ಕಳೆದ ತಿಂಗಳಷ್ಟೇ ಮಹಾಮಳೆ ನರ್ತನಕ್ಕೆ ತತ್ತರಿಸಿಹೋಗಿದ್ದ ರೈತ ಚೇತರಿಸಿಕೂಳ್ಳುವ ಮುನ್ನ ಮತ್ತೆ ವರುಣಾಘಾತದಿಂದ ರೈತರು ಕಣ್ಣೀರಿಡುವಂತಾಗಿದೆ. ಸುವರ್ಣಾವತಿ ಮತ್ತು ಚಿಕ್ಕಹೊಳೆ ಅವಳಿ ಜಲಾಶಯಗಳು ಭರ್ತಿಗೂಂಡಿದೆ. ಹೆಚ್ಚುವರಿ ನೀರು ಹೊರಬಿಡಲಾಗುತ್ತಿದೆ.
ಯಳಂದೂರು (ಅ.17): ಕಳೆದ ತಿಂಗಳಷ್ಟೇ ಮಹಾಮಳೆ ನರ್ತನಕ್ಕೆ ತತ್ತರಿಸಿಹೋಗಿದ್ದ ರೈತ ಚೇತರಿಸಿಕೂಳ್ಳುವ ಮುನ್ನ ಮತ್ತೆ ವರುಣಾಘಾತದಿಂದ ರೈತರು ಕಣ್ಣೀರಿಡುವಂತಾಗಿದೆ. ಸುವರ್ಣಾವತಿ ಮತ್ತು ಚಿಕ್ಕಹೊಳೆ ಅವಳಿ ಜಲಾಶಯಗಳು ಭರ್ತಿಗೂಂಡಿದೆ. ಹೆಚ್ಚುವರಿ ನೀರು ಹೊರಬಿಡಲಾಗುತ್ತಿದೆ. ಇದರಿಂದ ನೀರಿನ ಹರಿವು ಜಾಸ್ತಿಯಾಗಿದ್ದರಿಂದ ಸುವರ್ಣಾವತಿ ರಣಕೇಕೆ ಆರ್ಭಟಕ್ಕೆ ಅನ್ನದಾತನ ಬದುಕನ್ನು ಮೂರಾ ಬಟ್ಟಿಯಾಗಿದೆ.
ಸುವರ್ಣಾವತಿ ನಂದಿಯಂಚಿನ ರೈತರು ಕೃಷಿ ಚಟುವಟಿಕೆ ಚುರುಕುಗೂಳಿಸಲು ಲಕ್ಷಾಂತರ ರು. ಸಾಲ ಮಾಡಿ, ಜಮೀನುಗಳಲ್ಲಿ ಭತ್ತ, ರಾಗಿ, ಜೋಳ, ಬಾಳೆ, ದನೆ, ಮೂಲಂಗಿ, ಗೆಡ್ಡೆಕೊಸು, ಟಮೋಟೋ, ಕಬ್ಬು, ಎಲೆಕೊಸು, ವಿಳ್ಯದ ಎಲೆ, ಕೊತ್ತಂಬರಿ ಸೊಪ್ಪು ಸೇರಿದಂತೆ ತರಕಾರಿ ಬೆಳೆದ ರೈತ ವಿಧಿಯಾಟದ ಮುಂದೆ ಮತ್ತೆ ಮಂಡಿಯೂರಿ ಶಪಿಸುತ್ತಿದ್ದಾನೆ.
