ಭದ್ರಾವತಿಯ VISL MPM ಕಾರ್ಖಾನೆಗಳು ಮುಚ್ಚುವ ಸ್ಥಿತಿಯನ್ನು ತಲುಪಿದ್ದು ಉಳಿಸುವ ಸಲುವಾಗಿ ಪ್ರಯತ್ನ ಮಾಡಿದ್ದೇವೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗ (ಜ.28): ಭದ್ರಾವತಿಯ VISL MPM ಕಾರ್ಖಾನೆಗಳು ಮುಚ್ಚುವ ಸ್ಥಿತಿಯನ್ನು ತಲುಪಿದ್ದು ಉಳಿಸುವ ಸಲುವಾಗಿ ಪ್ರಯತ್ನ ಮಾಡಿದ್ದೇವೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಹೇಳಿಕೆ ನೀಡಿದ್ದಾರೆ. ವಿಐಎಸ್ಎಲ್ ಕಾರ್ಖಾನೆಯನ್ನು ರಾಜ್ಯ ಸರ್ಕಾರ ಸೈಲ್ ಗೆ ಬರೆದು ಕೊಡ್ಡಿದ್ದು, ಕೇಂದ್ರ ಸರ್ಕಾರದ ಸೈಲ್ ನಡೆಸಿ ನಷ್ಟ ಅನುಭವಿಸಿತು. 2013 ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಖಾಸಗೀಕರಣದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತವಾಯಿತು. ನಮ್ಮ ದುರ್ದೈವ ಮತ್ತು ವಿಷಾಧನೀಯ ಸಂಗತಿ ಮುಚ್ಚುವ ಹಂತಕ್ಕೆ ತಲುಪಿತು. ಖಾಸಗೀಕರಣದ ಪ್ರಕ್ರಿಯೆ ಹಂತವಾಗಿ ಬಿಡ್ ಕರೆದರೂ ಇದುವರೆಗೆ ಯಾರು ಬಂದಿಲ್ಲ. ವಿಐಎಸ್ಎಲ್ ಕಾರ್ಖಾನೆಯ ಕಾರ್ಮಿಕ ರನ್ನು ಜೊತೆಗೂಡಿ ಉಳಿಸುವ ದೃಷ್ಟಿಯಿಂದ ಪ್ರಯತ್ನ ನಡೆಯಿತು. 2018 ರಲ್ಲಿ 28 ಕಂಪನಿಯ85 ಸಾವಿರ ಕೋಟಿ , 2019 ರಲ್ಲಿ 28 ಕಂಪನಿಯಿಂದ 84,000 ಕೋಟಿ , 2020 ರಲ್ಲಿ 18 ಕಂಪೆನಿಯಿಂದ 32 ಸಾವಿರ ಕೋಟಿ ರೂಪಾಯಿ2021 ರಲ್ಲಿ 10 ಕಂಪನಿಯ13.5 ಕೋಟಿ 2022 ರಲ್ಲಿ 8 ಕಂಪನಿಯ 31 ಸಾವಿರ ಕೋಟಿ ಬಂಡವಾಳ ಹಿಂಪಡೆದಿದೆ ಎಂದರು.
ರಾಜ್ಯದ ಕಬ್ಬಿಣ ಮತ್ತು ಉಕ್ಕು ಸ್ಥಾವರ ಉಳಿಸಲು ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ ದೇವೇಗೌಡ
ಕಳೆದ ಎರಡು ವರ್ಷಗಳಲ್ಲಿ ಸೈಲ್ ನಿಂದ ಬಂಡವಾಳ ಹೂಡಿಕೆ ಮಾಡಿಸಿದೆ. ಪ್ರತಿ ವರ್ಷ 80 ಕೋಟಿ ನಷ್ಟ ಅನುಭವಿಸಿತು. ಈಗಲೂ ಕೂಡ ಕಾರ್ಖಾನೆ ಉಳಿಸುವ ಸಲುವಾಗಿ ಪ್ರಯತ್ನ ನಡೆದಿದೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ವೈ ಜೊತೆಗೆ ಕಾರ್ಖಾನೆಯನ್ನು ರಾಜ್ಯ ಸರ್ಕಾರದಿಂದ ನಡೆಸಲು ಅವಕಾಶವನ್ನು ನೀಡಲು ಮಾತುಕತೆ ನಡೆಸಿದ್ದೇವೆ. ಶಾಂತಿಯುತ ಹೋರಾಟ ಮಾಡೋಣ ಎಂದು ಕಾರ್ಮಿಕರಲ್ಲಿ ಸಂಸ ಬಿವೈ ರಾಘವೇಂದ್ರ ವಿನಂತಿ ಮಾಡಿದ್ದಾರೆ.
ದೇವಸ್ಥಾನ, ಕಾರ್ಖಾನೆಗಳು ಯಾವುದೇ ಕಾರಣಕ್ಕೂ ಮುಚ್ಚಬಾರದು: ವಿನಯ್ ಗುರೂಜಿ
ಎಂಪಿಎಂ ಕಾರ್ಖಾನೆಯ ವಸತಿಗೃಹಗಳನ್ನು ಒನ್ ಟೈಮ್ ಸೆಟಲಮೆಂಟ್ ಮಾಡಿ ರಾಜ್ಯ ಸರ್ಕಾರ ಎಸ್ ಬಿಎಂ ಬ್ಯಾಂಕ್ ನಿಂದ ಉಳಿಸಿಕೊಂಡಿದ್ದೇವೆ. ದೇಶ ಮತ್ತು ರಾಜ್ಯ ಸರ್ಕಾರಗಳು ಅಂದು ವಿಐಎಸ್ಎಲ್ ಕಾರ್ಖಾನೆಯನ್ನು ಬಂಡವಾಳ ಹೂಡಿಕೆ ಮಾಡಿ ಉಳಿಸುವ ಪ್ರಯತ್ನ ಮಾಡಿಲ್ಲ. ಮಾಜಿ ಪ್ರಧಾನಿ ದೇವೇಗೌಡ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಐಎಸ್ಎಲ್ ಕಾರ್ಖಾನೆಯನ್ನು ಉಳಿಸಲು ಪತ್ರ ಬರೆದಿದ್ದಾರೆ. ಪಾಲಿಸಿ ಕಾರಣದಿಂದ ವಿಐಎಸ್ಎಲ್ ಕಾರ್ಖಾನೆ ಮುಚ್ಚುತ್ತಿದೆ. ಅದಷ್ಟು ಬೇಗ ಕಾರ್ಖಾನೆ ಖಾಸಗಿ ವ್ಯಕ್ತಿಗಳ ಮೂಲಕ ಪುನರ್ ಆರಂಭಿಸಲಾಗುತ್ತದೆ. ಶಿವಮೊಗ್ಗ ವಿಮಾನ ನಿಲ್ದಾಣ ಫೆ 27 ರಂದು ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಲಾಗುತ್ತದೆ ಎಂದಿದ್ದಾರೆ.