* ಕೃಷಿ ಕಾಯ್ದೆಗಳನ್ನು ಅಧಿವೇಶನದಲ್ಲಿಯೇ ವಾಪಸ್ ಪಡೆಯಲಿ
* 700ಕ್ಕೂ ಹೆಚ್ಚು ರೈತರ ಕಗ್ಗೊಲೆಗೆ ಕಾರಣವಾದ ಮೋದಿ ಸರ್ಕಾರ
* ಮೋದಿ ಸರ್ವಾಧಿಕಾರಿ ಧೋರಣೆ ಯಾರೂ ಪ್ರಶ್ನಿಸುತ್ತಿಲ್ಲ
ಧಾರವಾಡ(ನ.21): ರೈತರಿಗೆ ಕಂಟಕವಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು(Farm Laws) ವಾಪಸ್(Repeal)ಪಡೆದಿರುವುದಕ್ಕೆ ರೈತರು(Farmers) ಸಂಭ್ರಮಿಸುವುದಿಲ್ಲ. ಪ್ರಧಾನಮಂತ್ರಿಗಳು(Prime Minister) ಈ ಬಗ್ಗೆ ಪಶ್ಚಾತಾಪ ಪಟ್ಟಿರುವ ಬಗ್ಗೆ ಸಮಾಧಾನವಿದೆ. ಇಷ್ಟಾಗಿಯೂ ಈ ಕಾಯ್ದೆಗಳನ್ನು ಸಂಸತ್ತಿನಲ್ಲಿ ಅಧಿವೇಶನದ ಮೂಲಕವೇ ಪ್ರಧಾನಿಗಳು ವಾಪಸ್ ಪಡೆಯುವ ವರೆಗೂ ಹೋರಾಟ ಮಾತ್ರ ನಿಲ್ಲದು ಎಂದು ಕೆಪಿಸಿಸಿ(KPCC) ಮಾಧ್ಯಮ ವಿಶ್ಲೇಷಕ, ಹೋರಾಟಗಾರ ಪಿ.ಎಚ್. ನೀರಲಕೇರಿ(PH Neeralakeri) ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂಕುಶ ಪ್ರಭುತ್ವದ ಮೋದಿ(Narendra Modi) ಸರ್ಕಾರ 700ಕ್ಕೂ ಹೆಚ್ಚು ರೈತರ ಕಗ್ಗೊಲೆಗೆ ಕಾರಣವಾಗಿದೆ. ಹೋರಾಟನಿರತ ರೈತರಿಗೆ ಖಲಿಸ್ತಾನಿಗಳು, ಉಗ್ರರು, ನಕ್ಸಲರೆಂಬ ಹಣೆಪಟ್ಟಿಕಟ್ಟಿದೆ. ರೈತರನ್ನು ರಕ್ಷಿಸದೇ ಕೀಳಾಗಿ ಕಂಡಿದೆ. ನಾಗಪುರ ಆರ್‌ಎಸ್‌ಎಸ್(RSS) ಸಂಸ್ಕೃತಿಯ ಈ ಸರ್ಕಾರವನ್ನು ದೇಶದ 80 ಕೋಟಿ ಜನರು ಸಹಿಸುವುದಿಲ್ಲ ಎಂದು ಅವರು, ಸುದೀರ್ಘ ಒಂದು ವರ್ಷದ ಹೋರಾಟ ಹತ್ತಿಕ್ಕಲು ಸಾಕಷ್ಟು ತಂತ್ರ ರೂಪಿಸಿ ಮೋದಿ ಅವರು ವಿಫಲರಾಗಿದ್ದಾರೆ. ಕೊನೆಗೂ ಸುದೀರ್ಘ ಹೋರಾಟಕ್ಕೆ ಮಣಿದು ರೈತರಿಗೆ ತಲೆಬಾಗಿದ್ದಾರೆ. ಆದರೆ, ಈ ಹೋರಾಟದಲ್ಲಿ ಮಡಿದ 700ಕ್ಕೂ ಹೆಚ್ಚು ರೈತರಿಗೆ ಕೇಂದ್ರ ಸರ್ಕಾರ(Central Government) ಪರಿಹಾರವಾಗಿ ಕನಿಷ್ಠ .1 ಕೋಟಿ ನೀಡಬೇಕೆಂದು ಆಗ್ರಹಿಸಿದರು.
