ಪಡುಬಿದ್ರಿಯ ಎಂಡ್ ಪಾಯಿಂಟ್ ಬೀಚ್‍ಗೆ ಮೂರನೇ ಬಾರಿ 'ಬ್ಲೂಫ್ಲ್ಯಾಗ್' ವಿಶ್ವಮಾನ್ಯತೆ

By Suvarna News  |  First Published Oct 17, 2022, 7:13 PM IST

 ಡೆನ್ಮಾರ್ಕ್ ಸಂಸ್ಥೆಯ ಬ್ಲೂಫ್ಲ್ಯಾಗ್ ಪರಿಕಲ್ಪನೆಯ ವಿಶ್ವದರ್ಜೆಯ 33 ಮಾನದಂಡಗಳನ್ನು ಕ್ರಮಬದ್ಧವಾಗಿ ನಿರ್ವಹಿಸಿರುವ ಭಾರತದ ಕೆಲವೇ ಕೆಲವು ಬೀಚ್‍ಗಳ ಪೈಕಿ ಪಡುಬಿದ್ರಿ ಎಂಡ್ ಪಾಯಿಂಟ್‍ನ ಸಮುದ್ರ ಕಿನಾರೆಗೆ ಸತತ ಮೂರನೇ ಬಾರಿಗೆ ವಿಶ್ವದರ್ಜೆಯ ಬ್ಲೂಫ್ಲ್ಯಾಗ್ ಮಾನ್ಯತೆ ದೊರೆತಿದೆ.


ಉಡುಪಿ (ಅ.17): ಪೌಂಡೇಶನ್ ಫಾರ್ ಎನ್ವಾರ್ನ್ಮೆಂಟಲ್ ಎಜ್ಯುಕೇಶನ್ (ಡೆನ್ಮಾರ್ಕ್) ಸಂಸ್ಥೆಯ ಬ್ಲೂಫ್ಲ್ಯಾಗ್ ಪರಿಕಲ್ಪನೆಯ ವಿಶ್ವದರ್ಜೆಯ 33 ಮಾನದಂಡಗಳನ್ನು ಕ್ರಮಬದ್ಧವಾಗಿ ನಿರ್ವಹಿಸಿರುವ ಭಾರತದ ಕೆಲವೇ ಕೆಲವು ಬೀಚ್‍ಗಳ ಪೈಕಿ ಪಡುಬಿದ್ರಿ ಎಂಡ್ ಪಾಯಿಂಟ್‍ನ ಸಮುದ್ರ ಕಿನಾರೆಗೆ ಸತತ ಮೂರನೇ ಬಾರಿಗೆ ವಿಶ್ವದರ್ಜೆಯ ಬ್ಲೂಫ್ಲ್ಯಾಗ್ ಮಾನ್ಯತೆಯೊಂದಿಗೆ ಮನ್ನಣೆ ಲಭಿಸಿರುವುದು ಉಡುಪಿ ಜಿಲ್ಲೆಯ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ (ಪ್ರಭಾರ) ಕ್ಲಿಫರ್ಡ್ ಲೋಬೊ ತಿಳಿಸಿದ್ದಾರೆ. ಉಡುಪಿ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ ಬಂದಿದೆ. ದೇಶದಲ್ಲಿ ಒಟ್ಟು 8 ಬೀಚ್ ಗಳಿಗೆ ಬ್ಲೂ ಪ್ಲ್ಯಾಗ್ ಮಾನ್ಯತೆ ದೊರಕಿದ್ದು, ಅದ್ರಲ್ಲಿ ಜಿಲ್ಲೆಯ ಪಡುಬಿದ್ರಿ ಬೀಚ್ ಕೂಡ ಒಂದು. ಪ್ರವಾಸಿಗರ ಮೆಚ್ಚಿನ ತಾಣ ಉಡುಪಿಗೆ ಸಾವಿರಾರು ಪ್ರವಾಸಿಗರು ಆಗಮಿಸಿ, ಎಂಜಾಯ್ ಮಾಡ್ತಾರೆ. ಉಡುಪಿ ಬಂದವರು ಇಲ್ಲಿನ ಬೀಚ್ ಗಳಿಗೆ ಹೋಗದೆ ಇರೋಕೆ ಚಾನ್ಸೇ ಇಲ್ಲ. ಅಷ್ಟು ಸುಂದರವಾಗಿದೆ ಉಡುಪಿಯ ಬೀಚ್ ಗಳು. ಇಷ್ಟೇ ಅಲ್ಲ ಇನ್ ಮುಂದೆ ಉಡುಪಿ ಕಡೆ ಬಂದ್ರೆ ಇಲ್ಲಿನ ಪಡುಬಿದ್ರಿ ಬೀಚ್ ಮಾತ್ರ ಮೀಸ್ ಮಾಡ್ಲೇ ಬೇಡಿ, ಯಾಕಂದ್ರೆ ಈ ಬೀಚ್ ಪರಿಸರ ಸ್ನೇಹಿಯಾಗಿ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ಜೊತೆಗೆ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದ ದೇಶದ ಎಂಟು ಬೀಚ್ ಳಲ್ಲಿ ನಮ್ಮ ಕರಾವಳಿಯ ಪಡುಬಿದ್ರಿ ಬೀಚ್ ಕೂಡ ಒಂದು. ಸತತ ಮೂರನೇ ಬಾರಿಗೆ ಈ ವಿಶ್ವ ಮಾನ್ಯತೆ ಪಡುಬಿದ್ರೆ ಬೀಚ್ ಗೆ ದೊರಕಿದೆ.

