Hampi Utsav 2023: ಹಂಪಿ ಉತ್ಸವದಲ್ಲಿ ಸಾಹಸ ಕ್ರೀಡೆಗಳ ಕಲರವ, ಕೆರೆಯಲ್ಲಿ ಪ್ರವಾಸಿಗರ ಜಾಲಿರೈಡ್‍

By Suvarna News  |  First Published Jan 28, 2023, 6:50 PM IST

ಹಂಪಿ ಉತ್ಸವದ ಅಂಗವಾಗಿ ಹಂಪಿಯ ಹೇಮಕೂಟ ಬೆಟ್ಟ ಎದುರಿನ  ಜೈನ ದೇವಾಲಯ ಆವರಣದಲ್ಲಿ  ನೋಪಾಸನಾ ಅಡ್ವೆಂಚರ್ ಗೇಮ್ಸ್ ವತಿಯಿಂದ ಅಂತಾರಾಷ್ಟ್ರೀಯ ರಾಕ್ ಕ್ಲೈಂಬಿಂಗ್ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ದೇಶಿಗರು ಸೇರಿದಂತೆ 46 ಜನ ವಿದೇಶಿಗರು ರಾಕ್ ಕ್ಲೈಂಬಿಂಗ್ ಮಾಡುವುದನ್ನು ಮನಮೋಹಕವಾಗಿತ್ತು.


ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್

ವಿಜಯನಗರ (ಜ.28): ಹಂಪಿ ಉತ್ಸವದ ಮೊದಲ ದಿನ ಸಂಗೀತ, ಸಾಹಿತ್ಯ , ನೃತ್ಯವಾದ್ರೇ ಎರಡನೇ ದಿನದ ಸಾಹಸ, ಜಲಕ್ರೀಡೆ, ಗುಂಡು ಎತ್ತುವ ಸ್ಪರ್ಧೆ ಕಾರ್ಯಕ್ರಮಗಳು ಮತ್ತೊಮ್ಮೆ ಹಂಪಿಯತ್ತ ಪ್ರವಾಸಿಗರನ್ನು ಕೈಬಿಸಿ ಕರೆಯುವಂತೆ ಮಾಡಿತ್ತು. ಇನ್ನೂ ಸಾಹಸ ಕ್ರೀಡೆಗಳೆಂದರೆ ಎಲ್ಲರಿಗೂ ಮೈಜುಮ್ ಎನ್ನುವ ಅನುಭವವಾಗುತ್ತದೆ. ವಿಜಯನಗರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಂಪಿ ಉತ್ಸವದ ಅಂಗವಾಗಿ ಹಂಪಿಯ ಹೇಮಕೂಟ ಬೆಟ್ಟ ಎದುರಿನ  ಜೈನ ದೇವಾಲಯ ಆವರಣದಲ್ಲಿ  ನೋಪಾಸನಾ ಅಡ್ವೆಂಚರ್ ಗೇಮ್ಸ್ ವತಿಯಿಂದ ಅಂತಾರಾಷ್ಟ್ರೀಯ ರಾಕ್ ಕ್ಲೈಂಬಿಂಗ್ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ದೇಶಿಗರು ಸೇರಿದಂತೆ 46 ಜನ ವಿದೇಶಿಗರು ರಾಕ್ ಕ್ಲೈಂಬಿಂಗ್ ಮಾಡುವುದನ್ನು ಮನಮೋಹಕವಾಗಿತ್ತು.

Tap to resize

Latest Videos

undefined

ದೇಶಿಗರ ಜೊತೆಗೆ ವಿದೇಶಿಗರು ಸಾಹಸ ಕ್ರೀಡೆಯಲ್ಲಿ ಉತ್ಸುಕತೆಯಿಂದ ಪಾಲ್ಗೊಂಡಿದ್ದರು. ಹಂಪಿಯು ಬಹುತೇಕ ಗುಡ್ಡ ಬೆಟ್ಟಗಳಿಂದ ಕೂಡಿರುವ ತಾಣವಾಗಿದೆ. ಸಾಸಿವೆ ಕಾಳು ಗಣಪತಿ ಎದುರು ರ್ಯಾಪ್ಲಿಂಗ್, ಜಿಪ್ ಲೈನ್, ಪೈಪ್ ಲ್ಯಾಡರ್, ಅರ್ಚೆರಿ, ಟಾರ್ಗೆಟ್ ಶೂಟಿಂಗ್, ವಾಲ್ ಕ್ಲೈಂಬಿಂಗ್ ಸೇರಿದಂತೆ ಇತರೆ ಸಾಹಸ ಕ್ರೀಡೆ ಆಟಗಳನ್ನು ಆಯೋಜಿಸಲಾಗಿತ್ತು ಸಾರ್ವಜನಿಕರು, ಯುವಕರು ಭಾಗವಹಿಸಿ ಕ್ರೀಡೆಗಳನ್ನು ಆನಂದಿಸಿದರು.
 
