ಆರ್ಥಿಕ ಸಂಕಷ್ಟದಲ್ಲಿರೋ ರೈತರಿಗೆ ಬ್ಯಾಂಕುಗಳಿಂದ ಕಿರುಕುಳ..!

By Girish Goudar  |  First Published May 22, 2022, 8:43 AM IST

*   ಅಕಾಲಿಕ ಮಳೆಯುಂದ ತತ್ತರಿಸಿದ ಅನ್ನದಾತನಿಗೆ ಬ್ಯಾಂಕ್ ಬರೆ
*  ಅತಿವೃಷ್ಟಿ ಅನಾವೃಷ್ಟಿಯಿಂದ ಬಳಲಿರೋ ರೈತ
*  ಸಾಲ ಮರುಪಾವತಿ ಮಾಡದಿದ್ರೇ ಭೂಮಿ ಹರಾಜು ?
 


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ವಿಜಯನಗರ

ವಿಜಯನಗರ(ಮೇ.22):  ಇಲ್ಲಿ ಬ್ಯಾಂಕಿನವರು ತಿಳಿದು ಮಾಡೋ ತಪ್ಪೋ ತಿಳಿಯದೇ ಮಾಡೋ ತಪ್ಪೋ ಗೊತ್ತಿಲ್ಲ. ಮುಂಗಾರು ಪೂರ್ವ ಅಕಾಲಿಕ ಮಳೆಗೆ ಈಗಾಗಲೇ ಬೆಳೆ ಕಳೆದುಕೊಂಡು ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ  ರೈತರಿಗೆ ಇದೀಗ ವಿಜಯನಗರ ಜಿಲ್ಲೆಯಲ್ಲಿ ಬ್ಯಾಂಕುಗಳು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ನೂಕೋ ಕೆಲಸ ಮಾಡುತ್ತಿವೆ. ಬ್ಯಾಂಕ್‌ನಿಂದ ಪಡೆದ ಸಾಲ ಮರುಪಾವತಿಗೆ ರೈತರಿಗೆ ನೋಟೀಸ್ ನೀಡಿ ಬ್ಯಾಂಕ್‌ಗಳು  ಹಣ ಪಾವತಿ ಮಾಡದೇ ಇದ್ರೇ ಜಮೀನು ಹರಾಜು ಹಾಕೋ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇದು ಇಲ್ಲಿಯ ರೈತರಿಗೆ ನುಂಗಲಾರದ ತುತ್ತಾಗಿದೆ.

Tap to resize

Latest Videos

undefined

ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಲೂ ನಷ್ಟ

ಒಮ್ಮೆ ಅನಾವೃಷ್ಟಿಯಿಂದ ನಷ್ಟ ಅನುಭವಿಸಿದ್ದಾಯ್ತು ಇದೀಗ ಅತಿವೃಷ್ಟಿಂದ ಬೆಳೆ ಕಳೆದುಕೊಂಡಿರೋ ಅನ್ನದಾತ.. ಅತಿವೃಷ್ಟಿಗೆ ಬೆಳೆ ಕಳೆದುಕೊಂಡ ಅನ್ನದಾತರಿಗೆ ಇದೀಗ ಬ್ಯಾಂಕ್ ನವರಿಂದ ನೋಟಿಸ್. ಸಾಲ ವಾಪಸ್ ನೀಡುವಂತೆ ನೋಟಿಸ್ ನೀಡೋದ್ರೋ ಜೊತೆಗೆ ಮೌಕಿಕವಾಗಿ ಜಮೀನು ಹರಾಜು ಹಾಕುವ ಎಚ್ಚರಿಕೆ ನೀಡಿದ್ದಾರೆ. ಹೌದು, ಕಳೆದ ಮೂರು ನಾಲ್ಕು ವರ್ಷಗಳಿಂದ ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಅತಿವೃಷ್ಟಿ ಅನಾವೃಷ್ಟಿಯಿಂದ ರೈತರು ಕಂಗಾಲಾಗಿ ಹೋಗಿದ್ದಾರೆ. ಕೃಷಿಗಾಗಿ ಪಡೆದ ಸಾಲವನ್ನು ಕಟ್ಟಲಾಗದ ಸ್ಥಿತಿಗೆ ಬಂದಿದ್ದಾರೆ. ಇದೆಲ್ಲದರ ಮಧ್ಯೆ ಇದೀಗ ಕಳೆದೊಂದು ವಾರದಿಂದ ಸುರಿಯುತ್ತಿರೋ ಮಳೆಯಿಂದಾಗಿ ಭತ್ತ, ಪಪ್ಪಾಯಿ, ಬಾಳೆ, ದಾಳಿಂಬೆ ಸೆರಿದಂತೆ ಇತರೆ ಕೃಷ್ಟಿ ಬೆಳೆಗಳು  ಸಂಪುರ್ಣವಾಗಿ ಹಾಳಾಗಿದೆ. ಇಂತಹ ಸಮಯದಲ್ಲಿ ಕೃಷಿಗಾಗಿ ರೈತರು ಮಾಡಿದ ಸಾಲ‌ ಮರುಪಾವತಿಗಾಗಿ ನೋಟೀಸ್‌ ಜೊತೆಗೆ ಬ್ಯಾಂಕಿವರು ಸಾಲ ವಾಪಸ್ಸಿಗಾಗಿ ಪೋನ್ ಮಾಡಿ ಕಿರುಕುಳ  ನೀಡುತ್ತಿದ್ದಾರೆಂದು ರೈತರು ಆರೋಪಿಸಿದ್ದಾರೆ. ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ತಾಲೂಕಿನ ನೂರಾರು ರೈತರಿಗೆ ನೋಟೀಸ್ ಜಾರಿ ಮಾಡಲಾಗಿದ್ದು, ಸದ್ಯ ಇರೋ ಪರಿಸ್ಥಿತಿಯಲ್ಲಿ ರೈತರಿಗೆ ಇದು ನುಂಗಲಾದ ತುತ್ತಾಗಿದೆ.
ಸಾಲ ವಾಪಸ್ ಮಾಡಿ ಇಲ್ಲ ಆಸ್ತಿ ಜಪ್ತಿ ಮಾಡ್ತೇವೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ: ತಾಯಿ, ಮಗಳು ಪಾಸ್‌..!