undefined
ಚಾಮರಾಜನಗರದ ಪ್ರವಾಸೋದ್ಯಮ ಇಲಾಖೆಗೆ ಉಪ ನಿರ್ದೇಶಕರಿಲ್ಲ: ಖಾಯಂ ಅಧಿಕಾರಿ ನೇಮಿಸದೆ ಸರ್ಕಾರದ ನಿರ್ಲಕ್ಷ್ಯ
ಪರಿಹಾರ ಸಮೀಕ್ಷೆ ನಡೆದಿಲ್ಲ: ಈ ಹಿಂದೆ ಪ್ರವಾಹದಿಂದ ಹಾನಿಗೊಂಡಿದ್ದ ಕೃಷಿ ಪ್ರದೇಶಗಳಿಗೆ ಅಧಿಕಾರಿ ವರ್ಗ ಭೇಟಿ ನೀಡಿ, ಬೆಳೆ ಸಮೀಕ್ಷೆ ನಡೆಸಿ ಪರಿಹಾರ ನೀಡಿಲ್ಲ ಮತ್ತೆ ಅತಿವೃಷ್ಟಿಯಿಂದ ಕೃಷಿ ಜಮೀನುಗಳಿಗೆ ಪ್ರವಾಹದ ಬಂದು ಲಕ್ಷಾಂತರ ರು. ನಷ್ಟವಾಗಿದೆ. ಪದೇ ಪದೇ ಮಳೆ, ಪ್ರವಾಹದ ಅತಿವೃಷ್ಟಿಗೆ ನಲುಗಿದ ರೈತರು ಸಾಲವಂತರಾಗುವ ಸ್ದಿತಿ ಉಂಟಾಗಿದೆ.
ಬೆಳೆ ಹಾನಿ ಸಮೀಕ್ಷೆ ವೇಳೆ ಸಿಬ್ಬಂದಿ, ಕೆಲ ಪ್ರಭಲ ಕೃಷಿಕರ ಮನೆ ಬಾಗಿಲಿಗೆ ಹೋಗಿ ಬೆಳೆ ಫಸಲಿನ ಮಾಹಿತಿ ಪಡೆದು ಪರಿಹಾರ ಅರ್ಜಿ ಹಾಕಿಸಿಕೊಳ್ಳುವುದು ಒಂದಡೆಯಾದರೆ, ಮತ್ತೊಂದಡೆ ಕೆಲ ರೈತರಿಂದ ಪರಿಹಾರಕ್ಕಾಗಿ ಅರ್ಜಿ ಪಡೆಯಲು ಇಂತಿಷ್ಟುಹಣ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈಗಲಾರೂ ಜಿಲ್ಲಾಡಳಿತ, ತಾಲೂಕು ಆಡಳಿತ, ಕೃಷಿ ಇಲಾಖೆ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಪಾರದರ್ಶಕ ಸಮೀಕ್ಷೆ ಮಾಡುವಂತೆ ಸೂಚನೆ ನೀಡುವಂತೆ ದಸಂಸ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ ಒತ್ತಾಯಿಸಿದ್ದಾರೆ.
ಕುರುಬರದೊಡ್ಡಿ ಜಲಾವೃತ: ಅಜ್ಜಿಪುರ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಕುರುಬರದೊಡ್ಡಿ ಬಡಾವಣೆ 2ನೇ ದಿನ ಸಹ ಜಲಾವೃತಗೊಂಡು ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಪ್ಪಾರರ ಬಡವಣೆಗೂ ಉಡುತೊರೆ ಜಲಾಶಯದ ಕಾಲುವೆಗಳಲ್ಲಿ ಬರುತ್ತಿರುವ ಮಳೆ ನೀರು, ಕುರುಬರದೊಡ್ಡಿ ಜೋಡಿಕೆರೆ ತುಂಬಿದೆ. ಸುತ್ತಲಿನ ಪ್ರದೇಶದಲ್ಲಿಯೂ ಮಳೆ ಬೀಳುತ್ತಿರುವುದರಿಂದ ಕೆರೆಯ ನೀರು ಹೆಚ್ಚಾದ ಕಾರಣ ಅಜ್ಜಿಪುರ ರಾಮಪುರ ಮುಖ್ಯರಸ್ತೆಯಲ್ಲಿ ಅವೈಜ್ಞಾನಿಕ ನಿರ್ಮಾಣ ಮಾಡಿರುವ ಚರಂಡಿ ಕಾಮಗಾರಿಯಿಂದ ಜೋಡಿಕೆರೆ ನೀರು ಉಪ್ಪಾರ ಬಡವನಿಗೆ ಬರುತ್ತಿರುವುದರಿಂದ ಹತ್ತಕ್ಕೂ ಹೆಚ್ಚು ಮನೆಗಳು ಶನಿವಾರ ಜಲಾವೃತಗೊಂಡು ಸಂಕಷ್ಟಕ್ಕೀಡಾಗಿದ್ದಾರೆ.
