ಯಕ್ಷಗಾನ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ನವೀಕೃತ ಮನೆ ಹಸ್ತಾಂತರ

By Sathish Kumar KH  |  First Published Jun 28, 2023, 9:22 PM IST

ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಿಗೆ ನವೀಕೃತಗೊಂಡ ನಂದಾದೀಪ ಮನೆಗಳನ್ನು ಹಸ್ತಾಂತರ ಮಾಡಲಾಯಿತು.


ಉಡುಪಿ (ಜೂ.28): ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಾದ ಅಮಾಸೆಬೈಲಿನ ಚೇತನ್ ಮತ್ತು ನಯನಾ ಇವರಿಗೆ ಪಂಚಮಿ ಟ್ರಸ್ಟ್ (ರಿ.), ಗಾಂಧಿ ಆಸ್ಪತ್ರೆ, ಉಡುಪಿ ಇದರ ಪ್ರಾಯೋಜಕತ್ವದಲ್ಲಿ ನವೀಕರಣಗೊಂಡ ಮನೆ ‘ನಂದಾದೀಪ’ ವನ್ನು ಗಾಂಧಿ ಆಸ್ಪತ್ರೆಯ ವರಿಷ್ಠರಾದ ಡಾ. ಹರಿಶ್ಚಂದ್ರ ಹಾಗೂ ಶ್ರೀಮತಿ ಲಕ್ಷ್ಮೀ ಹರಿಶ್ಚಂದ್ರರು ಜೂನ್ 22, 2023ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಡಾ. ಹರಿಶ್ಚಂದ್ರರು ಬಡ ವಿದ್ಯಾರ್ಥಿಗಳನ್ನು ಹುಡುಕಿ ಅವರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಯಕ್ಷಗಾನ ಕಲಾರಂಗ ಸಂಸ್ಥೆ ದೇಶಕ್ಕೆ ಮಾದರಿಯಾಗಿದೆ. ಸೇವಾಮನೋಭಾವ ಹೊಂದಿರುವ ಕಾರ್ಯಕರ್ತರ ಪಡೆಯನ್ನು ಕಂಡು ಬೆರಗಾಗಿದ್ದೇನೆ.  ಮುಂದಿನ ಐದು ವರ್ಷಗಳಲ್ಲಿ ವರ್ಷಕ್ಕೊಂದರಂತೆ ಐದು ಮನೆಗಳ ನಿರ್ಮಾಣಕ್ಕ ನಮ್ಮ ಟ್ರಸ್ಟ್ ಪ್ರಾಯೋಜಕತ್ವ ವಹಿಸಲಿದೆ ಎಂದು ಭರವಸೆ ನೀಡಿದರು. ಶ್ರೀಮತಿ ನಾಗರತ್ನ ಮತ್ತು ಮಕ್ಕಳಾದ ಚೇತನ್ ಹಾಗೂ ನಯನಾ ಮಾತನಾಡಿ ಸಂಸ್ಥೆಯ ಮೂಲಕ ನೆರವು ನೀಡಿದ ದಾನಿಗಳಿಗೂ, ವಿದ್ಯಾಪೋಷಕ್ ಸಂಸ್ಥೆಗೂ ನಾವು ಋಣಿಯಾಗಿರುತ್ತೇವೆ. ಮುಂದೆ ನಮ್ಮ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ದೊರೆತ ಬಳಿಕ ಸಂಸ್ಥೆಯ ಮೂಲಕ ನೆರವು ನೀಡುತ್ತೇವೆಂದು ಕೃತಜ್ಞತೆ ಹೇಳಿದರು. 

Tap to resize

Latest Videos

undefined

ಬಿಜೆಪಿ ಬೇಗುದಿ: ಅರವಿಂದ್‌ ಬೆಲ್ಲದ್‌ ಆಡಿದ ಮಾತು ವೈರಲ್!

