Chamarajanagar: ವಿಕಲಚೇತನರನ್ನು ಮುಖ್ಯವಾಹಿನಿಗೆ ತರಲು ನೆರವಾಗಿ: ಸಚಿವ ಸೋಮಣ್ಣ

Published : Dec 05, 2022, 07:44 PM IST
Chamarajanagar: ವಿಕಲಚೇತನರನ್ನು ಮುಖ್ಯವಾಹಿನಿಗೆ ತರಲು ನೆರವಾಗಿ: ಸಚಿವ ಸೋಮಣ್ಣ

ಸಾರಾಂಶ

ವಿಕಲಚೇತನರನ್ನು ಪ್ರೀತಿ, ಗೌರವದಿಂದ ಕಂಡು ಸಮಾಜಮುಖಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟು ಮುಖ್ಯವಾಹಿನಿಗೆ ತರುವಲ್ಲಿ ಪ್ರತಿಯೊಬ್ಬರು ನೆರವಾಗಬೇಕು ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು. 

ಚಾಮರಾಜನಗರ (ಡಿ.05): ವಿಕಲಚೇತನರನ್ನು ಪ್ರೀತಿ, ಗೌರವದಿಂದ ಕಂಡು ಸಮಾಜಮುಖಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟು ಮುಖ್ಯವಾಹಿನಿಗೆ ತರುವಲ್ಲಿ ಪ್ರತಿಯೊಬ್ಬರು ನೆರವಾಗಬೇಕು ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು. ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿವಿಧ ಇಲಾಖೆಗಳು, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ, ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಹಲವು ಸೌಲಭ್ಯ, ಸವಲತ್ತು ಕಲ್ಪಿಸಿದೆ. ಶೇ. 40ರಷ್ಟುಅಂಗವಿಕಲತೆ ಹೊಂದಿರುವವರಿಗೆ ಈ ಹಿಂದೆ ನೀಡುತ್ತಿದ್ದ 600 ರು. ಮಾಸಾಶನ 800ಕ್ಕೆ ಏರಿಸಲಾಗಿದೆ. ಶೇ. 75ರಷ್ಟುಅಂಗವಿಕಲತೆ ಇರುವವರಿಗೆ 1200ರಿಂದ 1400 ರು. ಏರಿಕೆ ಮಾಡಲಾಗಿದೆ. ಬುದ್ದಿಮಾಂದ್ಯರಿಗೆ 1200 ರು. ನಿಂದ 2000 ರು. ಗೆ ಹೆಚ್ಚಿಸಲಾಗಿದೆ ಎಂದರು. ಜಿಲ್ಲೆಯಲ್ಲಿ 20460 ಅಂಗವಿಕಲರಿದ್ದಾರೆ. 206 ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಲಾಗಿದೆ. ವಿಕಲಚೇತನರನ್ನು ವಿವಾಹವಾಗುವ ಅಂಗವಿಕಲರಿಗೆ ಸರ್ಕಾರದಿಂದ 50 ಸಾವಿರ ರು. ಫ್ರೋತ್ಸಾಹಧನ, ಲ್ಯಾಪ್‌ಟಾಪ್‌ ವಿತರಣೆ, 25 ಅಂಗವಿಕಲ ಮಕ್ಕಳಿಗೆ ಹಾಸ್ಟೆಲ್‌ ವ್ಯವಸ್ಥೆ, 993 ಅಂಗವಿಕಲರಿಗೆ ಅಗತ್ಯ ಸಲಕರಣೆ ವಿತರಣೆ ಮಾಡಲಾಗಿದೆ. ಹೆರಿಗೆಯಾಗುವ ದೃಷ್ಟಿಹೀನ ಹೆಣ್ಣು ಮಕ್ಕಳಿಗೆ 2 ವರ್ಷಗಳ ಕಾಲ ಪ್ರತಿ ತಿಂಗಳು 2 ಸಾವಿರ ಶಿಶುಪಾಲನಾ ಭತ್ಯೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