ಅಂತಾರಾಷ್ಟ್ರೀಯ ಮಟ್ಟದ, ಫೌಂಡೇಶನ್ ಫಾರ್ ರ್ಎನ್ವಿರಾನ್ಮೆಂಟಲ್ಎಜುಕೇಶನ್ ಎಂಬ ಸಂಸ್ಥೆಯು ಪರಿಸರ ಸ್ನೇಹಿ ಬೀಚ್ ಗಳಿಗೆ ನೀಡುವ ಪ್ರತಿಷ್ಠಿತ ಬ್ಲ್ಯೂ ಫ್ಲ್ಯಾಗ್ ಮಾನ್ಯತೆಯು ದೇಶದ ಒಟ್ಟು  ಎಂಟು ಬೀಚ್ ಗಳಿಗೆ ದೊರಕಿದೆ. ಇದರಲ್ಲಿ ನಮ್ಮ ಉಡುಪಿಯ ಪಡುಬಿದ್ರೆ ಕೂಡ ಒಂದು. ಒಟ್ಟು 8 ಕೋಟಿ ವೆಚ್ಚದಲ್ಲಿ ಪಡುಬಿದ್ರಿ ಬೀಚ್ ನ್ಬು  ಈಗಾಗಲೇ ಅಭಿವೃದ್ಧಿ ಪಡಿಸಲಾಗಿದ್ದು, ಸ್ನಾನ ಗೃಹ, ಬಟ್ಟೆ ಬದಲಾಯಿಸುವ ಕೋಣೆ, ನೀರು ಶುದ್ದೀಕರಣ ಘಟಕ, ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ಕ್ಯಾಮರಾ ಹಾಗೂ ನಿಯಂತ್ರಣ ಕೊಠಡಿ, ಮಕ್ಕಳ ಆಟಿಕೆ ಸಾಮಾಗ್ರಿಗಳು, ಪ್ರಥಮ ಚಿಕಿತ್ಸಾ ಕೊಠಡಿ ಸಹಿತ ಅತ್ಯಾಧುನಿಕ ಸೌಲಭ್ಯಗಳು ಬೀಚ್ನಲ್ಲಿ ಕಲ್ಪಿಸಲಾಗಿದೆ.