ಇನ್ನೂ ಕಾರ್ಪೋರೇಷನ್ ಬ್ಯಾಂಕ್‌ನಿಂದ ಕೇವಲ ರೈತರಿಗೆ ನೋಟೀಸ್ ಜಾರಿಯಾಗಿದೆ. ಆದ್ರೇ ಸಾಲ ಮರುಪಾವತಿ ಮಾಡಬೇಕು ಇಲ್ಲವಾದ್ರೆ ಆಸ್ತಿ ಜಪ್ತಿಯ ಮಾಡ್ತೇವೆಂದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡಿರೋ ನೋಟಿಸ್ ಇಲ್ಲಿಯ ರೈತರಿಗೆ ಕಣ್ಣಿರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಕಳೆದ ವರ್ಷವೂ ಅಕಾಲಿಕ ಮಳೆಗೆ ಬೆಳೆ ನಾಶವಾಗಿತ್ತು ಹೀಗಾಗಿ ಅಸಲು,ಬಡ್ಡಿ ಮರುಪಾವತಿ ಸಾಧ್ಯ ಆಗ್ತಿಲ್ಲ. ಇದೀಗ ಚಕ್ರ ಬಡ್ಡಿ ರೂಪದಲ್ಲಿ ಸಾಲ ದುಪ್ಪಟ್ಟಾಗಿದ್ದು, ಅನ್ನದಾತರು ಕಂಗಾಲಾಗಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲೂ ಸಾಲ ಮರುಪಾವತಿ ಮಾಡ್ತೇವೆ ಆದ್ರೆ ಬಡ್ಡಿ ವಿನಾಯ್ತಿಗೆ ರೈತರ ಮನವಿ. ಎಂದು ರೈತರು ಅಂಗಲಾಚುತ್ತಿದ್ದಾರೆ.

ಒನ್ ಟೈಂ ಸೆಟಲ್ಮೆಂಟ್‌ಗೆ ಒತ್ತಾಯ

ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಇದೀಗ 300 ಕ್ಕೂ ಹೆಚ್ಚು ರೈತರಿಗೆ ಅಂತಿಮ ಹಂತದ ನೋಟೀಸ್ ಜಾರಿ ಮಾಡಲಾಗಿದ್ದು, ಇದರಿಂದ ಪರಿಹಾರ ದೊರಕಿಸಿಕೊಡುವಂತೆ ಅನ್ನದಾತರು ವಿಜಯನಗರ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ. ಸದ್ಯಕ್ಕೆ ಬಡ್ಡಿಕಟ್ಟೋದಂತು ಅಸಾಧ್ಯದ ಮಾತು ಅಸಲನ್ನು ಕಟ್ಟಿ ಸಾಲ ಮುಟ್ಟಿಸುತ್ತೇವೆ ಎನ್ನುತ್ತಿದ್ದಾರೆ ರೈತರು. ಆದ್ರೇ, ಒನ್ ಟೈಂ ಸೆಟಲ್ಮೆಂಟ್  ಮಾಡಲು ಅವಕಾಶವಿದೆ. ಆದ್ರೇ ಮೊತ್ತವನ್ನು ಇಂತಿಷ್ಟೇ ಎಂದು ಹೇಳಲಾಗದು ಎನ್ನುತ್ತಿದ್ದಾರೆ ಬ್ಯಾಂಕ್ ಸಿಬ್ಬಂದಿ. ಒನ್ ಟೈಂ ಸೆಟಲ್ಮೆಂಟ್ ಮಾಡಿಕೊಂಡ್ರೇ, ರೈತರಿಗೆ ಮತ್ತೊಂದು ಬ್ಯಾಂಕಿನಲ್ಲಿ ಅಥವಾ ಮತ್ತೊಮ್ಮೆ ಸಾಲ ಸಿಗೋದು ಕಷ್ಟ ಎನ್ನುವ ಭೀತಿ ಎದುರಾಗಿದೆ.
 

click me!