ಆತ ಸ್ಪುರದ್ರೂಪಿ ಯುವಕ ಡಬಲ್ ಗ್ರಾಜುಯೇಟ್, ಓದಿ ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ ಹಿಡಿದು ತನಗಿದ್ದ ನಾಲ್ಕು ಜನ ಸಹೋದರಿಯರಿಯರನ್ನ ಮದುವೆ ಮಾಡಿಕೊಟ್ಟು ತಾನೂ ಸಹ ಮದುವೆ ಆಗಿ ಸುಖ ಸಂಸಾರಕ್ಕೆ ಅನಿಯಾಗಿದ್ದ ಅಷ್ಟೊತ್ತಿಗಾಗಲೇ ವಿಧಿ ಆತನ ಬಾಳಲ್ಲಿ ಆಡಬಾರದ ಆಟವಾಡಿತ್ತು.
ವರದಿ: ಮುಷ್ತಾಕ್ ಪೀರ್ಜಾದೆ, ಏಷ್ಯಾನೆಟ್ ಸುವರ್ಣನ್ಯೂಸ್
ಚಿಕ್ಕೋಡಿ (ಡಿ.5): ಆತ ಸ್ಪುರದ್ರೂಪಿ ಯುವಕ ಡಬಲ್ ಗ್ರಾಜುಯೇಟ್, ಓದಿ ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ ಹಿಡಿದು ತನಗಿದ್ದ ನಾಲ್ಕು ಜನ ಸಹೋದರಿಯರಿಯರನ್ನ ಮದುವೆ ಮಾಡಿಕೊಟ್ಟು ತಾನೂ ಸಹ ಮದುವೆ ಆಗಿ ಸುಖ ಸಂಸಾರಕ್ಕೆ ಅನಿಯಾಗಿದ್ದ ಅಷ್ಟೊತ್ತಿಗಾಗಲೇ ವಿಧಿ ಆತನ ಬಾಳಲ್ಲಿ ಆಡಬಾರದ ಆಟವಾಡಿತ್ತು. ಆ ವಿಧಿಗೆ ಸೆಡ್ಡು ಹೊಡೆದು ಆ ಯುವಕ ತಾಯಿ ಮಾಡಿದ ತ್ಯಾಗ ಎಂಥದ್ದು ಗೊತ್ತಾ. ಈಗ ಆ ತಾಯಿ ಮಾಡಿದ ತ್ಯಾಗವೂ ಸಹ ನೀರಲ್ಲಿ ಹೋಮ ಮಾಡಿದ ಹಾಗೇ ಆಗಿದೆ.
ಈ ಫೋಟೊದಲ್ಲಿ ಕಾಣ್ತಿರೋ ಈ ಯುವಕನ ಹೆಸರು ಸಂತೋಷ ಗೋವಿಂದಗೋಳ ಅಂತ.. ಮೊದಲೇ ಹೇಳಿದ ಹಾಗೇ ಡಬಲ್ ಡಿಗ್ರಿ ಗ್ರಾಜುಯೇಟ್ ಸ್ಪುರದ್ರೂಪಿಯೂ ಹೌದು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದ ನಿವಾಸಿ ಈ ಸಂತೋಷ್ ಬಾಳಲ್ಲಿ ವಿಧಿ ಅದೆಂತಾ ಆಟ ಆಡಿದೆ ಅಂದ್ರೆ ಸಂತೋಷಗೆ ಯಾವುದೇ ದುರಭ್ಯಾಸ ಇಲ್ಲದಿದ್ದರೂ ಸಹ ಈತನ ಎರಡೂ ಕಿಡ್ನಗಳು ಫೇಲ್ ಆಗಿವೆ. ಫಿಟ್ ಆಂಡ್ ಫೈನ್ ಆಗಿದ್ದ ಸಂತೋಷ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಈ ಪರಿಸ್ಥಿತಿ ತಲುಪಿದ್ದು ಸಂತೋಷ್ ಟ್ರೀಟ್ಮೆಂಟ್ ಗಾಗಿ ಹಿರಿಯರಿಂದ ಬಳುವಳಿಯಾಗಿ ಬಂದಿದ್ದ ಒಂದುವರೆ ಎಕರೆ ಜಮೀನು ಮಾರಿ ಸಂತೋಷ್ ಗೆ ಟ್ರೀಟ್ಮೆಂಟ್ ಮಾಡಿಸಲಾಗಿದೆ. ಅಲ್ಲದೆ ಸಂತೋಷ ತಾಯಿ ತನ್ನ ಒಂದು ಕಿಡ್ನಿ ನೀಡಿದರೂ ಸಹ ಸಂತೋಷ ಸರಿ ಹೋಗಿಲ್ಲ.
