ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಚಿಕ್ಕತ್ತೂರಿನಲ್ಲಿ ಜೆಡಿಎಸ್‍ನ ಪಂಚರತ್ನ ಯಾತ್ರೆ ವಾಹನದ ಚಾಲಕ ಅನುಕುಮಾರ್ ಎಂಬಾತನ ಮೇಲೆ ಅದೇ ಗ್ರಾಮದ ಅನಿಲ್ ಮತ್ತು ದಿಲೀಪ್ ಎಂಬಿಬ್ಬರು ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.28): ಕೊಡಗು ಜಿಲ್ಲೆ ಎಂದರೆ ಶಾಂತಿ ಪ್ರಿಯರು ಎನ್ನುವ ಮಾತಿತ್ತು. ಆದರೆ ರಾಜಕೀಯ ಎನ್ನುವುದು ದ್ವೇಷ ಬೆಳೆಯುವುದಕ್ಕೆ ಕಾರಣವಾಯಿತಾ ಎನ್ನುವ ಸಂಶಯ ದಟ್ಟವಾಗುವಂತೆ ಮಾಡಿದೆ. ವ್ಯಕ್ತಿಯ ಮೇಲೆ ರಾಜಕೀಯ ದ್ವೇಷಕ್ಕೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ. ಹೀಗೆ ತಲೆಗೆ ಹೊಲಿಗೆ ಹಾಕಿಸಿಕೊಂಡು ಬೆಡ್ ಮೇಲೆ ಆಸ್ಪತ್ರೆಯಲ್ಲಿ ಈ ವ್ಯಕ್ತಿ ಮಲಗಿದ್ದರೆ, ಹಲ್ಲೆ ಮಾಡಿದಾತನೂ ಇದೇ ಆಸ್ಪತ್ರೆಯ ಒಂದೇ ವಾರ್ಡಿನಲ್ಲಿ ಎದುರು ಬದುರು ಮಲಗಿದ್ದಾನೆ. ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಚಿಕ್ಕತ್ತೂರಿನಲ್ಲಿ ಜೆಡಿಎಸ್‍ನ ಪಂಚರತ್ನ ಯಾತ್ರೆ ವಾಹನದ ಚಾಲಕ ಅನುಕುಮಾರ್ ಎಂಬಾತನ ಮೇಲೆ ಅದೇ ಗ್ರಾಮದ ಅನಿಲ್ ಮತ್ತು ದಿಲೀಪ್ ಎಂಬಿಬ್ಬರು ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
undefined
ಹಲ್ಲೆಯಲ್ಲಿ ಅನುಕುಮಾರ್ ತಲೆಗೆ ಗಂಭೀರ ಗಾಯವಾಗಿದ್ದು ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಪ್ರತಿಕ್ರಿಯಿಸಿರುವ ಹಲ್ಲೆಗೊಳಗಾದ ಅನುಕುಮಾರ್ ನಾನು ಕಳೆದ ಹತ್ತು ದಿನಗಳಿಂದ ಮುತ್ತಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ ವಾಹನವನ್ನು ಓಡಿಸುತ್ತಿದ್ದೇನೆ. ಹೀಗಾಗಿ ನಿನ್ನೆ ರಾತ್ರಿ ನೀನು ಪಂಚರತ್ನಯಾತ್ರೆಯ ವಾಹನವನ್ನು ಓಡಿಸುತ್ತಾ ನಮ್ಮ ಊರಿನಲ್ಲೆಲ್ಲಾ ಜೆಡಿಎಸ್ ಪ್ರಚಾರ ಮಾಡುತ್ತಿದ್ದೀಯಾ. ನೀವು ಎಷ್ಟೇ ಪ್ರಯತ್ನಿಸಿದರು ಜೆಡಿಎಸ್ ಗೆಲ್ಲುವುದಿಲ್ಲ. ಬಿಜೆಪಿಯೇ ಗೆಲ್ಲುತ್ತದೆ ಎಂದು ಹಲ್ಲೆ ಮಾಡಿದರು ಎಂದು ಆರೋಪಿಸಿದ್ದಾರೆ.
ಅನುಕುಮಾರ್ ತಲೆಗೆ ಗಂಭೀರ ಗಾಯವಾಗಿದ್ದು, ತಲೆಗೆ ಮೂರು ಹೊಲಿಗೆ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಹಲ್ಲೆ ಮಾಡಿರುವ ವ್ಯಕ್ತಿ ಮಾತ್ರ ಸುಮ್ಮನೇ ಕುಳಿದ್ದ ನನ್ನ ಮೇಲೆ ಅನುಕುಮಾರ್ ಮತ್ತು ಸ್ನೇಹಿತರು ಬಂದು ವಿನಾಕಾರಣ ಏಕಾಏಕಿ ಹಲ್ಲೆ ಮಾಡಿದರು. ಇದರಿಂದ ನಾನು ಕೂಡ ಅಲ್ಲೆ ಮಾಡಬೇಕಾಯಿತು. ಆದರೆ ನಾನು ಬಾಟಲಿಯಿಂದ ಹಲ್ಲೆ ಮಾಡಿಲ್ಲ. ಗಲಾಟೆಯ ಸಂದರ್ಭದಲ್ಲಿ ಯಾರೋ ಅವರಿಗೆ ಹಲ್ಲೆ ಮಾಡಿರಬಹುದು. ನಾನು ಕೂಡ ಜೆಡಿಎಸ್ ಕಾರ್ಯಕರ್ತನೇ ಆಗಿದ್ದೇನೆ. ನನ್ನ ಮೇಲೆ ಹಲ್ಲೆ ಮಾಡಿರುವುದಕ್ಕೆ ನಾನೂ ಕೂಡ ದೂರು ನೀಡಿದ್ದೇನೆ ಎಂದು ಅನಿಲ್ ಹೇಳಿದ್ದಾನೆ.
