Kodagu: ಫೆ.3ರಿಂದ 6ರವರೆಗೆ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ: ಗಾಂಧಿ ಮೈದಾನದಲ್ಲಿ ವೈನ್ ಮೇಳ

By Govindaraj S  |  First Published Jan 27, 2023, 9:46 PM IST

ಕೊಡಗಿನ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕಾಗಿ ಕೊಡಗು ಜಿಲ್ಲಾಡಳಿತ ಮತ್ತೊಂದು ಹೊಸ ಯೋಜನೆ ರೂಪಿಸಿದೆ. ಫೆಬ್ರವರಿ 3 ರಿಂದ 6 ರವರೆಗೆ ಜಿಲ್ಲಾಕೇಂದ್ರ ಮಡಿಕೇರಿಯ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ಪಕ್ಕದಲ್ಲಿಯೇ ಇರುವ ಗಾಂಧಿ ಮೈದಾನದಲ್ಲಿ ವೈನ್ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. 


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜ.27): ಕೊಡಗಿನ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕಾಗಿ ಕೊಡಗು ಜಿಲ್ಲಾಡಳಿತ ಮತ್ತೊಂದು ಹೊಸ ಯೋಜನೆ ರೂಪಿಸಿದೆ. ಫೆಬ್ರವರಿ 3 ರಿಂದ 6 ರವರೆಗೆ ಜಿಲ್ಲಾಕೇಂದ್ರ ಮಡಿಕೇರಿಯ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ಪಕ್ಕದಲ್ಲಿಯೇ ಇರುವ ಗಾಂಧಿ ಮೈದಾನದಲ್ಲಿ ವೈನ್ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ ಬಿ ಸಿ ಸತೀಶ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಸಂದರ್ಭ ನಾಲ್ಕು ವಿಭಾಗದಲ್ಲಿ ಫಲಪುಷ್ಪ ಪ್ರದರ್ಶನ ಇರಲಿದೆ. 

Tap to resize

Latest Videos

undefined

ಒಂದೆಡೆ ಕೊಡಗಿನ ನಾಲ್ಕುನಾಡು ಅರಮನೆಯ ಮಾದರಿ ಇದ್ದರೆ, ಮತ್ತೊಂದೆಡೆ ಕೊಡಗಿನ ಸಿಬಲ್ ಆಗಿರುವ ಕಾಫಿ ಕೆಟಲ್ ಇರಲಿದೆ. ಹಾಗೆಯೇ ಚುನಾವಣೆ ಹತ್ತಿರ ಇರುವುದರಿಂದ ಮತದಾನ ಜಾಗೃತಿಗಾಗಿ ವಿವಿ ಪ್ಯಾಟ್ ಸೇರಿದಂತೆ ಚುನಾವಣಾ ಜಾಗೃತಿಗೆ ಸಂಬಂಧಿಸಿದಂತೆಯೂ ಮಾದರಿಗಳನ್ನು ಮಾಡಲಾಗುವುದು. ಜೊತೆಗೆ ಪುಟಾಣಿಗಳ ಆಕರ್ಷಣೆಗಾಗಿ ಕಾರ್ಟೂನ್ಸ್ ಮಾದರಿಗಳ ಪುಷ್ಪ ಪ್ರದರ್ಶನ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ರಾಜ್ಯ ವೈನ್ಸ್ ಕಾರ್ಪೋರೇಷನ್ ನಿಂದ ಗಾಂಧಿ ಮೈದಾನದಲ್ಲಿ ವೈನ್ ಮೇಳ ನಡೆಯಲಿದೆ. ವೈನ್ ಕಾರ್ಪೋರೇಷನ್ ಅವರ 11 ಮಳಿಗೆಗಳು ಬೆಂಗಳೂರಿನಿಂದಲೇ ಬರಲಿವೆ. 

10 ಸಾವಿರ ಕೋಟಿ ಲೂಟಿ ಮಾಡಲು ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ಗೆಲ್ಲಬೇಕಿದೆ: ಅಣ್ಣಾಮಲೈ ಆರೋಪ

ಜೊತೆಗೆ ಆಹಾರ ಗುಣಮಟ್ಟ ಇಲಾಖೆಯಿಂದ ಅನುಮೋದಿತ ಸ್ಥಳೀಯ ವೈನ್ ಮಳಿಗೆಗಳು ಇರಲಿವೆ. ಕಡಿಮೆ ಬೆಲೆಯಲ್ಲಿ ವೈನ್ ಗಳು ದೊರೆಯಲಿವೆ. ಮಳಿಗೆ ಹಾಕುವವರಿಗೂ 3 ರಿಂದ ಸಾವಿರ ಅಷ್ಟೇ ಶುಲ್ಕವಿದ್ದು ಆಸಕ್ತರು ಮಳಿಗೆ ಹಾಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಮಾಹಿತಿ ನೀಡಿದ್ದಾರೆ. ಜೊತೆಗೆ ಮಕ್ಕಳಿಗೆ ಮನರಂಜನೆ ನೀಡುವಂತಹ ಪೋಟೋ ಪ್ರೇಮ್ ಸೆಲ್ಪಿ ಜೋನ್ ಮಾದರಿಯನ್ನು ಹೂವಿನಲ್ಲಿ ನಿರ್ಮಾಣ ಮಾಡಲಾಗುತ್ತದೆ. ಮಕ್ಕಳಿಗೆ ಮನರಂಜನೆ ನೀಡುವಂತಹ ಸ್ಪೈಡರ್ ಮ್ಯಾನ್ ಮತ್ತಿತರ ಸೆಲ್ಪಿ ಜೋನ್ ಮಾದರಿಗಳನ್ನು ಎಲೆಗಳಿಂದ ತಯಾರಿಸುವ ಪುಷ್ಪ ಪ್ರದರ್ಶನ ಇರಲಿದೆ ಎಂದರು. 