ಲಾಲೂ ಪ್ರಸಾದ್ ಯಾದವ್ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ, ಮಗಳಿಂದಲೇ ಕಿಡ್ನಿ ದಾನ!
ಸಂತೋಷ ತಾಯಿ ಶಾಂತಾ ಸ್ಥಳೀಯ ಉರ್ದು ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡ್ತಾರೆ. ಇದ್ದ ಇಬ್ಬ ಮಗನ ಪರಿಸ್ಥಿತಿ ಹೀಗಾಯ್ತಲ್ಲ ಅಂತ ನಿತ್ಯ ಕಣ್ಣೀರಲ್ಲಿಯೇ ಕೈ ತೊಳೆಯುತ್ತಿರುವ ಶಾಂತಾ ಅವರು ಈಗ ಬದುಕಿರೋದು ಕೇವಲ ಒಂದೇ ಕಿಡ್ನಿಯ ಮೇಲೆಯೇ.. ಮಗ ಚನ್ನಾಗಿರಲಿ ಅಂತ ತನ್ನೊಂದು ಕಿಡ್ನಿ ಮಗನಿಗೆ ನೀಡಿದರೂ ಸಹ ಆ ಕಿಡ್ನಿ ಒಂದು ವರ್ಷಗಳ ಕಾಲ ಸರಿಯಾಗಿ ಕೆಲಸ ಮಾಡಿ ಸಧ್ಯ ಈಗ ವರ್ಕ್ ಆಗುವುದೇ ನಿಂತು ಹೋಗಿದೆ. ಹೀಗಾಗಿ ಈ ಕುಟುಂಬಕ್ಕೆ ಈಗ ದಿಕ್ಕೆ ತೋಚದಂತಾಗಿದೆ. ವಾರದಲ್ಲಿ ಎರಡು ಸಲ ಬೆಳಗಾವಿಯ ಖಾಸಗಿ ಆಸ್ಪತ್ರಗೆ ಡಯಾಲಿಸಸ್ ಗೆ ಹೋಗಿ ಬರುವುದಕ್ಕೂ ಸಹ ಸಾಧ್ಯವಾಗದೇ ಕುಟುಂಬ ಪರದಾಡುತ್ತಿದೆ. ಸದ್ಯ ಈ ಕುಟುಂಬ ಚಿಕಿತ್ಸೆ ವೆಚ್ಚವನ್ನೂ ಸಹ ಭರಿಸಲಾಗದ ಪರಿಸ್ಥಿಗತಿಯಲ್ಲಿದೆ.
Udupi: ಮಹಿಳೆಯ ದೇಹದಿಂದ ವಿಶ್ವದ ಅತಿ ದೊಡ್ಡ ಕಿಡ್ನಿ ಸ್ಟೋನ್ ಹೊರ ತೆಗೆದ ಮಣಿಪಾಲದ ವೈದ್ಯರು
ಮಗನ ಚಿಕಿತ್ಸೆಗೆ ಹಣವೇ ಬೇಕು ಅಂತೇನಿಲ್ಲ ಹೇಗಾದರೂ ಮಾಡಿ ಅವನಿಗೆ ಚಿಕಿತ್ಸೆ ಕೊಡಿಸಿ ಅಂತ ಸಂತೋಷ ತಾಯಿ ಅಂಗಲಾಚುತ್ತಿದ್ದಾರೆ. ಇದ್ದೊಬ್ಬ ಮಗನನ್ನು ಕಳೆದುಕೊಳ್ಳುವ ಭೀತಿಯಲ್ಲಿ ಸಂತೋಷ ತಾಯಿ ಶಾಂತಾರವರಿದ್ದು ಸಂತೋಷ ಗೆ ಶ್ರೀಘ್ರ ಚಿಕಿತ್ಸೆಯ ಅವಶ್ಯಕತೆ ಇದ್ದು ಯಾರಾದರೂ ಈ ಕುಟುಂಬಕ್ಕೆ ಸಹಾಯ ಮಾಡಬೇಕಿದ್ದರೆ ಸಂತೋಷ ಅವರ ಹೆಸರಲಿನಲ್ಲಿರುವ ಎಸ್ ಬಿ ಐ ಹುಕ್ಕೇರಿ ಶಾಖೆಯಲ್ಲಿ ಅವರು ಹೊಂದಿರುವ ಅಕೌಂಟ್ ನಂಬರಿಗೆ ಹಣ ಸಹಾಯ ಮಾಡಬಹುದು. ಅಕೌಂಟ್ ನಂಬರ್ ಹಾಗೂ ಐ ಎಫ್ ಎಸ್ ಸಿ ಕೋಡ್ ಇಂತಿವೆ.
ಸಂತೋಷ ಈಶ್ವರ ಗೋವಿಂದಗೋಳ
Account number 31484400665
Ifsc code: SBIN0040302