ಹುಬ್ಬಳ್ಳಿ : ವಾಹನ ಸವಾರರಿಗೆ ಇಲ್ಲಿದೆ ಗುಡ್ ನ್ಯೂಸ್ ?

Kannadaprabha News   | Asianet News
Published : Sep 01, 2020, 08:49 AM IST
ಹುಬ್ಬಳ್ಳಿ : ವಾಹನ ಸವಾರರಿಗೆ ಇಲ್ಲಿದೆ ಗುಡ್ ನ್ಯೂಸ್   ?

ಸಾರಾಂಶ

ಹುಬ್ಬಳ್ಳಿ ಜನತೆಗೆ ಇಲ್ಲಿದೆ ಗುಡ್ ನ್ಯೂಸ್. ವಾಹನ ಸವಾರರಿಗೆ ಇನ್ನುಮುಂದೆ ಕೊಂಚ ತಲೆ ಬಿಸಿ ಕಡಿಮೆಯಾಗಲಿದೆ. ವಾಹನ ಸವಾರರು ನೆಮ್ಮದಿಯಿಂದ ಸಂಚಾರ ಮಾಡಬಹುದಾಗಿದೆ.

ಹುಬ್ಬಳ್ಳಿ(ಸೆ.01):  ಅತ್ಯಂತ ಟ್ರಾಫಿಕ್‌ ಸಮಸ್ಯೆಯಿರುವ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಫ್ಲೈಓವರ್‌ (ಮೇಲು ಸೇತುವೆ) ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸೋಮವಾರ ಹಸಿರು ನಿಶಾನೆ ತೋರಿಸಿದ್ದು ಇಲ್ಲಿನ ಜನತೆಯ ಬಹುವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಎರಡು ಹಂತದ ಯೋಜನೆ ಇದಾಗಿದ್ದು ಸದ್ಯ ಮೊದಲ ಹಂತದ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು ಅಂದಿದೆ. 2ನೇ ಹಂತದ ಯೋಜನೆ ರಾಜ್ಯದ ನಗರಾಭಿವೃದ್ಧಿ ಇಲಾಖೆ ಕೈಗೆತ್ತಿಕೊಳ್ಳಲಿದೆ.

ಈ ಮೊದಲು ಇಲ್ಲಿ ಒಂದೇ ಹಂತದ ಫ್ಲೈಓವರ್‌ ನಿರ್ಮಾಣಕ್ಕಾಗಿ .900 ಕೋಟಿ ಯೋಜನೆ ಸಿದ್ಧಪಡಿಸಲಾಗಿತ್ತು. ಆದರಿದು ದೊಡ್ಡ ಮೊತ್ತದ ಯೋಜನೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹಿಂದೇಟು ಹಾಕಿದ್ದರು. ಇದೀಗ ಗಡ್ಕರಿಯವರ ಸಲಹೆಯಂತೆ 2 ಹಂತದ ಯೋಜನೆ ಸಿದ್ಧಪಡಿಸಲಾಗಿದೆ.

ತಾತ್ಕಾಲಿಕ ಶೆಡ್‌ನಲ್ಲಿ ವರ್ಷ ಕಳೆದ ಸಂತ್ರಸ್ತರು: ಮದುವೆ, ಹೆರಿಗೆ, ಕಾಯಿಲೆ ಬಿದ್ದರೆ ಶುಶ್ರೂಷೆ ಎಲ್ಲವೂ ಇಲ್ಲೇ..!

ಒಂದು ಹಂತದ .300 ಕೋಟಿ ಯೋಜನೆಗೆ ಕೇಂದ್ರ ಸಾರಿಗೆ ಸಚಿವಾಲಯ ಇದೀಗ ಹಸಿರು ನಿಶಾನೆ ತೋರಿಸಿದೆ. ಈ ಪ್ರಕಾರ 3.9 ಕಿಲೋ ಮೀಟರ್‌ ಉದ್ದದ ಫ್ಲೈಓವರ್‌ ಚೆನ್ನಮ್ಮ ಸರ್ಕಲ್‌ ಸುತ್ತುವರಿಯುತ್ತದೆ. ಇದಕ್ಕಾಗಿ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಿದ್ದು, ಶೀಘ್ರವೇ ಮುಗಿದು ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಕೊರೋನಾ ಭೀತಿಯ ಮಧ್ಯೆ ಅಂತಾರಾಜ್ಯ ಬಸ್‌ ಸಂಚಾರ ಶೀಘ್ರ ಆರಂಭ.

ಎರಡನೆಯ ಹಂತದ ಕಾಮಗಾರಿ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಕೈಗೆತ್ತಿಕೊಳ್ಳಬೇಕಿದ್ದು ಈ ಹಂತದಲ್ಲಿ ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್‌ನಿಂದ ಬೆಂಗಳೂರಿಗೆ ಹೋಗುವ ಹೆದ್ದಾರಿ ಹಾಗೂ ಧಾರವಾಡದ ಜ್ಯುಬಲಿ ಸರ್ಕಲ್‌ ಸೇರಲಿವೆ.

  31ಎಚ್‌ಯುಬಿ5: ಫ್ಲೈಓವರ್‌ನ ನೀಲನಕ್ಷೆ

31ಎಚ್‌ಯುಬಿ6,6ಎ,6ಬಿ: ಸದ್ಯ ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್‌

31ಎಚ್‌ಯುಬಿ7: ಪ್ರಹ್ಲಾದ ಜೋಶಿ

31ಎಚ್‌ಯುಬಿ8: ಜಗದೀಶ ಶೆಟ್ಟರ್‌

PREV
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!