ಕಾಫಿನಾಡಲ್ಲಿ ಮೆಡಿಕಲ್ ಕಾಲೇಜು ಆರಂಭವಾಗಲು ಕಾಫಿ ಡೇ ಮಾಲೀಕ ಸಿದ್ದಾರ್ಥ್ ಹೆಗ್ಡೆಯವರೇ ಕಾರಣ. ಇಂದು ಅವರನ್ನ ನೆನೆಯಲೇಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಒಮ್ಮೆ ಸಿದ್ಧಾರ್ಥ್ ಅವರನ್ನ ಭೇಟಿ ಮಾಡಲು ಹೋದಾಗ ರವಿ, ಚಿಕ್ಕಮಗಳೂರಲ್ಲಿ ಏಕೆ ಮೆಡಿಕಲ್ ಕಾಲೇಜು ಆಗಿಲ್ಲ ಎಂದಿದ್ದರು. ಇಂದಿನ ನಮ್ಮ ಈ ಖುಷಿಗೆ ಅವರೇ ಕಾರಣ ಎಂದರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಡಿ.5): ಕಾಫಿನಾಡಲ್ಲಿ ಮೆಡಿಕಲ್ ಕಾಲೇಜು ಆರಂಭವಾಗಲು ಕಾಫಿ ಡೇ ಮಾಲೀಕ ಸಿದ್ದಾರ್ಥ್ ಹೆಗ್ಡೆಯವರೇ ಕಾರಣ. ಇಂದು ಅವರನ್ನ ನೆನೆಯಲೇಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರು ತಾಲೂಕಿನ ತೇಗೂರಿನಲ್ಲಿ ನಿರ್ಮಾಣವಾಗುತ್ತಿರುವ ಮೆಡಿಕಲ್ ಕಾಲೇಜಿನ ಮೊದಲ ವರ್ಷದ ಕಾಲೇಜು ಆರಂಭದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಮ್ಮೆ ಸಿದ್ಧಾರ್ಥ್ ಅವರನ್ನ ಭೇಟಿ ಮಾಡಲು ಹೋದಾಗ ಅವರು ಕೇಳಿದ್ದರು. ರವಿ, ಚಿಕ್ಕಮಗಳೂರಲ್ಲಿ ಏಕೆ ಮೆಡಿಕಲ್ ಕಾಲೇಜು ಆಗಿಲ್ಲ ಎಂದರು. ಆಗ ನನ್ನ ತಲೆಯಲ್ಲಿ ಕಾಲೇಜು ತರಬೇಕು ಎಂಬ ಭಾವನೆ ಮೂಡಿತ್ತು. ಇಂದಿನ ನಮ್ಮ ಈ ಖುಷಿಗೆ ಅವರೇ ಕಾರಣ ಎಂದರು. ಜಿಲ್ಲೆಯ ಈ ಮೆಡಿಕಲ್ ಕಾಲೇಜಿಗೆ ಕಾರಣಕರ್ಥರಾದ ಪ್ರಧಾನಿ ಮೋದಿ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಆರ್.ಎಸ್.ಎಸ್. ನ ಸಂತೋಷ್ ಜೀ, ಯಡಿಯೂರಪ್ಪ, ಸುಧಾಕರ್, ಸಿಎಂ ಬೊಮ್ಮಾಯಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಕಾಲೇಜಿಗೆ ಆರಂಭದಲ್ಲಿ ಕೊರತೆ ಇತ್ತು. ಅದನ್ನೆಲ್ಲಾ ಬಗೆಹರಿಸಿದ್ದೇವೆ. ಸಮಸ್ಯೆಯನ್ನ ಬಗೆಹರಿಸಲು ಕಾಫಿನಾಡ ಸಹೃದಯಿಗಳಿದ್ದಾರೆ. 18 ಗಂಟೆಯಲ್ಲಿ 18 ಲಕ್ಷದ ಬಸ್ ಕೊಟ್ಟವರು ಇದ್ದಾರೆ. ಸರ್ಕಾರ, ದಾನಿಗಳಿಂದ ಕಾಲೇಜಿಗೆ ಎಲ್ಲಾ ಸೌಲಭ್ಯವಾಗಿದೆ. ಹೊಸ ಕಾಲೇಜು ಹೇಗೋ-ಏನೋ ಎಂದು ಪೋಷಕರು ಭಯ ಪಡಬೇಡಿ. ನಿಮ್ಮ ಮಕ್ಕಳನ್ನ ನಮ್ಮ ಮಕ್ಕಳ ರೀತಿ ನೋಡಿಕೊಳ್ತೀವಿ. ಭಯ ಪಡಬೇಡಿ ಎಂದರು.
