* ಇಂದು ಬಡವಿಲಿಂಗ, ಉಗ್ರನರಸಿಂಹ ಸ್ಮಾರಕಗಳ ಎದುರು ಯೋಗ
* ಯೋಗದಿಂದ ಈ ಭಾಗದ ಜನರ ಆರೋಗ್ಯವೂ ವೃದ್ಧಿ
* ಹಂಪಿ ಪ್ರವಾಸೋದ್ಯಮದ ಬೆಳವಣಿಗೆಗೆ ಯೋಗೋತ್ಸವ ಪೂರಕ
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಮೇ.22): ವಿಶ್ವಪರಂಪರೆ ತಾಣ ಹಂಪಿಯಲ್ಲಿ ಯೋಗಧ್ಯಾನ ಶುರುವಾಗಿದೆ. ಹಂಪಿಯ ಬಡವಿ ಲಿಂಗ ಮತ್ತು ಉಗ್ರನರಸಿಂಹ ಸ್ಮಾರಕಗಳ ಎದುರು ಮೇ 22ರಂದು ಬೆಳಗ್ಗೆ 6 ಗಂಟೆಯಿಂದ 7:30ರ ವರೆಗೆ ಯೋಗಾಸಕ್ತರು ಯೋಗ ಮಾಡಲಿದ್ದಾರೆ. ಈ ಯೋಗವನ್ನು ಫೇಸ್‌ಬುಕ್, ಯುಟ್ಯೂಬ್‌ನಲ್ಲಿ ಲೈವ್ ನೀಡಲಿದ್ದು, 45 ದೇಶಗಳ ಯೋಗಾಸಕ್ತರು ವೀಕ್ಷಣೆ ಮಾಡಲಿದ್ದಾರೆ.
undefined
ಹಂಪಿಯ ಸ್ಮಾರಕಗಳ ಎದುರು ವಿಶ್ವ ಯೋಗ ದಿನದ ನಿಮಿತ್ತ ಪ್ರತಿ ಭಾನುವಾರ ಯೋಗೋತ್ಸವ ಕಾರ್ಯಕ್ರಮವನ್ನು ಶ್ವಾಸಗುರು ಶ್ರೀವಚನಾನಂದ ಸ್ವಾಮೀಜಿ ನಡೆಸುತ್ತಿದ್ದಾರೆ. ವಿಜಯ ವಿಠ್ಠಲ ದೇಗುಲದ ಆವರಣದ ಕಲ್ಲಿನ ತೇರಿನ ಬಳಿ ನಡೆದ ಯೋಗೋತ್ಸವ ಕಾರ್ಯಕ್ರಮದ ಫೇಸ್‌ಬುಕ್ ಲೈವ್‌ಅನ್ನು 45 ದೇಶಗಳ ಯೋಗಾಸಕ್ತರು ವೀಕ್ಷಿಸಿದ್ದಾರೆ. ದೇಶ-ವಿದೇಶಗಳಲ್ಲಿ ಸಾವಿರಾರು ಜನರು ಹಂಪಿಯಲ್ಲಿ ನಡೆದ ಯೋಗ ಕಾರ್ಯಕ್ರಮವನ್ನು ವೀಕ್ಷಿಸಿ, ಕಮೆಂಟ್ ಮಾಡಿದ್ದಾರೆ. ಜತೆಗೆ ಲೈಕ್ ಕೂಡ ಮಾಡಿ; ತಮ್ಮ ಸ್ನೇಹಿತರಿಗೂ ಶೇರ್ ಮಾಡಿದ್ದಾರೆ.
ಹಂಪಿ ಬಳಿ ತಲೆ ಎತ್ತಲಿದೆ ವಿಶ್ವ ದರ್ಜೆಯ ತ್ರೀಸ್ಟಾರ್ ಹೋಟೆಲ್!
ಭಾರತ ಸರ್ಕಾರದ ಆಯುಷ್ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಮೊರಾರ್ಜಿ ದೇಸಾಯಿ ಯೋಗ ಸಂಸ್ಥೆ ಮತ್ತು ಶ್ವಾಸ ಯೋಗ ಕೇಂದ್ರ ಹಾಗು ಪತಂಜಲಿ ಯೋಗ ಸಮಿತಿ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ನಡೆಯುತ್ತಿರುವ ಯೋಗೋತ್ಸವ ವಿಜಯನಗರ ಜಿಲ್ಲೆಯ ಯೋಗಾಸಕ್ತರಲ್ಲೂ ಸಂಚಲನ ಮೂಡಿಸಿದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ:
ಹಂಪಿಯಲ್ಲಿ ನಡೆಯುತ್ತಿರುವ ಯೋಗೋತ್ಸವದಿಂದ ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ. ವಿಜಯನಗರ ಜಿಲ್ಲೆಯ ಹಂಪಿ ಹಾಗೂ ಕೊಪ್ಪಳ ಜಿಲ್ಲೆಯ ಆನೆಗೊಂದಿ ಭಾಗದಲ್ಲಿ ಟೂರಿಸ್‌ಂ ಬೆಳವಣಿಗೆಗೂ ಯೋಗ ಸಹಕಾರಿಯಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಹಂಪಿಗೆ ವಿದೇಶಿ ಪ್ರವಾಸಿಗರು ಕಡಿಮೆಯಾಗಿದ್ದಾರೆ. ಈಗ ಯೋಗೋತ್ಸವ ಹಿನ್ನೆಲೆಯಲ್ಲಿ ಹಂಪಿಯತ್ತ ವಿದೇಶಿ ಪ್ರವಾಸಿಗರು ಆಗಮಿಸಲು ಆಸಕ್ತಿ ತಳೆಯುತ್ತಿದ್ದಾರೆ.