Chamarajanagar: ರೈತನ ಮೇಲೆರಗಿದ ಹುಲಿ, ರೈತ ಪಾರು

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಸರ್ಕಾರದ ಯೋಜನೆಗಳ ಕುರಿತು ಅಂಗವಿಕಲರಿಗೆ ನಿರಂತರ ಅರಿವು ಮೂಡಿಸುತ್ತಿದ್ದಾರೆ. ಅಂಗವಿಕಲತೆ ಪ್ರಕೃತಿ ನಿಯಮ. ಅದನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ದೇಶದ ಪ್ರಗತಿಯಲ್ಲಿ ವಿಕಲಚೇತನರ ಪಾತ್ರ ಪ್ರಮುಖ. ಇಂದು ಅಂಗವಿಕಲರು ದೇಶದ ಎಲ್ಲ ಅಭಿವೃದ್ಧಿ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಸಹಕರಿಸಬೇಕಿದೆ ಎಂದು ಹೇಳಿದರು. ವಿಕಲಚೇತನ ಮಕ್ಕಳು ಜನಿಸಿದರೂ ತಾಯಿಂದಿರು ಎದೆಗುಂದದೇ ನೋವು, ಅಂತರಾಳದ ಭಾವನೆ ಮೆಟ್ಟಿನಿಲ್ಲುವುದು ಭಾರತೀಯ ಸಂಸ್ಕೃತಿ. ಅಂಗವಿಕಲರನ್ನು ಸಮಾಜದ ಸತ್ಪ್ರಜೆಗಳಾಗಿ ರೂಪಿಸುವಲ್ಲಿ ಎಂತಹುದೇ ಸನ್ನಿವೇಶ, ಸಂದರ್ಭ ಎದುರಾದರೂ ಪೋಷಕರು ಧೃತಿಗೆಡಬಾರದು. ಸರ್ಕಾರ ನಿಮ್ಮ ಜೊತೆಗಿದೆ ವಿಕಲಚೇತನ ದೈಹಿಕ, ಮಾನಸಿಕ ಅಂಗವಿಕಲತೆಯಿಂದ ಬಳಲುವ ಮಕ್ಕಳಿಗೆ ಆತ್ಮಸ್ಥೆತ್ರೖರ್ಯ, ಮನೋಸ್ಥೆತ್ರೖರ್ಯ ತುಂಬುವ ಅಗತ್ಯವಿದೆ ಎಂದರು.

ಕೊಳ್ಳೇಗಾಲ ಕೆರೆಗಳ ಅಭಿವೃದ್ಧಿಗೆ 10 ಕೋಟಿ: ಸಚಿವ ಸೋಮಣ್ಣ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಂಗವಿಕಲರನ್ನು ಸಚಿವ ವಿ. ಸೋಮಣ್ಣ, ಗಣ್ಯರು ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎನ್‌. ಮಹೇಶ್‌, ನಿರಂಜನಕುಮಾರ್‌, ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ, ಡೀಸಿ ರಮೇಶ್‌, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಎಸ್ಪಿ ಟಿ.ಪಿ. ಶಿವಕುಮಾರ್‌, ಎಎಸ್ಪಿ ಕೆ.ಎಸ್‌. ಸುಂದರ್‌ರಾಜ್‌, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿ​ಕಾರಿ ದೀಪಾ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗೀತಾಲಕ್ಷಿತ್ರ್ಮೕ, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್‌ ಕಾರ್ಯಕ್ರಮದಲ್ಲಿ ಇದ್ದರು. ಕಾರ್ಯಕ್ರಮದ ಬಳಿಕ ಜಿಲ್ಲಾಮಟ್ಟದ ವಿಕಲಚೇತನರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಲಾಯಿತು.

PREV
Read more Articles on
click me!

Recommended Stories

ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