'ನನ್ನ ಹೆಂಡ್ತಿನ ಕಳಿಸಿಕೊಡಿ..' ತಂಜೀಮ್‌ ಭಾನುಗಾಗಿ ಪೊಲೀಸ್‌ ಸ್ಟೇಷನ್‌ನಲ್ಲಿ ಧರಣಿ ಕುಳಿತ ಪತಿ ಪ್ರದೀಪ್‌!

By Santosh Naik  |  First Published Oct 23, 2024, 7:03 PM IST

ಮೂರು ವರ್ಷಗಳ ಪ್ರೀತಿಯ ಬಳಿಕ ಧರ್ಮಸ್ಥಳದಲ್ಲಿ ವಿವಾಹವಾದ ದಂಪತಿ, ರಕ್ಷಣೆ ಕೋರಿ ಹಾವೇರಿ ಮಹಿಳಾ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಯುವತಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ ಪೊಲೀಸರ ಕ್ರಮದ ವಿರುದ್ಧ ಪ್ರಿಯಕರ ಪ್ರತಿಭಟನೆ ನಡೆಸಿದ್ದಾರೆ.


ಹಾವೇರಿ (ಅ.23): ಪ್ರೀತಿಸಿ ಮದುವೆಯಾದ ಹುಡುಗಿಯನ್ನು ತನ್ನೊಂದಿಗೆ ಕಳಿಸಲು ಪ್ರಿಯಕರ ಪೊಲೀಸ್‌ ಸ್ಟೇಷನ್‌ ಎದುರಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹಾವೇರಿ ಮಹಿಳಾ ಠಾಣೆ ಮುಂದೆ ಸ್ನೇಹಿತರ ಜೊತೆ ಸೇರಿ ಪ್ರಿಯಕರ ಪ್ರತಿಭಟನೆ ಮಾಡಿರುವ ಘಟನೆ ನಡೆದಿದೆ. ಕಳೆದ ಮೂರು ವರ್ಷದಿಂದ ಪ್ರದೀಪ್ ಬಣಕಾರ್ ಮತ್ತು ತಂಜಿಮ್ ಭಾನು ಪ್ರೀತಿ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಮನೆಯಿಂದ ಓಡಿಹೋಗಿದ್ದ ಜೋಡಿ ಧರ್ಮಸ್ಥಳಕ್ಕೆ ತೆರಳಿ ವಿವಾಹವಾಗಿ ಬಂದಿದೆ. ವಿವಾಹವಾದ ಜೋಡಿ ರಕ್ಷಣೆ ಕೊಡುವಂತೆ ನೇರವಾಗಿ ಹಾವೇರಿ ಮಹಿಳಾ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದರು. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಮೇಡ್ಲೆರಿ ಗ್ರಾಮದ ಯುವಕ ಪ್ರದೀಪ್‌ ಹಾಗೂ ಗುತ್ತಲ ಪಟ್ಟಣದ ಮುಸ್ಲಿಂ ಯುವತಿ ತಂಜೀಮ್‌ ಭಾನು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಹದಿನೈದು ದಿನದ ಹಿಂದೆ ಮನೆಯಿಂದ ಓಡಿ ಹೋಗಿ ಪ್ರೇಮಿಗಳು ಮದುವೆಯಾಗಿದ್ದರು. ಮದುವೆ ನಂತರ ನ್ಯಾಯಕ್ಕಾಗಿ ಮಂಗಳವಾರ ಹಾವೇರಿ ಮಹಿಳಾ ಪೊಲೀಸ್ ಠಾಣೆಗೆ ನವಜೋಡಿ ಬಂದಿತ್ತು.

ಈ ವೇಳೆ ಮಹಿಳೆ ತಂಜೀಮ್‌ ಭಾನುವನ್ನು ಪೊಲೀಸರು ಮಹಿಳಾ ಸಾಂತ್ವನ ಕೇಂದ್ರಕ್ಕೆ ಪೊಲೀಸರು ಕಳಿಸಿಕೊಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ನನ್ನ ಹೆಂಡ್ತಿಯನ್ನು ನನ್ನೊಂದಿಗೆ ಕಳಿಸಿಕೊಡಿ ಎಂದು ಯುವಕ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಲಾಗಿದೆ. ನ್ಯಾಯಕ್ಕಾಗಿ ಎಸ್.ಪಿ ಅಂಶುಕುಮಾರ್‌ಗೂ ಪ್ರದೀಪ್‌ ಮನವಿ ಮಾಡಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಯುವತಿಯನ್ನ ಪ್ರಿಯಕರನೊಂದಿಗೆ ಕಳಿಸಲು ಮನವಿ ಮಾಡಲಾಗಿದೆ.