45 ದೇಶದ ಸದಸ್ಯರು:
ಶ್ವಾಸ ಯೋಗ ಕೇಂದ್ರದ ಜತೆಗೆ 45 ದೇಶದ ನಾಗರಿಕರು ಸದಸ್ಯತ್ವ ಪಡೆದಿದ್ದಾರೆ. ವಚನಾನಂದ ಶ್ರೀಗಳು ನಡೆಸುತ್ತಿರುವ ಈ ಕೇಂದ್ರದ ಪ್ರತಿ ಯೋಗದ ವಿಡಿಯೋಗಳನ್ನು ಈ ಸದಸ್ಯರು ವೀಕ್ಷಿಸುತ್ತಿದ್ದಾರೆ. ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್, ಸ್ಪೇನ್, ಇಟಲಿ, ಫ್ರಾನ್ಸ್ ಸೇರಿದಂತೆ 45 ದೇಶದವರು ಹಂಪಿಯಲ್ಲಿ ನಡೆದ ಯೋಗೋತ್ಸವವನ್ನು ಫೇಸ್‌ಬುಕ್, ಯುಟ್ಯೂಬ್‌ನಲ್ಲಿ ವೀಕ್ಷಿಸಿದ್ದಾರೆ.
ಸ್ಮಾರಕಗಳ ಬಗ್ಗೆ ಚರ್ಚೆ:
ಹಂಪಿಯ ಸ್ಮಾರಕಗಳ ಬಗ್ಗೆ ಈ ವಿದೇಶಿಯವರು ಗೂಗಲ್‌ನಲ್ಲಿ ಸಚ್‌ರ್ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಇನ್ನು ಶ್ವಾಸ ಯೋಗ ಕೇಂದ್ರದ ಭಾರತ ಹಾಗು ಕರ್ನಾಟಕದ ಸದಸ್ಯರಿಗೂ ಫೋನಾಯಿಸಿ ಹಂಪಿ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಹಾಗಾಗಿ ಹಂಪಿಯಲ್ಲಿ ನಡೆಯುತ್ತಿರುವ ಯೋಗೋತ್ಸವದಿಂದ ಮುಂದೆ ದೇಶ-ವಿದೇಶಿ ಪ್ರವಾಸಿಗರು ಹಂಪಿಯತ್ತ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಲು ಅನುಕೂಲವಾಗಲಿದೆ.
ಹಂಪಿಯಲ್ಲಿ ನಡೆಯುತ್ತಿರುವ ಯೋಗೋತ್ಸವದಿಂದ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಯೋಗ ರಥಯಾತ್ರೆಯಿಂದ ಈ ಭಾಗದ ಜನರಲ್ಲಿ ಆರೋಗ್ಯ ಕಾಳಜಿ ಮೂಡಿಸುತ್ತಿದೆ. ಜತೆಗೆ ಹಂಪಿಯತ್ತ ಪ್ರವಾಸಿಗರನ್ನು ಆಕರ್ಷಿಸಲು ಸಹಕಾರಿಯಾಗಿದೆ.
Vijayanagara: ಐತಿಹಾಸಿಕ ಹಂಪಿಯ ಸ್ಮಾರಕದ ಸೌಂದರ್ಯಕ್ಕೆ ಮನಸೋತ ಜೆಪಿ ನಡ್ಡಾ
ಹಂಪಿಯಲ್ಲಿ ಮೇ. 22ರಂದು ಬೆಳಗ್ಗೆ 6 ಗಂಟೆಯಿಂದ 7:30ರ ವರೆಗೆ ಬಡವಿಲಿಂಗ ಮತ್ತು ಉಗ್ರನರಸಿಂಹ ಸ್ಮಾರಕಗಳ ಎದುರು ಯೋಗೋತ್ಸವ ನಡೆಯಲಿದೆ. ಯೋಗದಿಂದ ಈ ಭಾಗದ ಜನರ ಆರೋಗ್ಯವೂ ವೃದ್ಧಿಯಾಗಲಿದೆ ಅಂತ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ತಿಳಿಸಿದ್ದಾರೆ.
ಹಂಪಿಯಲ್ಲಿ ನಡೆಯುತ್ತಿರುವ ಯೋಗೋತ್ಸವವನ್ನು 45 ದೇಶಗಳ ನಾಗರಿಕರು ವೀಕ್ಷಿಸುತ್ತಿದ್ದಾರೆ. ಫೇಸ್‌ಬುಕ್, ಯುಟ್ಯೂಬ್‌ನಲ್ಲಿ ಯೋಗೋತ್ಸವದ ಲೈವ್ ಕೂಡ ನೀಡಲಾಗುತ್ತಿದೆ. ಹಂಪಿ ಪ್ರವಾಸೋದ್ಯಮದ ಬೆಳವಣಿಗೆಗೆ ಯೋಗೋತ್ಸವ ಪೂರಕವಾಗಲಿದೆ ಅಂತ ಹರಿಹರದ ವೀರಶೈವ ಪಂಚಮಸಾಲಿ ಪೀಠದ ಪೀಠಾಧ್ಯಕ್ಷರು ಹಾಗೂ ಶ್ವಾಸಕೇಂದ್ರದ ಸಂಸ್ಥಾಪಕರು ಶ್ರೀವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.