News Hour; ಕೃಷಿ ಕಾಯ್ದೆ ವಾಪಸ್ ಹಿಂದಿನ ಅಸಲಿ ಕಾರಣ ಹೇಳಿದ ಮೋದಿ
ಎಂಎಸ್‌ಪಿ ಜಾರಿಗೆ:
ರೈತ ಮುಖಂಡ ಶಿವಾನಂದ ವಾಲಿ ಮಾತನಾಡಿ, ಒಕ್ಕಲುತನ ನಿರ್ಮೂಲನೆ ಮಾಡಲು, ಬಂಡವಾಳಶಾಹಿಗಳಿಗೆ ಲಾಭದ ದೃಷ್ಟಿಯಿಂದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿ ಮಾಡಲು ಮುಂದಾಗಿದ್ದು ನಮ್ಮ ದುರಂತ. ರಾಜ್ಯ ಹಾಗೂ ರಾಷ್ಟ್ರದ ನಾಯಕರು ಅಯೋಗ್ಯರಿದ್ದಾರೆ. ಮೋದಿ ಅವರ ಸರ್ವಾಧಿಕಾರಿ(Dictatorship) ಧೋರಣೆ ಯಾರೂ ಪ್ರಶ್ನಿಸುತ್ತಿಲ್ಲ. ತಮ್ಮ ಹಕ್ಕುಗಳನ್ನು ಸಂಸದರು ಕಳೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಸುಳ್ಳಿನ ಸರಮಾಲೆ ಮೂಲಕ ಸರ್ಕಾರ ನಡೆಸುತ್ತಿದ್ದಾರೆ. ರೈತರ ಖಾತೆಗೆ 15 ಲಕ್ಷ ಹಣ ಹಾಕುವುದು, ವರ್ಷಕ್ಕೆ 2 ಕೋಟಿ ಉದ್ಯೋಗ(Job) ಸೃಷ್ಟಿಭರವಸೆ ಹಾಗೂ ಸ್ವಾಮಿನಾಥನ್ ವರದಿ ಯತಾವತ್ ಜಾರಿಯ ಪೊಳ್ಳು ಭರವಸೆಯಿಂದ ಅವರ ಮೇಲಿನ ನಂಬಿಕೆಯೇ ಹೋಗಿದೆ ಎಂದರು.
ಇನ್ನೋರ್ವ ರೈತ ಮುಖಂಡ
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ರಮೇಶ ಪಾಟೀಲ, ಶಿವಾನಂದ ಹೊಳೆಹಡಗಲಿ, ಎಂ.ಎಫ್. ಹಿರೇಮಠ, ಬಸವರಾಜ ನಾಯ್ಕರ, ಭೀಮಪ್ಪ ಕಾಸಾಯಿ, ಗುರುರಾಜ ಹುಣಸೀಮರದ, ಶ್ರೀಶೈಲಗೌಡ ಕಮತರ, ಸಿದ್ದಣ್ಣ ಕಂಬಾರ ಇದ್ದರು.
'ಸರ್ಕಾರದ ನಿರ್ಧಾರಕ್ಕೆ ಸ್ವಾಗತ, ಆದರೆ ಹೋರಾಟ ನಿಲ್ಲಿಸಲ್ಲ!'
