ಮೃತ ತಲಕಾವೇರಿ ಅರ್ಚಕರ ವಿರುದ್ಧ ಗಂಭೀರ ಆರೋಪ : ಕುಟುಂಬ ಹೇಳೋದೆ ಬೇರೆ

By Kannadaprabha News  |  First Published Sep 1, 2020, 7:37 AM IST

ತಲಕಾವೇರಿಯಲ್ಲಿ ಮೃತಪಟ್ಟ ಅರ್ಚಕರ ಕುಟುಂಬದ ವಿರುದ್ಧ ಒಂದೊಂದೇ ಆರೋಪಗಳು ಕೇಳಿ ಬರುತ್ತಿವೆ. ಆದರೆ ಈ ಆರೋಪದ ಬಗ್ಗೆ ಅವರ ಕುಟುಂಬಸ್ಥರು ಹೇಳೋದೇ ಬೇರೆ..


ಮಡಿಕೇರಿ (ಸೆ.01) : ಕೊಡಗಿನ ತಲಕಾವೇರಿ ಬಳಿಯ ಗಜಗಿರಿ ಗುಡ್ಡ ಕುಸಿದು ಮೃತಪಟ್ಟ ಅರ್ಚಕ ನಾರಾಯಣಾಚಾರ್‌ ಚಾರಿತ್ರ್ಯಹರಣ ಮಾಡಲಾಗಿದ್ದು, ಪ್ರಧಾನ ಅರ್ಚಕರ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಆಚಾರ್‌ ಕುಟುಂಬದ ವಕ್ತಾರ ಜಯಪ್ರಕಾಶ್‌ ರಾವ್‌ ಸ್ಪಷ್ಟಪಡಿಸಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 300 ವರ್ಷಗಳಿಂದ ತಲಕಾವೇರಿಯಲ್ಲಿ ಪೂಜಾ ಕೈಂಕರ್ಯ ನಡೆಸುತ್ತಿರುವ ನಾರಾಯಣಾಚಾರ್ಯ ಅವರ ಕುಟುಂಬಸ್ಥರಿಗೆ ಆಗಿನ ಲಿಂಗರಾಗ ಅರಸರು ತಲಕಾವೇರಿ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಜಮ್ಮಾ, ಉಂಬಳಿಯಾಗಿ ನೂರಾರು ಎಕರೆ ಜಾಗವನ್ನು ನೀಡಿದ್ದಾರೆ. 

Tap to resize

Latest Videos

ತಲ​ಕಾ​ವೇರಿ ಅರ್ಚಕರ ಪುತ್ರಿಯರು ಮತಾಂತರ, ಬದಲಾದ ಹೆಸರು:​ ಚೆಕ್‌ ವಾಪ​ಸ್‌

ಆದರೂ ಅವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪ ಹೊರಿಸಲಾಗಿದೆ ಎಂದರು. ಇನ್ನು ಅಮ್ಮಕೊಡವರು ಇತಿಹಾಸ ಸೃಷ್ಟಿಸಿಕೊಂಡು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಲು ಹಕ್ಕು ಪ್ರಸ್ತಾಪಿಸಿದ್ದಾರೆ. 
ಅವರ ಬಳಿ ಇರುವ ದಾಖಲೆಗಳನ್ನು ಅವರು ನೀಡಲಿ, ನಮ್ಮ ಬಳಿ ಇರುವ ದಾಖಲೆಯನ್ನು ನಾವು ನೀಡುತ್ತೇವೆ. ಈ ವಿಚಾರದಲ್ಲೂ ನ್ಯಾಯ ತೀರ್ಮಾನಕ್ಕೆ ಸಿದ್ಧರಿದ್ದೇವೆ ಎಂದು ಜಯಪ್ರಕಾಶ್‌ರಾವ್‌ ಹೇಳಿದರು.

"

click me!