮಹೋತ್ಸವದ ಹೆಸರಲ್ಲಿ ಸದ್ಯ ವ್ಯಾಪಾರ 'ಧರ್ಮ' ಸಮರ ಶುರುವಾಗಿದೆ. ಮುಸ್ಲಿಂ ವ್ಯಾಪಾರಸ್ಥರನ್ನು ನಿರ್ಬಂಧಿಸಬೇಕು ಅನ್ನೋ ನಿಲುವನ್ನ ಹಿಂದೂ ಸಂಘಟನೆ ತೆಗೆದುಕೊಂಡಿದ್ದು, ಜಾತ್ಯಾತೀತ, ಸಹಬಾಳ್ವೆ ನಿಲುವು ಹೊಂದಿರುವ ಶ್ರೀಮಠದಲ್ಲಿ ವ್ಯಾಪಾರ ನಿರ್ಬಂಧ ಸಲ್ಲದು ಅನ್ನೋದು ಕೆಲ ಭಕ್ತರ ನಿಲುವಾಗಿದೆ.

click me!