ಮುಖ್ಯ ಅಭ್ಯಾಗತರಾಗಿ ಸಾಮಾಜಸೇವೆಯಲ್ಲಿ ತೊಡಗಿಸಿಕೊಂಡ ಶಂಕರ ಐತಾಳ್ ಹಾಗೂ ಪಂಚಾಯತ್ ಉಪಾಧ್ಯಕ್ಷ ಕೃಷ್ಣ ಪೂಜಾರಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮನೆ ನವೀಕರಣ ಕಾರ್ಯದಲ್ಲಿ ಸಹಕರಿಸಿದ ಸೂರ್ಯಪ್ರಕಾಶ್ ದಾಮ್ಲೆ ಹಾಗೂ ನಾರಾಯಣ ರಾವ್ ರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಕೆ. ಸದಾಶಿವ ರಾವ್, ಬಿ. ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ಕೃಷ್ಣಮೂರ್ತಿ ಭಟ್, ನಟರಾಜ ಉಪಾಧ್ಯ, ಕಿಶೋರ್ ಸಿ. ಉದ್ಯಾವರ, ಅಶೋಕ್ ಎಂ., ಗಣೇಶ್ ಬ್ರಹ್ಮಾವರ, ಕೆ. ಅಜಿತ್ ಕುಮಾರ್, ಸುದರ್ಶನ ಬಾಯರಿ ಹಾಗೂ ಯಕ್ಷಗಾನ ಕಲಾವಿದ ಜೋಗು ಕುಲಾಲ್ ಉಪಸ್ಥಿತರಿದ್ದರು. ಇದು ಸಂಸ್ಥೆ ದಾನಿಗಳ ನೆರವಿನಿಂದ ನಿರ್ಮಿಸಿದ 40ನೆಯ ಮನೆಯಾಗಿದೆ. ಇನ್ನೂ 8 ಮನೆಗಳು ನಿರ್ಮಾಣದ ಹಂತದಲ್ಲಿವೆ.

ರಾಮ ಮಂದಿರ ನಿರ್ಮಾಣವಾಗಿದೆ, ಇನ್ನು ರಾಮರಾಜ್ಯ ನಿರ್ಮಾಣವಾಗಬೇಕಾಗಿದೆ - ಪೇಜಾವರ ಶ್ರೀ: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿ ಜಂಬೂರಿನ ನಾಗರಾಜನಿಗೆ ಯಕ್ಷಗಾನ ಕಲಾರಂಗ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಾವೇ ಪ್ರಾಯೋಜಕತ್ವ ವಹಿಸಿ ನಿರ್ಮಿಸಿದ ಮನೆಯನ್ನು ಉದ್ಘಾಟಿಸಿ, ಅನುಗ್ರಹ ಸಂದೇಶ ನೀಡಿದರು. ಸಮಾಜದಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ಮಾಡಿದರೆ ರಾಮರಾಜ್ಯದ ಕನಸು ನನಸಾಗುತ್ತದೆ ಎಂದರು. ಸಾಕಷ್ಟು ಜನ ಧನಿಕರಿದ್ದಾರೆ. ಅವರ ಸಂಪತ್ತು ಬಡವರಿಗೆ ಸಿಗಬೇಕಾದರೆ ಯಕ್ಷಗಾನ ಕಲಾರಂಗದಂತಹ ವಿಶ್ವಾಸಾರ್ಹ ಸಂಘಟನೆಯ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು. ಮನೆಯ ಸಹಪ್ರಾಯೋಜಕರಾದ ಶ್ರೀ ಗುರುರಾಜ್ ಅಮೀನ್ ಮತ್ತು ಶ್ರೀಮತಿ ಜಯಲಕ್ಷ್ಮೀ ಜಿ. ಅಮೀನರಿಗೆ ಸ್ವಾಮೀಜಿಯವರು ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು. 

Bengaluru: ಗೃಹ ಪ್ರವೇಶದ ಮನೆಗೆ ನುಗ್ಗಿ ಬಟ್ಟೆ ಎತ್ತಿ ತೋರಿಸಿದ ಮಂಗಳಮುಖಿಯರು

ಅಭ್ಯಾಗತರಾಗಿ ಕೆ. ಸದಾಶಿವ ಭಟ್, ಯು. ರಾಜಗೋಪಾಲ ಅಚಾರ್ಯ, ಬಿಲ್ಲಾಡಿ ಸೀತಾರಾಮ್ ಶೆಟ್ಟಿ, ಸಜಿತ್ ಹೆಗ್ಡೆ ಭಾಗವಹಿಸಿದ್ದರು. ಸಂಸ್ಥೆಯ ಸದಸ್ಯರಾದ ಭುವನಪ್ರಸಾದ್ ಹೆಗ್ಡೆ, ವಿದ್ಯಾಪ್ರಸಾದ್, ಕಿಶೋರ್ ಸಿ. ಉದ್ಯಾವರ, ಅಜಿತ್ ಕುಮಾರ್, ಗಣೇಶ್ ಬ್ರಹ್ಮಾವರ, ರಾಜೀವಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

click me!