Tap to resize

Latest Videos

ಉಡುಪಿಯ ವರ್ಲ್ಡ್ ನಂಬರ್ ವನ್ ಸೈಕ್ಲಿಂಗ್ ಬೀಚ್‌ಗೆ ವಿದೇಶಿಗರ ಮೆಚ್ಚುಗೆ

ಅಲ್ಲದೇ ಇತರೆ ಬೀಚ್ ಗಳಿಗೆ ಹೋಲಿಸಿದ್ರೆ ಸ್ವಚ್ಛತೆಯಲ್ಲೂ ಒಂದು ಕೈ ಮುಂದಿದ್ದು, ಸುಮಾರು ಮೂವತ್ತಕ್ಕೂ ಹೆಚ್ಚು ಸಿಬ್ಬಂದಿ ವ್ಯವಸ್ಥಿತವಾಗಿ ಬೀಚ್ ನಿರ್ವಹಣೆ ಮಾಡುತ್ತಿದ್ದಾರೆ. ಬ್ಲೂ ಫ್ಲ್ಯಾಗ್ ಬೀಚ್ ಗಳು ಅತ್ಯಂತ ಸ್ವಚ್ಛ ಕಡಲ ಕಿನಾರೆಗಳಾಗಿದ್ದು, ಪರಿಸರ ಸ್ನೇಹಿಯಾಗಿ ಮುಂದೆ ಹೋಂ ಸ್ಟೇ, ಟೂರಿಸ್ಟ್ ಗೈಡ್, ಟ್ಯಾಕ್ಸಿ ಸೇವೆಗಳು ಮುಂತಾದವುಗಳ ಮೂಲಕ ವಿದೇಶಿ ಆದಾಯವನ್ನು ಆಕರ್ಷಿಸುವುದು ಇವುಗಳ ಮೊದಲ ಗುರಿ. ಡೆನ್ಮಾರ್ಕ್ ಪರಿಸರ ಶಿಕ್ಷಣ ಪ್ರತಿಷ್ಠಾನದ ಪರಿಶೀಲನೆ ಬಳಿಕ ಬ್ಲೂ ಫ್ಲ್ಯಾಗ್ ಮಾನ್ಯತೆ ನೀಡಿದೆ. ಇದೊಂದು ಅಂತರಾಷ್ಟ್ರೀಯ ಮಾನ್ಯತೆ ಆದ ಕಾರಣ ದೇಶ ವಿದೇಶಗಳ ಪ್ರವಾಸಿಗರು ಪಡುಬಿದ್ರಿಗೆ ಆಗಮಿಸುವ ಸಾಧ್ಯತೆ ಇದೆ.

ಪಡುಬಿದ್ರಿ, ಹೊನ್ನಾವರ ಸೇರಿ ದೇಶದ 8 ಬೀಚ್‌ಗೆ ಬ್ಲೂ ಫ್ಲ್ಯಾಗ್!

ಇದರಿಂದ ಪ್ರವಾಸೋದ್ಯಮ ಚೇತರಿಸಿಕೊಂಡು ಸ್ಥಳೀಯರ ಆರ್ಥಿಕ ಅಭಿವೃದ್ಧಿಗೂ ನೆರವಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಪಡುಬಿದ್ರಿ ಬೀಚ್ ಬ್ಲೂಫ್ಲ್ಯಾಗ್ ಮಾನ್ಯತೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಕರ್ನಾಟಕಕ್ಕೆ ಹೆಮ್ಮಯ ವಿಚಾರ. ಪಡುಬಿದ್ರಿ ಬೀಚ್ ಅಭಿವೃದ್ಧಿ ಆದಂತೆ ಕರಾವಳಿಯ ಇತರೆ ಬೀಚ್ ಗಳು ಅಭಿವೃದ್ಧಿ ಕಂಡ್ರೆ ಪ್ರವಾಸೋದ್ಯಮದಲ್ಲಿ ನಮ್ಮ ಕರಾವಳಿ ಗಣನೀಯ ಸಾಧನೆ ಮಾಡಬಹುದು.

click me!