ಒಬ್ಬರು ಸಿಎಂ ಇದ್ದರು. ಮೆಡಿಕಲ್ ಕಾಲೇಜಿನಲ್ಲೂ ರಾಜಕಾರಣ ಹುಡುಕಿದ್ದರು. ಎಷ್ಟು ಜನರನ್ನ ಗೆಲ್ಲಿಸಿದ್ದೀರಾ, ಕೊಡಲ್ಲ ಎಂದಿದ್ದರು. ಅಧಿಕಾರ ಶಾಶ್ವತವಲ್ಲ. ನೀವು ಮಾಡದಿದ್ದರೆ ಮುಂದೆ ಬರುವ ಪಕ್ಷ ಮಾಡುತ್ತೆ ಎಂದು ಮುಖಕ್ಕೆ ಹೇಳಿದ್ದೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿವಿದಿದ್ದಾರೆ. ಸಿದ್ಧಾರ್ಥ್ ಅವರ ಕನಸಿನಂತೆ ಏರ್ ಸ್ಟ್ರಿಪ್ ಗೆ ಮಂಜೂರಾತಿ ಸಿಕ್ಕಿದೆ. ಆ ಕೆಲಸವೂ ಆರಂಭವಾಗುತ್ತೆ ಎಂದರು.
'ಸಿದ್ರಾಮುಲ್ಲಾ ಖಾನ್' ಸಮರ: ಕೈ Vs ಕೇಸರಿ ಬೀದಿ ಕಾಳಗ
ಎಲ್ಲರಿಗೂ ಕ್ಲೀನ್ ಚಿಟ್ ಕೊಟ್ಟಿಲ್ಲ :
ಎಲ್ಲಾ ರೌಡಿಶೀಟರ್ ಗಳು ರೌಡಿಗಳಲ್ಲ ಅಂತಾ ಹೇಳಿದ್ದೆ.ರೌಡಿಶೀಟರ್ ನಲ್ಲಿರೋ ಎಲ್ಲರಿಗೂ ಕ್ಲೀನ್ ಚಿಟ್ ನಾನು ಕೊಟ್ಟಿಲ್ಲ ಹೇಳಿಕೆಯನ್ನು ಸುದ್ದಿಗಾರರೊಂದಿಗೆ ಮಾತಾಡುವ ವೇಳೆಯಲ್ಲಿ ಸಿ.ಟಿ ರವಿ ಸಮರ್ಥನೆ ಮಾಡಿಕೊಂಡರು. ನಿಮ್ಮ ಪಕ್ಷದ ಆರ್.ವಿ ದೇವರಾಜ್, ಹರಿಪ್ರಸಾದ್ ಬಗ್ಗೆ ಕಾಂಗ್ರೆಸ್ ಅವಲೋಕನ ಮಾಡಿಕೊಳ್ಳಲಿ. ಸಾವಿರಾರು ಜನರನ್ನ ರಾಜಕೀಯ ಕಾರಣಕ್ಕೆ ರೌಡಿ ಶೀಟ್ ನಲ್ಲಿ ಸೇರಿಸ್ತಾರೆ.ಅವರು ಯಾರೂ ರೌಡಿಗಳಾಗಿರುವುದಿಲ್ಲ, ಅವರ ಬಗ್ಗೆ ಹೇಳಿದ್ದೇನೆ. ವೃತ್ತಿಯನ್ನೇ ಹಫ್ತಾ, ಬೆದರಿಕೆ ಮಾಡಿಕೊಂಡಿರೋರ ಬಗ್ಗೆ ನಾನೆಂದೂ ಕ್ಲೀನ್ಚಿಟ್ ಕೊಡಲ್ಲ. ರಾಜಕೀಯ ಕಾರಣಕ್ಕೆ ರೌಡಿಶೀಟರ್ ಸೇರಿಸಿರುವವರ ಬಗ್ಗೆ ಹೇಳಿದ್ದೇನೆ. ಈ ಹಿಂದೆ ನನ್ನನ್ನು ಕುಡುಕ ಅಂತಾ ಹೇಳಿದ್ರು. ಕುಡಿದು, ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ ಒಂದು ಉದಾಹರಣೆ ಇದ್ಯಾ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರಡಿಯಲ್ಲಿ ಬೆಳೆದವನು ನಾನು, ಇದು ಕಾಂಗ್ರೆಸ್ ನ ಮನಸ್ಥಿತಿಯನ್ನ ತೋರಿಸುತ್ತೆ.