ನಮ್ಮ ಮೆಟ್ರೋ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್

By Web DeskFirst Published Oct 17, 2018, 5:46 PM IST
Highlights

ಈ ಮೊದಲು ಪ್ರಯಾಣಿಕರು ಮೆಟ್ರೋ ಹಾಗೂ ರೈಲ್ವೆ ನಿಲ್ದಾಣಕ್ಕೆ ತೆರಳಲು ರಸ್ತೆ ಇಲ್ಲವೆ ಸುರಂಗ ಮಾರ್ಗದ ಮೂಲಕ ತೆರಳಬೇಕಾಗಿತ್ತು. ಹೊಸಬರಿಗೆ ಸುರಂಗ ಮಾರ್ಗದ ದಾರಿ ತಿಳಿಯದ ಕಾರಣ ರಸ್ತೆ ದಾಟಿ  ಹೋಗಬೇಕಿತ್ತು. ಈ ಮಾರ್ಗಗಳಲ್ಲಿ ವಿಪರೀತ ಸಂಚಾರ  ದಟ್ಟಣೆಯಿದ್ದ ಕಾರಣ ಜನರು ತೊಂದರೆ ಅನುಭವಿಸುತ್ತಿದ್ದರು. 

ಬೆಂಗಳೂರು[ಅ.17]: ಮೆಜಸ್ಟಿಕ್ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಬೆಂಗಳೂರು ಮೆಟ್ರೋ ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ. 

ಮೊಟ್ರೋ ಹಾಗೂ ರೈಲ್ವೆ ನಿಲ್ದಾಣಕ್ಕೆ ಸಾರ್ವಜನಿಕರು ಕ್ರಮಿಸಲು ಶೀಘ್ರದಲ್ಲೇ ಪಾದಚಾರಿಗಳ ಮೇಲ್ಸೇತುವೆ ನಿರ್ಮಿಸಲಾಗುತ್ತಿದ್ದು ಸುರಂಗ ಮಾರ್ಗ ತಿಳಿಯದೆ ರಸ್ತೆ ದಾಟುತ್ತ ಪರದಾಡುತ್ತಿದ್ದವರು ಇನ್ನು ಮುಂದೆ  ಯಾವುದೇ ತೊಂದೆರೆಯಿಲ್ಲದೆ ಮೇಲ್ಸೇತುವೆ ಮೂಲಕ ಹೋಗಬಹುದಾಗಿದೆ.

ಈ ಮೊದಲು ಪ್ರಯಾಣಿಕರು ಮೆಟ್ರೋ ಹಾಗೂ ರೈಲ್ವೆ ನಿಲ್ದಾಣಕ್ಕೆ ತೆರಳಲು ರಸ್ತೆ ಇಲ್ಲವೆ ಸುರಂಗ ಮಾರ್ಗದ ಮೂಲಕ ತೆರಳಬೇಕಾಗಿತ್ತು. ಹೊಸಬರಿಗೆ ಸುರಂಗ ಮಾರ್ಗದ ದಾರಿ ತಿಳಿಯದ ಕಾರಣ ರಸ್ತೆ ದಾಟಿ  ಹೋಗಬೇಕಿತ್ತು. ಈ ಮಾರ್ಗಗಳಲ್ಲಿ ವಿಪರೀತ ಸಂಚಾರ  ದಟ್ಟಣೆಯಿದ್ದ ಕಾರಣ ಜನರು ತೊಂದರೆ ಅನುಭವಿಸುತ್ತಿದ್ದರು. 

ಮೆಜೆಸ್ಟಿಕ್, ಚಿಕ್ಕಪೇಟೆ ಮೆಟ್ರೊ ಬೋರ್ಡ್'ಗಳಿಂದ ಹಿಂದಿಯನ್ನು ಅಳಿಸಿ ಹಾಕಿದ ಬಿಎಂಆರ್'ಸಿಎಲ್

ಪಾದಚಾರಿಗಳ ಮೇಲ್ಸೇತುವೆಯನ್ನು ಮೆಜಸ್ಟಿಕ್ ರೈಲ್ವೆ ನಿಲ್ದಾಣದ 10ನೇ ಪ್ಲಾಟ್ ಫಾಂ ನಿಂದ ನೇರಳೆ ಬಣ್ಣದ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ. 1.9 ಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು ಇನ್ನು ಒಂದು ತಿಂಗಳಲ್ಲಿ ನಿರ್ಮಾಣವಾಗಲಿದೆ. ನಿತ್ಯ ಅಂದಾಜು 2 ಲಕ್ಷ ಪ್ರಯಾಣಿಕರು ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ತೆರಳುತ್ತಾರೆ.

ಮೆಟ್ರೋ ಪ್ರಯಾಣಿಕರಿಗೆ ತುರ್ತು ಚಿಕಿತ್ಸೆ ವ್ಯವಸ್ಥೆಗಾಗಿ ಆ್ಯಂಬುಲೆನ್ಸ್

click me!