Ramanagara: ಮಾಗಡಿಯನ್ನು ಪ್ರವಾಸಿಗರ ತಾಣವಾಗಿ ಪರಿವರ್ತಿಸುವೆ: ಶಾಸಕ ಬಾಲಕೃಷ್ಣ

By Kannadaprabha News  |  First Published Jun 28, 2023, 8:43 PM IST

ಕೆಂಪೇಗೌಡರ ನಾಡಾಗಿರುವ ಮಾಗಡಿಯನ್ನು ಪ್ರವಾಸಿ ತಾಣವನ್ನಾಗಿ ಮಾಡಿ ದೇಶ ವಿದೇಶದಿಂದ ಪ್ರವಾಸಿಗರು ಬರುವಂತೆ ಮಾಡಲಾಗುವುದು ಎಂದು ಶಾಸಕ ಬಾಲಕೃಷ್ಣ ಹೇಳಿದರು.


ಮಾಗಡಿ (ಜೂ.28): ಕೆಂಪೇಗೌಡರ ನಾಡಾಗಿರುವ ಮಾಗಡಿಯನ್ನು ಪ್ರವಾಸಿ ತಾಣವನ್ನಾಗಿ ಮಾಡಿ ದೇಶ ವಿದೇಶದಿಂದ ಪ್ರವಾಸಿಗರು ಬರುವಂತೆ ಮಾಡಲಾಗುವುದು ಎಂದು ಶಾಸಕ ಬಾಲಕೃಷ್ಣ ಹೇಳಿದರು. ಪಟ್ಟಣದ ಕೆಂಪೇಗೌಡ ಪ್ರತಿಮೆ ಬಳಿ ಕೆಂಪೇಗೌಡರ ಜಯಂತಿ ಅಂಗವಾಗಿ ಮಾಲಾರ್ಪಣೆ ಹಾಗೂ ಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ನಿರ್ಮಾತೃ ಮಾಗಡಿ ಕೆಂಪೇಗೌಡರು ಎಂಬುದು ಹೆಮ್ಮೆಯ ವಿಚಾರವಾಗಿದೆ. ಹಿಂದಿನ ಸರ್ಕಾರ ಕೆಂಪೇಗೌಡ ಸಮಾಧಿ ಸ್ಥಳ ಅಭಿವೃ​ದ್ಧಿಗೆ ನೀಲಿ ನಕ್ಷೆ ತಯಾರಿ ಮಾಡಿದ್ದು ಅದರಂತೆ ಅಭಿವೃದ್ದಿ ಕೆಲಸ ಮಾಡಲಾಗು​ವುದು ಎಂದರು. 

ಬಿಬಿಎಂಪಿಯಿಂದಲೂ ಕೂಡ ಬಜೆಟ್‌ನಲ್ಲಿ 25 ಕೋಟಿ ಅನುದಾನ ಮೀಸಲಿಟ್ಟು ಕೆಂಪೇಗೌಡ ಸಮಾ​ಧಿ ಸ್ಥಳ ಪ್ರವಾಸಿ ತಾಣವನ್ನಾಗಿ ಅಭಿವೃದ್ದಿ ಮಾಡುತ್ತೇ​ವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಂದ ಅಭಿ​ವೃದ್ಧಿ ಕಾಮ​ಗಾ​ರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿ​ದರು. ಕೆಂಪೇಗೌಡ ಅಭಿವೃದ್ದಿ ಸಮಿತಿ ರಾಜ್ಯಾಧ್ಯಕ್ಷ ಎಚ್‌.ಎಂ.ಕೃಷ್ಣಮೂರ್ತಿ ಮಾತನಾಡಿ, ಕೆಂಪೇಗೌಡರು ಎಲ್ಲಾ ಜನಾಂಗದ ಅಭಿವೃದ್ದಿಗಾಗಿ ಶ್ರಮಿಸಿದ್ದಾರೆ. ಅವರ ಜಯಂತಿಯನ್ನು ಸರ್ಕಾರ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು ಮಾಗಡಿ ಪುಣ್ಯ ಭೂಮಿ ಕೆಂಪೇಗೌಡರ ಹೆಸರಿನಲ್ಲಿ ಅಭಿವೃದ್ದಿ ಮಾಡಲು ಡಿ.ಕೆ.ಶಿವಕುಮಾರ್‌ ಹೆಚ್ಚಿನ ಆಸಕ್ತಿಯನ್ನು ತೋರುವಂತಾಗಲಿ ಎಂದು ತಿಳಿಸಿದರು. 