ಕುರುಬರದೊಡ್ಡಿಯಲ್ಲಿ ಮಳೆಯಿಂದ ಜಲಾವೃತಗೊಂಡ ಪ್ರದೇಶಕ್ಕೆ ಶಾಸಕ ನರೇಂದ್ರ ಭೇಟಿ ನೀಡಿ, ನೀರು ಹೊರ ಹೋಗಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಸಹ ನಿರ್ಲಕ್ಷ ವಹಿಸಿರುವ ಅಧಿಕಾರಿಗಳ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷ ಜಂತು ಹಾವಳಿ, ನಿವಾಸಿಗಳ ಆತಂಕ: ಸತತ ಮಳೆಯಿಂದ ಕಾಲುವೆ ಕೆರೆಕಟ್ಟೆತುಂಬಿ ಹರಿಯುತ್ತಿರುವುದರಿಂದ ಕುರುಬರದೊಡ್ಡಿ ಜಲಾವೃತ ನಿವಾಸಿಗಳಿಗೆ ಚಿಂತೆ ಒಂದಡೆಯಾದರೆ ವಿಷಜಂತುಗಳು ಮನೆಗಳಲ್ಲಿ ಸೇರಿಕೊಂಡು ಮನೆಗಳಲ್ಲಿ ಅವಘಡ ಸಂಭವಿಸಿದರೆ ಏನು ಗತಿ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
Chamarajanagar: ಎಸ್ಪಿ ಕಚೇರಿ ಮುಂದೆಯೇ ವ್ಹೀಲಿಂಗ್ ನಡೆಸಿರುವ ಪುಂಡ ಬೈಕ್ ಸವಾರರು!
ರೈತರ ಕೃಷಿ ಜಮೀನುಗಳ ಬೆಳೆ ಸಮೀಕ್ಷೆ ಅಧಿಕಾರಿ ವರ್ಗ ಸಮರ್ಪಕವಾಗಿ ಮಾಡಿಲ್ಲ ಬೇಕಾಬಿಟ್ಟಿಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
-ಹೊನ್ನೂರು ಪ್ರಕಾಶ್, ಜಿಲ್ಲಾಧ್ಯಕ್ಷ, ರೈತ ಸಂಘ ಚಾ.ನಗರ
ಈಗಾಗಲೇ ಬೆಳೆ ಸಮೀಕ್ಷೆ ನಡೆಯುತ್ತಿದ್ದು, ಕೆಲ ರೈತರ ಜಮೀನುಗಳಿಗೆ ಭೇಟಿ ನೀಡುವುದು ವಿಳಂಬವಾಗಿದೆ. ಸುವರ್ಣಾವತಿ ನದಿಯಂಚಿನ ಕೃಷಿ ಜಮೀನುಗಳು ಹಾನಿಗೊಂಡಿರುವುದರಿಂದ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಜೊತೆಯಲ್ಲಿ ಕಂದಾಯ ಇಲಾಖೆ ಅಧಿಕಾರಿ ವರ್ಗ ಜಂಟಿ ಸರ್ವೆ ವಿಳಂಬವಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸರ್ವೆ ಮಾಡುವಂತೆ ಸೂಚನೆ ನೀಡುತ್ತೇನೆ.
-ಆನಂದಪ್ಪನಾಯಕ್. ತಹಶೀಲ್ದಾರ್ ಯಳಂದೂರು