ತಾನು ಕಳ್ಳ ಪರರ ನಂಬ ಅನ್ನೋ ಮನಸ್ಥಿತಿ ಕಾಂಗ್ರೆಸ್ ನದ್ದು, ಬೆಳಗ್ಗೆ 5 ಗಂಟೆಯಿಂದ ರಾತ್ರಿ 11ಗಂಟೆ ತನಕ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದರು.
Karnataka Assembly election: ಸಿ.ಟಿ. ರವಿ ಅವರ 'ಸಿದ್ರಾಮುಲ್ಲಾ ಖಾನ್' ಹೇಳಿಕೆ ಸಮರ್ಥಿಸಿಕೊಂಡ ಬಿಜೆಪಿ
ಗುಜರಾತ್ ನಲ್ಲಿ ಮತ್ತೆ ಅಧಿಕಾರಿಕ್ಕೆ ಬಿಜೆಪಿ :
ಗುಜರಾತ್ ಚುನಾವಣೆ ಬಗ್ಗೆ ಮಾತನಾಡಿ ಗುಜರಾತಿನಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯುತ್ತೆ. ಹಿಂದಿನ ಎಲ್ಲಾ ದಾಖಲೆಗಳನ್ನು ದೂಳಿಪಟ ಮಾಡಿ ಮತ್ತೆ ಬಿಜೆಪಿ ಅಧಿಕಾರ ಬರುತ್ತೆ. ಹಿಂದಿನ ಚುನಾಚಣೆಯಲ್ಲಿ ತೆಗೆದುಕೊಂಡ ಸೀಟಿಕ್ಕಿಂತ ಹೆಚ್ಚು ಸ್ಥಾನ ಬರುತ್ತೆ. ನಾಮ್ ಮತ್ತು ಕಾಮ್ ಇವೆರಡರ ಆಧಾರದಲ್ಲಿ ಜನ ಮತ ಹಾಕುತ್ತಾರೆ. ಪ್ರಧಾನಿ ಮೋದಿ, ಗುಜರಾತ್ ಸರ್ಕಾರದ ಸಾಧನೆಗೆ ಜನರು ಮತ ಹಾಕ್ತಾರೆ. ಚುನಾವಣಾ ಫಲಿತಾಂಶದಿಂದ ರಾವಣ ಯಾರು ರಾಮ ಯಾರು ಎನ್ನುವುದು ಗೊತ್ತಾಗುತ್ತೆ ಎಂದು ಕಾಂಗ್ರೇಸ್ ಟಾಂಗ್ ನೀಡಿದರು. ರಾಮ ಮತ್ತೆ ಗೆದ್ದು ಬರ್ತಾನೆ, ರಾಮನ ಹಿಂಬಾಲಿಸುವ ಪಕ್ಷ ಮತ್ತೆ ಗೆದ್ದೆ ಬರುತ್ತದೆ. ರಾವಣ ಶಕ್ತಿಗಳು ನಾಶವಾಗುತ್ತದೆ. ಖರ್ಗೆಯವರಿಗೆ ಚಿಂತೆ ಬೇಡ, ರಾವಣನ ನಾಶ ಶತಸಿದ್ಧ ಎಂದು ಹೇಳಿದರು.