ಮೂರು ವಿವಾದಿತ ಕೃಷಿ ಕಾಯ್ದೆ ಹಿಂದಕ್ಕೆ ಪಡೆಯುವ ಕೇಂದ್ರ ಸರ್ಕಾರದ ನಿರ್ಧಾರವನ್ನು, ರೈತ ಹೋರಾಟದ ಮುಂಚೂಣಿಯಲ್ಲಿದ್ದ ಕೃಷಿ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (Kisan Morcha) ಸ್ವಾಗತಿಸಿದೆ. ಜೊತೆಗೆ ಮುಂದಿನ ಹೋರಾಟದ ಕುರಿತು ಶೀಘ್ರವೇ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಘೋಷಿಸಿದೆ. ಆದರೆ ಈ ರೈತ ಹೋರಾಟದ ಮುಂಚೂಣಿ ನಾಯಕರಾಗಿದ್ದ ಭಾರತೀಯ ಕಿಸಾನ್ ಯೂನಿಯನ್‌ನ ನಾಯಕ ರಾಕೇಶ್ ಟಿಕಾಯತ್ (Bharatiya Kisan Union (BKU) leader Rakesh Tikait), ಸರ್ಕಾರದ ನಿರ್ಧಾರ ಸ್ವಾಗತ ಮಾಡಿದ್ದರೂ, ಹೋರಾಟ ಮುಂದುವರೆಯಲಿದೆ ಎಂದು ಘೋಷಿಸಿದ್ದಾರೆ.
Farmers Law Withdrawn: ಕಾಶ್ಮೀರಕ್ಕೆ ವಿಶೇಷ ಸ್ಥಾನ ಬೇಕು, ಇದೀಗ ಸಿಎಎ ಹಿಂಪಡೆಯಲು ಮುಸ್ಲಿಂ ಸಂಘಟನೆ ಬೇಡಿಕೆ!
ಈ ಕುರಿತು ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಟಿಕಾಯತ್ ‘ತಕ್ಷಣಕ್ಕೆ ನಾವು ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ, ನಾವು ಸಂಸತ್ತಿನಲ್ಲಿ (Parliament) ಕಾಯ್ದೆಯನ್ನು ಹಿಂದಕ್ಕೆ ಪಡೆಯುವವರೆಗೂ ಕಾದು ನೋಡಲಿದ್ದೇವೆ. ಜೊತೆಗೆ ಕನಿಷ್ಠ ಬೆಂಬಲ ಬೆಲೆ ಖಾತರಿಯನ್ನು ಸರ್ಕಾರ ನಮಗೆ ನೀಡಬೇಕು. ಈ ವಿಷಯ ಇತ್ಯರ್ಥವಾಗದೇ ರೈತರು ತಮ್ಮ ಮನೆಗೆ ತೆರಳುವುದಿಲ್ಲ. ಕನಿಷ್ಠ ಬೆಂಬಲ ಬೆಲೆ ವಿಷಯವು ಇಡೀ ದೇಶಕ್ಕೆ ಅನ್ವಯವಾಗುವ ವಿಷಯ. ಅಲ್ಲದೇ ರೈತರು ಪ್ರಸ್ತಾಪಿಸಿರುವ ಇತರೆ ವಿಷಯಗಳ ಕುರಿತೂ ಸರ್ಕಾರ ನಮ್ಮೊಂದಿಗೆ ಮಾತುಕತೆ ನಡೆಸಬೇಕು’ ಎಂದು ತಮ್ಮ ಕಠಿಣ ನಿಲವು ಮುಂದುವರೆಸಿದ್ದಾರೆ.
ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಘೋಷಣೆಯ ಹೊರತಾಗಿಯೂ ತಮ್ಮ ಸಂಘಟನೆಗೆ ಸೇರಿದ ಯಾವುದೇ ರೈತರು ಸಂಭ್ರಮಾಚರಣೆ ನಡೆಸಬಾರದು, ಹೋರಾಟ ಇನ್ನೂ ಮುಂದುವರೆಯಲಿದೆ ಎಂದು ಹೇಳಿದ್ದಾರೆ.