ಗಮನ ಸೆಳೆದ ರಾಜ್ಯಮಟ್ಟದ ಕಲ್ಲು ಗುಂಡು ಎತ್ತುವ ಸ್ಪರ್ಧೆ:
ಹಂಪಿ ಉತ್ಸವದ ವಿಶೇಷ ಆಕರ್ಷಣೆಗಳಲ್ಲೊಂದಾದ ರಾಜ್ಯಮಟ್ಟದ ಕಲ್ಲು ಗುಂಡು ಎತ್ತುವ ಪಂದ್ಯಾವಳಿಯಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಶೇಖಪ್ಪ ಬಸಪ್ಪ ಯಾಳವಾರ ಅವರು ಅತೀ ಕಡಿಮೆ ಅವಧಿಯಲ್ಲಿ 155 ಕೆ.ಜಿ. ತೂಕದ ಗುಂಡು ಎತ್ತಿ ಗೆಲುವನ್ನು ಸಾಧಿಸಿದರು.

ಹಂಪಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ: ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು

ಬಾಗಲಕೋಟ ಜಿಲ್ಲೆಯ ಇಬ್ರಾಹಿಂ ಸಾಬ್ ಮುಕಬುಲ್ ಸಾಬ್ ಅರಬ್ ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಸ್ಪರ್ಧೆಯಲ್ಲಿ ವಿಜಯಪುರ ಸಿದ್ದು, ಹೊಸಪೇಟೆಯ ಆನಂದ,  ಕುಡುತಿನಿಯ ಧನರಾಜ ಮತ್ತು ಕಂಪ್ಲಿಯ ಮಾರುತಿ ಸ್ಪರ್ಧಿಸಿದ್ದರು. ವಿಜೇತ ಸ್ಪರ್ಧಾಳುಗಳಿಗೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಹರಿಸಿಂಗ್ ರಾಥೋಡ್, ತಾಪಂ ಇಓ ರಮೇಶ ಜೆ.ವಿ., ಮಲಪನಗುಡಿಯ ಗ್ರಾಪಂ ಅಧ್ಯಕ್ಷರಾದ ರಘು ನಾಯ್ಕ ಹಾಗೂ ಇತರರು ಬಹುಮಾನ ನೀಡಿ ಗೌರವಿಸಿದರು.

Hampi Utsav 2023: ವಿಜಯನಗರದ ಗತ ವೈಭವದ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ

ಕಮಲಾಪುರ ಕೆರೆಯಲ್ಲಿ ಆಯೋಜನೆಗೊಂಡ ಜಲಕ್ರೀಡೆ:
ಹಂಪಿ ಉತ್ಸವದ ಹಿನ್ನಲೆ ಕಮಲಾಪುರ ಕೆರೆಯಲ್ಲಿ ಆಯೋಜಿಸಲಾಗಿದ್ದ ಜಲಕ್ರೀಡೆಗಳಲ್ಲಿ  ಜನರು ರೋಚಕ ಅನುಭವ ಪಡೆದರು. ಉತ್ಸವದ ಎರಡನೇ ಉತ್ಸವವನ್ನು  ಕಣ್ತುಂಬಿಕೊಳ್ಳಲು ತೆರಳುತ್ತಿದ್ದ ಪ್ರವಾಸಿಗರು ಕೆರೆಯಲ್ಲಿ  ಕ್ರೀಡೆಯಲ್ಲಿ ಪಾಲ್ಗೊಂಡು ರೋಚಕ ಅನುಭವ ಪಡೆದರು. ಕೆರೆಯಲ್ಲಿ ಸಾಮೂಹಿಕ ಬೋಟಿಂಗ್, ವೈಯಕ್ತಿಕ ಬೋಟಿಂಗ್   ಮೂಲಕ ಜಾಲಿರೈಡ್ ಮಾಡಿದರು.

click me!