Kodagu: ಊರ ಹೆಬ್ಬಾಗಿಲಲ್ಲೇ ಗಬ್ಬೆದ್ದು ನಾರುವ ಕಸ, 15 ದಿನಗಳಲ್ಲಿ ಘಟಕ ಬಳಕೆ ಮಾಡುವುದಾಗಿ ಸಿಇಒ ಭರವಸೆ
ಅನುಕುಮಾರ್ ಮೇಲೆ ನಡೆದಿರುವ ಹಲ್ಲೆಗೆ ಪ್ರತಿಕ್ರಿಯಿಸಿರುವ ಮಡಿಕೇರಿ ಕ್ಷೇತ್ರದ ಸಂಭನೀಯ ಜೆಡಿಎಸ್ ಅಭ್ಯರ್ಥಿ ಮುತ್ತಪ್ಪ ಹಲವು ದಿನಗಳಿಂದ ಜೆಲ್ಲೆಯಲ್ಲಿ ಜೆಡಿಎಸ್ ಪಂಚರತ್ನಯಾತ್ರೆ ನಡೆಸುತ್ತಿದ್ದೇವೆ. ಇದೇ ತಿಂಗಳ 24 ರಂದು ಸೋಮವಾರಪೇಟೆಯಲ್ಲಿ ನಡೆದ ಸಭೆಯಲ್ಲಿ ಶಾಸಕರ ವಿರುದ್ಧ ಮಾತನಾಡಿದ್ದೆ. ಹೀಗಾಗಿ ನಿನ್ನೆ ಶಾಸಕ ಅಪ್ಪಚ್ಚು ರಂಜನ್ ನನಗೆ ಕರೆ ಮಾಡಿ ಧಮ್ಕಿ ಹಾಕಿದ್ದರು, ಅದರ ಬೆನ್ನಲ್ಲೇ ನಿನ್ನೆ ರಾತ್ರಿಯೇ ಅನಿಲ್ ಮೇಲೆ ಹಲ್ಲೆ ಮಾಡಲಾಗಿದೆ. ಇದು ಪ್ರಜಾಪ್ರಭುತ್ವ, ಯಾರೇ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ. ಆದರೆ ಶಾಸಕರು ಹಿಟ್ಲರ್ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
Kodagu: ಫೆ.3ರಿಂದ 6ರವರೆಗೆ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ: ಗಾಂಧಿ ಮೈದಾನದಲ್ಲಿ ವೈನ್ ಮೇಳ
ಹಲ್ಲೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಸಕ ಅಪ್ಪಚ್ಚು ರಂಜನ್, ತೋಳ್ಬಲ ಅಥವಾ ಬುಲೆಟ್ ಮೂಲಕ ಉತ್ತರಿಸುವ ಬದಲು ವಿವಿ ಪ್ಯಾಟ್, ವೋಟ್ ಮೂಲಕ ಉತ್ತರ ನೀಡೋಣ ಎಂದು ಸೂಚಿಸಿದ್ದೇವೆ. ಹಾಗೇನಾದರೂ ನಮ್ಮವರು ಯಾರಾದರು ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಅಲ್ಲದೆ ಯಾರೇ ಆದರೂ ಒಬ್ಬರನ್ನು ವೈಯಕ್ತಿಕವಾಗಿ ನಿಂದಿಸುವುದನ್ನು ಮಾಡಬಾರದು ಎಂದು ಶಾಸಕ ರಂಜನ್ ಹೇಳಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಚುನಾವಣೆ ಎಂದರೆ ಯಾವುದೇ ದ್ವೇಷ, ಅಸೂಯೆ ಇಲ್ಲದೆ ನಡೆಯುತಿತ್ತು. ಆದರೆ ಈಗ ನಡೆದಿರುವ ಹಲ್ಲೆ ರಾಜಕೀಯ ದ್ವೇಷಕ್ಕಾಗಿ ಎನ್ನಲಾಗುತ್ತಿದ್ದು, ಚುನಾವಣೆ ಸಂದರ್ಭಕ್ಕೆ ಇನ್ನು ಯಾವ ಸ್ಥಿತಿಗೆ ತಲುಪುತ್ತದೆಯೋ ಕಾದು ನೋಡಬೇಕಾಗಿದೆ.