ಭರಮಸಾಗರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ವ್ಯವಸ್ಥೆ ಕೊಡಿಸಿ ಮಾನವೀಯತೆ ಮೆರೆದ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಏ.10): ಭರಮಸಾಗರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತದಲ್ಲಿ (Accident) ಗಾಯಗೊಂಡ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ವ್ಯವಸ್ಥೆ ಕೊಡಿಸಿ ಮಾನವೀಯತೆ ಮೆರೆದ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ (Basavaraj Horatti). ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕಲ್ಕುಂಟೆ ಗ್ರಾಮದ ಬಳಿ ಶಿಫ್ಟ್ ಕಾರೊಂದು ರಸ್ತೆ ವಿಭಜಕಕ್ಕೆ ಬಡಿದು ತೀವ್ರವಾಗಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರು ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ ಅವರ ಜೀವ ರಕ್ಷಿಸುವಲ್ಲಿ ನೆರವಾದ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ಮಾನವೀಯತೆ ಮೆರೆದಿದ್ದಾರೆ.
ಹುಬ್ಬಳ್ಳಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬಳಿಕ ಎಪ್ರಿಲ್ 11 ರಿಂದ 14 ರ ವರೆಗೆ ಆಸ್ಸಾಂ ರಾಜ್ಯದ ಗೌಹಾಟಿಯಲ್ಲಿ ನಡೆಯಲಿರುವ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಮಾರ್ಗ ಮಧ್ಯದಲ್ಲಿ ಭರಮಸಾಗರ ಬಳಿಯ ಕುಲ್ಕುಂಟೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಕಣ್ಣೆದುರಿಗೆ ಸಂಭವಿಸಿದ ಭಾರೀ ರಸ್ತೆ ಅಪಘಾತವನ್ನು ಗಮನಿಸಿ ಕೂಡಲೇ ತಮ್ಮ ವಾಹನ ನಿಲ್ಲಿಸಿ ಗಾಯಾಳುಗಳನ್ನು ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲು ಸಹಕರಿಸಿದರು. ಇಡಗುಂಜಿ ದೇವಸ್ಥಾನದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವರದರಾಜ, ಮಂಜುನಾಥ, ನಾಗೇಂದ್ರ ರಾವ್ ಮತ್ತು ಮೋಹನ್ ಕುಮಾರ ತೀವೃವಾಗಿ ಗಾಯಾಗೊಂಡಿದ್ದರು.
Karnataka Politics: 'ನಾವ್ಯಾರೂ ಕರೆದಿಲ್ಲ, ಹೊರಟ್ಟಿನೇ ಬಿಜೆಪಿಗೆ ಬರ್ತೀನಿ ಅಂತಾರೆ'
ಸಭಾಪತಿ ಹೊರಟ್ಟಿಯವರು ಕೂಡಲೇ ಸ್ಥಳೀಯ ಪೋಲೀಸರಿಗೆ ಮತ್ತು ಆಸ್ಪತ್ರೆಗೆ ಕರೆ ಮಾಡಿ ಬೇಗನೆ ಸ್ಥಳಕ್ಕೆ ಅಂಬುಲೆನ್ಸ್ ಕರೆಯಿಸಿ ನಾಲ್ಕು ಜನ ಗಾಯಾಳುಗಳಿಗೆ ಚಿಕಿತ್ಸೆ ಕೊಡಸುವಲ್ಲಿ ನೆರವಾಗಿ ಮಾನವೀಯತೆ ಮೆರೆದರು. ಸುಮಾರು 45 ನಿಮಿಷಗಳಿಗೂ ಹೆಚ್ಚು ಕಾಲ ಅಪಘಾತ ಸ್ಥಳದಲ್ಲಿಯೇ ಇದ್ದು ಗಾಯಾಳುಗಳಿಗೆ ಧೈರ್ಯ ಹೇಳಿ ಅವರಿಗೆ ತುರ್ತು ಚಿಕಿತ್ಸೆ ಕೊಡಿಸುವಲ್ಲಿ ಶ್ರಮಿಸಿದ ಸಭಾಪತಿಗಳ ಸೇವಾ ಮನೋಭಾವದ ಗುಣ ಅಪಘಾತ ಸ್ಥಳದಲ್ಲಿ ನೆರೆದಿದ್ದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಖುಷಿ ತಂದಿತು.