Tap to resize

Latest Videos

ಬಿಜೆಪಿ-ಜೆಡಿ​ಎಸ್‌ ಮೈತ್ರಿ ಆಗಬಹುದು ಎಂದು ಅನಿಸುತ್ತಿದೆ: ಯೋಗೇಶ್ವರ್‌

ಜ್ಯೋತಿಗೆ ಚಾಲನೆ: ಬೆಂಗಳೂರಿನ ವಿಧಾನ ಸೌಧದಲ್ಲಿ ಕೆಂಪೇಗೌಡರ ಜಯಂತಿ ಅಂಗವಾಗಿ ಮಾಗಡಿಯಿಂದ ಕೆಂಪೇಗೌಡರ ಜ್ಯೋತಿಯನ್ನು ಅದ್ದೂರಿ ಮೆರವಣಿಗೆ ಮೂಲಕ ಬೆಂಗಳೂರಿಗೆ ಕೊಂಡೋಯ್ಯಲಾಯಿತು. ಈ ಸಂದ​ರ್ಭ​ದಲ್ಲಿ ತಹ​ಸೀ​ಲ್ದಾರ್‌ ಸುರೇಂದ್ರ ಮೂರ್ತಿ, ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಜಿಪಂ ಮಾಜಿ ಅಧ್ಯಕ್ಷ ಎಚ್‌.ಎನ್‌.ಅಶೋಕ್‌, ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ, ದಿಶಾ ಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ, ಶ್ರೀನಿವಾಸಮೂರ್ತಿ, ಶಿವಪ್ರಸಾದ್‌ ಮತ್ತಿ​ತ​ರರು ಹಾಜ​ರಿ​ದ್ದರು.

ವಾರದಲ್ಲಿ 3 ದಿನ ಪಂಚಾ​ಯಿ​ತಿ​ಗ​ಳಿಗೆ ಶಾಸಕರ ಭೇಟಿ: ಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟುಕೊಂಡು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಅವರ ಋುಣ ತೀರಿಸುವ ನಿಟ್ಟಿನಲ್ಲಿ ವಾರದ ಮೂರು ದಿನ ಪಂಚಾಯಿತಿಗಳಿಗೆ ಭೇಟಿ ನೀಡಿ ಗ್ರಾಮದ ಸಮಸ್ಯೆಗಳನ್ನು ಆಲಿಸಲಾಗುತ್ತದೆ ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ಹೇಳಿದರು. ತಾಲೂಕಿನ ಸೀಗೇಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಜನಗಳ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.

ಸೋಮವಾರ, ಬುಧವಾರ, ಶುಕ್ರವಾರ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡುತ್ತೇನೆ. ಇನ್ನುಳಿದ ದಿನಗಳಲ್ಲಿ ಜನಗಳ ಭೇಟಿ ಮಂಗಳವಾರ ಜನಗಳ ಸಂದರ್ಶನ ಉಳಿದ ದಿನ ವಿಧಾನಸೌಧಕ್ಕೆ ತೆರಳಿ ಕ್ಷೇತ್ರದ ಸಮಸ್ಯೆಗಳನ್ನು ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಕ್ಷೇತ್ರದ ಪ್ರತಿ ಪಂಚಾಯತಿಗೂ ಹೋಗುತ್ತೇನೆ. ಜನಗಳ ಸಮಸ್ಯೆ ಕೇಳಿ ಬಗೆಹರಿಸುವುದಾದರೆ ಸ್ಥಳದಲ್ಲೇ ಪರಿಹರಿಸುತ್ತೇನೆ. ಇಲ್ಲವೇ ಅಗತ್ಯ ಕ್ರಮ ಕೈಗೊಳ್ಳುವೆ.. ಇದು ಮೊದಲನೆಯ ಪಂಚಾಯಿತಿ ಭೇಟಿ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ಕೆಲಸ ಮಾಡಲು ಇಷ್ಟ ಇಲ್ಲದಿದ್ದರೆ ಹೊರಡಿ: ಅಧಿಕಾರಿಗಳಿಗೆ ಶಾಸಕ ಇಕ್ಬಾಲ್‌ ತರಾಟೆ

ಜನಗಳಿಗೆ ಅಕ್ಕಿ ಕೊಡುತ್ತೇವೆ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿ​ಎಂ ಡಿ.ಕೆ.ಶಿವಕುಮಾರ್‌ ಶಕ್ತಿಯುತ ನಾಯಕರಾಗಿದ್ದು, ಎಷ್ಟೇ ಸಮಸ್ಯೆ ಬಂದರೂ ಅದನ್ನು ಎದರಿಸುವ ಶಕ್ತಿ ಇದೆ. ಜನರಿಗೆ ನೀಡಿದ ಭರವಸೆಯಂತೆ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಕೊಡುಡುತ್ತೇವೆ. ವಿರೋಧ ಪಕ್ಷದವರಿಗೆ ಕಾಂಗ್ರೆಸ್‌ಗೆ 135 ಸ್ಥಾನ ಬಂದದ್ದು ಸಹಿಸಲಾಗುತ್ತಿಲ್ಲ. ಈಗ ಕೇಂದ್ರ ಸರ್ಕಾರ ಇಟ್ಟುಕೊಂಡು ವಿರೋಧ ಮಾಡುತ್ತಿದ್ದು ಇದನ್ನು ಎದುರಿಸುವ ಶಕ್ತಿ ನಮ್ಮ ನಾಯಕರಿಗಗಿದೆ ಎಂದು ಬಾಲಕೃಷ್ಣ ವಿವರಿಸಿದರು.

click me!