;ನಮ್ಮ ಮನೆಯಲ್ಲಿ ಪ್ರೀತಿಗೆ ಒಪ್ಪದ ಕಾರಣ ಓಡಿ ಹೋಗಿ ಮದುವೆಯಾಗಿದ್ದೇವೆ. ಮನೆಯಿಂದ ನನಗೆ ಜೀವಬೆದರಿಕೆ ಇದೆ. ನಾವು ಇಷ್ಟಪಟ್ಟು ಮದುವೆಯಾಗಿದ್ದೇವೆ. ಯಾವು ಯಾವುದೇ ಫೋರ್ಸ್‌ ಇಂದ ಮದುವೆ ಆಗಿಲ್ಲ. ನಾವಿಬ್ಬರೂ ಮೇಜರ್‌ ಆಗಿದ್ದೇವೆ.ನಮಗೆ ಪೊಲೀಸರು ರಕ್ಷಣೆ ನೀಡಬೇಕು ಎಂದು ತಂಜೀಮ್‌ ಭಾನು ವಿಡಿಯೋದಲ್ಲಿ ಹೇಳಿದ್ದಾರೆ.

Latest Videos

undefined

ಸಾವಿನ ಶೂಟಿಂಗ್‌ ಮಾಡಿಯೇ ಶಂಕರ್‌ನಾಗ್‌ ತೆರಳಿದ್ದು, ಮತ್ತೆ ವಾಪಾಸ್‌ ಬರಲೇ ಇಲ್ಲ: ಶಿವರಂಜಿನಿ

3 ವರ್ಷದಿಂದ ನಾವು ಲವ್‌ ಮಾಡುತ್ತಿದ್ದೆವು. ಮೊನ್ನೆ ಆಕೆಯನ್ನು ಕರೆದುಕೊಂಡು ಹೋಗಿ ಮದುವೆಯಾಗಿದ್ದೇನೆ.ಧರ್ಮಸ್ಥಳದಲ್ಲಿ ಮದುವೆಯಾಗಿದ್ದೇವೆ. ಮದುವೆಯಾದ ಬಳಿಕ ನೇರವಾಗಿ ನಾವು ಹಾವೇರಿ ಮಹಿಳಾ ಪೊಲೀಸ್‌ ಸ್ಟೇಷನ್‌ಗೆ ಬಂದಿದ್ದೇವೆ.ಪೊಲೀಸರು ಸಮಸ್ಯೆ ಎಲ್ಲಾ ಬಗೆಹರಿಸಿದ್ದು, ಆಕೆಯನ್ನು ಮಾತ್ರ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.ನಾನು ಆಕೆಯನ್ನು ಮನೆಗೆ ಕಳಿಸಿಕೊಡುವಂತೆ ಅವರಿಗೆ ಹೇಳಿದ್ದೇನೆ. ಅದರೆ, ಪೊಲೀಸರು ಈಗ ಹೊರಗೆ ಹೋದರೆ ಸಮಸ್ಯೆ ಆಗುತ್ತದೆ, ಇಬ್ಬರಿಗೂ ಏನಾದರೂ ಮಾಡಬಹುದು ಎಂದು ಹೇಳಿದ್ದಾರೆ.ಅದಕ್ಕೆ ಆಕೆಯನ್ನು ಅಲ್ಲಿಯೇ ಇರಿಸಿದ್ದಾರೆ. ನಾನು ಹೆಂಡ್ತಿನ ಕರೆದುಕೊಂಡು ಹೋಗಬೇಕು. ಅಲ್ಲಿಯವರೆಗೂ ಸ್ಟೇಷನ್‌ ಮುಂದೆಯ ಕೂತುಕೊಳ್ತೇನೆ ಎಂದಿದ್ದಾರೆ.

ರೆಡ್‌ ಲೆಹಂಗಾ ತೊಟ್ಟು ನಿವೇದಿತಾ ಗೌಡ ಪೋಸ್‌ ಕೊಟ್ರೆ, ಸೊಂಟ ಚೆನ್ನಾಗಿದೆ ಅನ್ನೋದಾ!

click me!