ಬಿಜೆಪಿ ಸೇರುವ ಬಗ್ಗೆ ಸ್ಪಷ್ಟ ನಿರ್ಧಾರ ಮಾಡಿಲ್ಲ ಎಂದ ಹೊರಟ್ಟಿ: ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಆಗ್ತಾರೆ ಎಂಬುದು ನನಗೆ ಖುಷಿ ಇದೆ , ನಾನು ಯಾವುದಕ್ಕೂ ತಲೆಕೆಡಸಿಕ್ಕೊಳ್ಳಲ್ಲ ಶಿಕ್ಷಕರ ಕ್ಷೇತ್ರದಿಂದ ಸ್ಪರ್ದೆಗೆ ಲಿಂಬಿಕಾಯಿ ಮತ್ತು ಹೊರಟ್ಟಿ ಮಧ್ಯೆ ಸದ್ಯ ವಾಕ್ಸಮರ ನಡೆದಿದೆ. ಬಿಜೆಪಿಯಿಂದ ಲಿಂಬಿಕಾಯಿ ಅಭ್ಯರ್ಥಿ ಆದರೆ ನನಗೆ ತೊಂದರೆ ಇಲ್ಲ ಬಿಜೆಪಿ ಪಕ್ಷಕ್ಕೆ ಸೇರೋ ವಿಚಾರಕ್ಕೆ ಉಲ್ಟಾ ಹೊಡೆದ್ರಾ ಬಸವರಾಜ ಹೊರಟ್ಟಿ ಅನ್ನೋ ಮಾತುಗಳು ಸದ್ಯ ಹೇಳಿ ಬರುತ್ತಿವೆ.
ಧಾರವಾಡದಲ್ಲಿ ಮಾತನಾಡಿದ ಉಪಸಭಾಪತಿ ಬಸವರಾಜ ಹೊರಟ್ಟಿ, ಬಿಜೆಪಿ ಪಕ್ಷಕ್ಕೆ ನಾನು ಇನ್ನು ಹೊಗಿಲ್ಲ ನನಗೆ ಕೆಲ ಬಿಜೆಪಿಯವರು ಕೇಳಿದ್ರೂ ನಾನು ಎಲ್ಲವೂ ಡಿಕ್ಲೇರ್ ಆಗಲಿ ಎಂದು ಹೇಳಿದ್ದೆನೆ. ಇನ್ನು ಚುನಾವಣೆ ಘೋಷಣೆ ಆಗಲಿ ಆದ ಮೆಲೆ ಎಲ್ಲವನ್ನೂ ನಿರ್ಧಾರ ಮಾಡೋಣ ಅಂತ ವಿಚಾರ ಮಾಡುತ್ತಿದ್ದೆನೆ. ಇನ್ನು ಸಮಯ ಇದೆ, ನಾನು ಬಿಜೆಪಿ ಸೆರೋದರ ಬಗ್ಗೆ ಇನ್ನು ಸ್ಪಷ್ಟ ನಿರ್ಧಾರ ಮಾಡಿಲ್ಲ ನಾನು ಸುಳ್ಳ ಹೇಳಲ್ಲ, ಅವರು ನನಗೆ ಟಿಕೆಟ್ ಇಲ್ಲ ಅಂದ್ರು ಅಭ್ಯಂತರವೇನಿಲ್ಲ ಎಂದಿದ್ದಾರೆ. ನಾನು ಚುನಾವಣೆಗೆ ನಿಲ್ಲೋದು ಗ್ಯಾರಂಟಿ, ಹೇಗೆ ನಿಲ್ತೇನೆ ಅನ್ನೋದನ್ನ ಹೇಳಲ್ಲ.
Karnataka Politics ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಘೋಷಣೆ
ನಾನು ಯಾವ ಪಕ್ಷದಿಂದ ನಿಲ್ಲಲಿ ಬಿಡಲಿ ಶಿಕ್ಷಕರು ನನ್ನ ಸೋಲಿಸಲಿಕ್ಕೆ ಸಾಧ್ಯನೇ ಇಲ್ಲ ಅವರೆಲ್ಲರೂ ಸೇರಿ ನನ್ನನ್ನ ಗೆಲ್ಲಿಸೇ ತೀರುತ್ತಾರೆ ನನಗೆ ಬಿಜೆಪಿ ಅವರು ನಮ್ಮ ಪಕ್ಷದಿಂದ ನಿಲ್ಲಿ ಎಂದು ಕೇಳಿದ್ರು. ಸಹಜವಾಗಿ ನಾನು ಒಕೆ ಅಂದಿದ್ದೆನೆ. ನಾನು ಜೆಡಿಎಸ್ ನಿಂದ ದೊಡ್ಡವನಾಗಿದ್ದೆನೆ. ಯಾರಿಗೂ ಜೆಡಿಎಸ್ ಪಕ್ಷ ಬಿಟ್ಟು ಹೋಗಿ ಅಂತ ಹೇಳಿಲ್ಲ. ಬದಲಾವಣೆಯ ವಿಚಾರವಾಗಿ ಈ ರೀತಿಯಾಗಿದೆ ಮುಂದೆ ಎನ್ ಆಗುತ್ತೆ ಎಂಬುದನ್ನ ಕಾದು ನೋಡೋಣ. ಶಿಕ್ಷಕರೇ ನಮಗೆ ನೀವೆ ದೇವರು ಅಂತ ಹೇಳ್ತಾ ಇದಾರೆ. ನಾನು ಶಿಕ್ಷಕರಿಗೆ ಅನ್ಯಾಯ ಮಾಡಲ್ಲ ನಾನು ಪಶ್ಚಿಮ ಶಿಕ್ಷಣ ಕ್ಷೆತ್ರದಿಂದ ನಿಲ್ಲೋದು ಗ್ಯಾರಂಟಿ ಎಂದು ಹೇಳಿದರು.