ಮಳೆ ಎಫೆಕ್ಟ್‌: ಮನೆಮನೆಯಿಂದ ಕಸ ಸಂಗ್ರಹ ಬಂದ್‌, ಗಬ್ಬೆದ್ದು ನಾರುತ್ತಿರುವ ಸಿಲಿಕಾನ್‌ ಸಿಟಿ ಬೆಂಗ್ಳೂರು!

By Kannadaprabha NewsFirst Published Oct 23, 2024, 12:38 PM IST
Highlights

ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ವಿಲೇಯಾಗದೆ ಉಳಿದ ಸಾವಿರಾರು ಟನ್ ಕಸದ ರಾಶಿ ಮಳೆ ನೀರಿನಿಂದಾಗಿ ಕೊಳೆತು ನಾರುವಂತಾಗಿದೆ. ಕಳೆದ ನಾಲೈದು ದಿನಗಳಿಂದ ಎಲ್ಲೆಂದರಲ್ಲಿ ಹಾಗೆ ಬಿದ್ದಿರುವ ಕಸದ ರಾಶಿ ಕೊಳೆತು ಹೋಗಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿ ಕಾಡಲಾರಂಭಿಸಿದೆ. 
 

ಬೆಂಗಳೂರು(ಅ.23):  ನಗರದಲ್ಲಿ ನಾಲ್ಕಾರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕಸ ತುಂಬಿಕೊಂಡು ಹೋದ ಲಾರಿಗಳು ರಸ್ತೆ ಗುಂಡಿಯಲ್ಲಿ ಹೂತು ನಿಂತಿವೆ. ಇದರ ಪರಿಣಾಮ ಕಲ್ಲಿನ ಕ್ವಾರಿಗಳಲ್ಲಿ ಕಸ ಸುರಿದು ವಾಪಾಸ್ ಬಾರದಿರುವುದರಿಂದ ನಗರದಲ್ಲಿ ಕಸ ವಿಲೇವಾರಿಯಾಗದೇ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. 

ನಗರದ ವಿವಿಧ ಭಾಗಗಳಲ್ಲಿ ವಿಲೇಯಾಗದೆ ಉಳಿದ ಸಾವಿರಾರು ಟನ್ ಕಸದ ರಾಶಿ ಮಳೆ ನೀರಿನಿಂದಾಗಿ ಕೊಳೆತು ನಾರುವಂತಾಗಿದೆ. ಕಳೆದ ನಾಲೈದು ದಿನಗಳಿಂದ ಎಲ್ಲೆಂದರಲ್ಲಿ ಹಾಗೆ ಬಿದ್ದಿರುವ ಕಸದ ರಾಶಿ ಕೊಳೆತು ಹೋಗಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿ ಕಾಡಲಾರಂಭಿಸಿದೆ. 

Latest Videos

ಕೋಗಿಲು ಕ್ರಾಸ್‌ನಲ್ಲಿರುವ ಬೆಳ್ಳಳ್ಳಿ ಡಂಪಿಂಗ್ ಯಾರ್ಡ್‌ ಗೆ ತೆರಳುವ ರಸ್ತೆಗಳಲ್ಲಿ ಆಳುದ್ದ ಗುಂಡಿಗಳು ಬಿದ್ದಿ ರುವುದ ರಿಂದ ಅಲ್ಲಿಗೆ ತೆರಳಿರುವ ಲಾರಿಗಳು ರಸ್ತೆಯಲ್ಲೇ ಹೂತು ಹೋಗಿ ಕಸ ವಿಲೇ ವಾರಿ ಮಾಡಲು ಸಾಧ್ಯ ವಾಗದೆ ಅಲ್ಲೇ ಸಾಲುಗಟ್ಟಿ ನಿಲ್ಲು ವಂತಾಗಿದೆ. ಹೀಗಾಗಿ ಕಸದ ಲಾರಿಗಳು ಸುಮಾರು 3 ಕಿ.ಮೀ ಸಾಲುಗಟ್ಟಿ ನಿಂತಿ ರುವ ದೃಶ್ಯ ಡಂಪಿಂಗ್ ಯಾರ್ಡ್ ಬಳಿ ಕಂಡು ಬರುತ್ತಿದೆ. 

ಕಸ ವಿಲೇವಾರಿಗೆ ಇರುವುದು ಒಂದೇ ಡಂಪಿಂಗ್ ಯಾರ್ಡ್ ಇರುವು ದರಿಂದ ಲಾರಿಗಳಲ್ಲಿ ತುಂಬಿರುವ ಕಸ ವಿಲೇವಾರಿ ಮಾಡಿ ವಾಪಸ್ ಆಗಲು 4 ದಿನಗಳು ಬೇಕು. ಇದರಿಂದ ರಸ್ತೆ ಬದಿ ಬಿದ್ದಿರುವ ಕಸ ದುರ್ನಾತ ಬೀರು ತ್ತಿದೆ. ಸದ್ಯ ನಗರ ದಲ್ಲಿ ಸುಮಾರು 12000 ಮೆಟ್ರಿಕ್ ಟನ್‌ ಗಳಿಗಿಂತ ಹೆಚ್ಚು ಕಸ ಉಳಿದಿದ್ದು, ಅದನ್ನು ತೆರವು ಮಾಡಲು 1 ವಾರ ಸಮಯ ಬೇಕು ಎನ್ನುತ್ತಿದ್ದಾರೆ ಗುತ್ತಿಗೆದಾರರು. 

ಸದ್ಯಕ್ಕೆ ಕಸ ಸಂಗ್ರಹ ಇಲ್ಲ 

ನಗರದಲ್ಲಿ ಮನೆ ಬಾಗಿಲಿಗೆ ಬಂದು ಕಸ ಸಂಗ್ರಹ ಮಾಡುವ ಆಟೋ ಟಿಪ್ಟರ್‌ಗಳು ಕೂಡಾ 4 ದಿನಗಳಿಂದ ನಾಪತ್ತೆಯಾಗಿವೆ. ಈ ಬಗ್ಗೆ ವಿಚಾರಿಸಿದರೆ ಕಸ ಸಂಗ್ರಹಿಸಿ ಹೋಗಿರುವುದು ಇನ್ನು ವಿಲೇವಾರಿಯಾಗಿಲ್ಲ. ಲಾರಿಗಳು ಬಂದಲ್ಲಿ ಅದಕ್ಕೆ ಭರ್ತಿ ಮಾಡಿದ ನಂತರವೇ ಮನೆ ಬಳಿಗೆ ಬಂದು ಕಸ ಸಂಗ್ರಹ ಮಾಡುವು ದಾಗಿ ಕಸ ಸಂಗ್ರಹಿಸುವ ಆಟೋ ಚಾಲಕರು, ಗುತ್ತಿಗೆದಾರರು ಹೇಳುತ್ತಿದ್ದಾರೆ.

click me!