ಶಿವಮೊಗ್ಗ: ನೆರೆ ಸಂತ್ರಸ್ತರಿಗೆ ಆರೋಗ್ಯ ಶಿಬಿರ

Published : Aug 11, 2019, 11:33 AM IST
ಶಿವಮೊಗ್ಗ: ನೆರೆ ಸಂತ್ರಸ್ತರಿಗೆ ಆರೋಗ್ಯ ಶಿಬಿರ

ಸಾರಾಂಶ

ಜಿಲ್ಲೆಯಲ್ಲಿ ನೆರೆಯಾಗಿದ್ದು, ಈಗ ಸಾಂಕ್ರಾಮಿಕ ರೋಗ ಭೀತಿ ಉಂಟಾಗಿದೆ. ಅಲ್ಲಲ್ಲಿ ನೀರು ನಿಂತು, ಕುಡಿಯುವುದಕ್ಕೂ ಸ್ವಚ್ಛ ನೀರಿನಲ್ಲದೆ ರೋಗಗಳು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಜನರ ಆರೋಗ್ಯ ತಪಾಸಣೆ ಮಾಡಲು ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ.  ಸೊರಬ ರೋಟರಿ ಸಂಸ್ಥೆ ಹಾಗೂ ಸೊರಬ ತಾಲೂಕು ಔಷಧವ್ಯಾಪಾರಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಉಚಿತ ಚಿಕಿತ್ಸೆ ಮತ್ತು ಔಷಧ ವಿತರಣಾ ನಡೆಯಲಿದೆ.

ಶಿವಮೊಗ್ಗ(ಆ.11): ಸೊರಬ ತಾಲೂಕು ಪರಿಹಾರ ಕೇಂದ್ರದಲ್ಲಿರುವ ನೆರೆ ಸಂತ್ರಸ್ತರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದ್ದು, ಈಗಾಗಲೇ ಕೆಲವರು ಶೀತ ಮತ್ತು ಜ್ವರದಿಂದ ಬಳಲುತ್ತಿದ್ದಾರೆ.

ಈ ಹಿನ್ನೆಲೆ ಅಲ್ಲಿನ ಜನರಿಗೆ ಆರೋಗ್ಯ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಆ.11 ಭಾನುವಾರ ಸಂಜೆ 4 ಗಂಟೆಯಿಂದ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಸೊರಬ ರೋಟರಿ ಸಂಸ್ಥೆ ಹಾಗೂ ಸೊರಬ ತಾಲೂಕು ಔಷಧವ್ಯಾಪಾರಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಉಚಿತ ಚಿಕಿತ್ಸೆ ಮತ್ತು ಔಷಧ ವಿತರಣಾ ನಡೆಯಲಿದೆ.

45 ವರ್ಷದ ನಂತರ ಮಹಾಮಳೆಗೆ ಮುಳುಗಿದ ಉಪ್ಪಿನಂಗಡಿ

ಪ್ರಸೂತಿ ತಜ್ಞ ಡಾ.ನಾಗೇಂದ್ರಪ್ಪ, ಮಹಿಳಾ ತಜ್ಞೆ ಡಾ. ಶ್ವೇತಾ, ಮಕ್ಕಳ ತಜ್ಞ ಡಾ. ನವೀನ್‌, ಡಾ. ಅಕ್ಷತಾ, ಡಾ.ರಾಘವೇಂದ್ರ, ಡಾ. ಯು.ಕೆ.ಶೆಟ್ಟಿ, ಡಾ. ಸತೀಶ್‌, ಡಾ. ಸೌಭಾಗ್ಯ, ದಂತ ವೈದ್ಯ ಡಾ.ಜ್ಞಾನೇಶ್‌ ಪಾಲ್ಗೊಳ್ಳುವರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

PREV
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