ನಾಡಪ್ರಭು ಕೆಂಪೇಗೌಡರು ಎಲ್ಲ ಜನಾಂಗದ ಅಭಿವೃದ್ಧಿ ಹರಿಕಾರರು: ಸಚಿವ ಮುನಿಯಪ್ಪ

Published : Jun 28, 2023, 08:24 PM IST
ನಾಡಪ್ರಭು ಕೆಂಪೇಗೌಡರು ಎಲ್ಲ ಜನಾಂಗದ ಅಭಿವೃದ್ಧಿ ಹರಿಕಾರರು: ಸಚಿವ ಮುನಿಯಪ್ಪ

ಸಾರಾಂಶ

ಅಂದಿನ ಕಾಲದಲ್ಲೆ ನಾಡಪ್ರಭು ಕೆಂಪೇಗೌಡರು ಎಲ್ಲ ಜನಾಂಗದ ಅಭಿವೃದ್ಧಿಗೆ ಉತ್ತಮ ಮಾರ್ಗದರ್ಶಕರು. ದೂರ ದೃಷ್ಟಿಯುಳ್ಳವರು ಎಂದು ಜಿಲ್ಲಾ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು. 

ದೇವನಹಳ್ಳಿ (ಜೂ.28): ಅಂದಿನ ಕಾಲದಲ್ಲೆ ನಾಡಪ್ರಭು ಕೆಂಪೇಗೌಡರು ಎಲ್ಲ ಜನಾಂಗದ ಅಭಿವೃದ್ಧಿಗೆ ಉತ್ತಮ ಮಾರ್ಗದರ್ಶಕರು. ದೂರ ದೃಷ್ಟಿಯುಳ್ಳವರು ಎಂದು ಜಿಲ್ಲಾ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಸಾಮಾನ್ಯವಾಗಿ ಯಾವುದೇ ವೃತ್ತಿ ಕೈಗೊಂಡರೂ ಮನುಷ್ಯನಿಗೆ ಮೊದಲು ಶ್ರದ್ಧೆ ಮತ್ತು ಭಕ್ತಿ ಇರಬೇಕು. ಬಸವಣ್ಣನವರು ಹೇಳಿದ ಹಾಗೆ ಕಾಯಕದಲ್ಲಿ ಕೈಲಾಸ ಕಂಡವರಲ್ಲಿ ಕೆಂಪೇಗೌಡರು ಒಬ್ಬರಾಗಿದ್ದರು. ಅವರು ಹಾಕಿದ ಅಡಿಪಾಯ ಇಂದು ಬೆಂಗಳೂರು ಜಗತ್ತಿನ ಅಗ್ರಗಣ್ಯ ರಾಷ್ಟ್ರಗಳ ಸಿಲಿಕಾನ್‌ ಸಿಟಿಯಾಗಿ ಬೆಳೆದಿದೆ. ಮನುಷ್ಯನಲ್ಲಿ ಎಷ್ಟೇ ಹಣವಿರಬಹುದು. ಆದರೆ ನಯ ವಿನಯ ವ್ಯಕ್ತಿತ್ವ ಇಲ್ಲದಿದ್ದರೆ ಆ ಮನುಷ್ಯ ಶೂನ್ಯ ಎಂದು ಶ್ಲಾಘಿಸಿದರು.

ಕೇಂದ್ರದ ಬಳಿ ಅಗತ್ಯಕ್ಕಿಂತ 2 ಪಟ್ಟು ಅಕ್ಕಿ ದಾಸ್ತಾನಿದ್ದರೂ ಕೊಡ್ತಿಲ್ಲ: ಸಚಿವ ಮುನಿಯಪ್ಪ ಕಿಡಿ

ಕೆಂಪೇಗೌಡರ ಜನ್ಮಸ್ಥಳವನ್ನು ಎತ್ತರಕ್ಕೆ ಕೊಂಡಯ್ಯಬೇಕಾದರೆ ಜಿಲ್ಲಾಧಿಕಾರಿಗಳು ಈ ಪ್ರದೇಶದಲ್ಲಿ ಒಂದು ಎಕರೆ ಜಮೀನು ಕೊಡುವುದಾದರೆ ವಿದ್ಯಾಸಂಸ್ಥೆ ಆರಂಭಿಸಬೇಕು. ಆಗ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಸರ್ಕಾರದ ಎಲ್ಲ ನೆರವು ಕೊಡಿಸಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್‌.ಬಚ್ಚೇಗೌಡ ಮಾತನಾಡಿ, ಕೆಂಪೇಗೌಡರ ಜೀವನ ಚರಿತ್ರೆ ಬಗ್ಗೆ ತಿಳಿಸಿದರು. ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಸಿ.ವೆಂಕಟೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ರಾಜಣ್ಣ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್‌.ಕೃಷ್ಣಪ್ಪ ಮಾತನಾಡಿದರು.

ಸಾಕಷ್ಟು ಅಕ್ಕಿ ದಾಸ್ತಾನಿದ್ದರೂ ಕೇಂದ್ರ ಸರ್ಕಾರ ಕೊಡುತ್ತಿಲ್ಲ: ಸಚಿವ ಮುನಿಯಪ್ಪ

ಸಮಾರಂಭದಲ್ಲಿ ಒಕ್ಕಲಿಗರ ಸಂಘದ ಕಾರ್ಯದರ್ಶಿ ವಕೀಲ ಮುನಿರಾಜು, ಹಿರಿಯರಾದ ಬಿ.ಎಂ.ಬೈರೇಗೌಡ, ಕೆ.ಸಿ.ಮಂಜುನಾಥ್‌, ಡಾ. ಎಂ.ಮುನಿರಾಜು, ತಾಲೂಕು ಕಸಾಪ ಅಧ್ಯಕ್ಷ ಆರ್‌.ಕೆ.ನಂಜೇಗೌಡ, ಸಿ.ಜಗನ್ನಾಥ್‌, ಎಸ್‌ಎಲ್‌ಎನ್‌ ಮುನಿರಾಜು, ಮಾಜಿ ಪುರಸಭಾಧ್ಯಕ್ಷ ಎಂ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಡಾ.ಎನ್‌.ಶಿವಶಂಕರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಡಿ.ಎಂ.ರವಿಕುಮಾರ್‌ ಉಪಸ್ಥಿತರಿದ್ದರು. ತಾಪಂ ಇಒ ವಸಂತಕುಮಾರ್‌, ತಹಸೀಲ್ದಾರ್‌ ಶಿವರಾಜ್‌ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

PREV
Read more Articles on
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