ವಿವಿಧ ಗಣ್ಯರ ಕಲಾಕೃತಿಯನ್ನು ತರಕಾರಿ ಮತ್ತು ಹಣ್ಣುಗಳಲ್ಲಿ ಕೆತ್ತನೆ ಮಾಡಲಾಗುವುದು. ವಿವಿಧ ಅಲಂಕಾರಿಕ ಗಿಡಗಳಾದ ಬೊನ್ಸಾಯ್ ಗಿಡಗಳ ಪ್ರದರ್ಶನ ಇಕೆಬಾನೆ ಹೂವಿನ ಜೋಡನೆ, ಆಂಥೋರಿಯಂ ಪ್ರದರ್ಶನ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. ನಗರದ ಗಾಂಧಿ ಮೈದಾನದಲ್ಲಿ ಈಗಾಗಲೇ 60 ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಕೈಗಾರಿಕಾ ವಾಣಿಜ್ಯ ಇಲಾಖೆ ಹಾಗೂ ಇತರೆ 20 ಇತರೆ ಇಲಾಖೆಗಳಿಗೆ ಮಳಿಗೆ ಕಾಯ್ದಿರಿಸಲಾಗಿದೆ. ಹಾಗೆಯೇ 40 ಮಳಿಗೆಯಲ್ಲಿ ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಯಂತ್ರೋಪಕರಣಗಳ ಮಾರಾಟ ಮಳಿಗೆ ತೆರೆಯಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು. 

ರೈತರು ಬೆಳೆದಿರುವ ವಿಶಿಷ್ಟವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಾಂಬಾರ ಬೆಳೆಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಅತ್ಯುತ್ತಮ ಪ್ರದರ್ಶನಕ್ಕೆ ಬಹುಮಾನ ನೀಡಲಾಗುವುದು. ಆ ನಿಟ್ಟಿನಲ್ಲಿ ಫೆಬ್ರವರಿ, 03 ರಂದು ಬೆಳಗ್ಗೆ 10 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಪ್ರದರ್ಶಿಕೆಗಳನ್ನು ತಂದು ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು. ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಸಿ.ಎಂ.ಪ್ರಮೋದ್ ಅವರು ಮಾಹಿತಿ ನೀಡಿ ತೋಟಗಾರಿಕೆಯಲ್ಲಿ ಆಸಕ್ತಿಯಿರುವ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಒಣಹೂ ಜೋಡಣೆ, ಬಿಡಿಹೂಗಳ ಜೋಡಣೆ, ಇಕೆಬಾನೆ, ರಂಗೋಲಿ ಸ್ಪರ್ಧೆಗಳನ್ನು ರಾಜಾಸೀಟಿನ ಒಳಭಾಗದಲ್ಲಿ ಆಯೋಜಿಸಲಾಗುವುದು. 

ಸಿ.ಟಿ.ರವಿಗೆ ಜೆಡಿಎಸ್ ಟಿಕೆಟ್ ಆಫರ್ ಕೊಟ್ಟ ಬಂಡೆಪ್ಪ ಖಾಶೆಂಪೂರ್

ಆಸಕ್ತರು ಫೆಬ್ರವರಿ, 03 ರಂದು ಬೆಳಗ್ಗೆ 10 ಗಂಟೆಗೆ ರಾಜಾಸೀಟು ಉದ್ಯಾನವನದಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕೋರಿದರು. ಕರ್ನಾಟಕ ದ್ರಾಕ್ಷಿರಸ ಮಂಡಳಿ, ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಗಾಂಧಿ ಮೈದಾನದಲ್ಲಿ ‘ವೈನ್ ಉತ್ಸವ’ವನ್ನು ಆಯೋಜಿಸಲಾಗುತ್ತದೆ. ಇದರ ಪ್ರಯುಕ್ತ ಗಾಂಧಿ ಮೈದಾನದಲ್ಲಿ ಸ್ಥಳೀಯ ಹೋಮ್ ಮೇಡ್ ವೈನ್/ ಜ್ಯೂಸ್ ಹಾಗೂ ವೈನ್ ಬೋರ್ಡ್ ವತಿಯಿಂದ ಬ್ರಾಂಡೆಡ್ ವೈನ್‍ಗಳ ಪ್ರದರ್ಶನ ಹಾಗೂ ಮಾರಾಟ, ಪರೀಕ್ಷೆ ಮತ್ತು ರುಚಿ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಆಯೋಜಿಸಲಾಗಿದೆ. ಈ ಬಾರಿ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಪ್ರತಿ ದಿನ 15 ಸಾವಿರ ಹೆಚ್ಚು ಜನರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಪ್ರಮೋದ್ ಅವರು ತಿಳಿಸಿದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮುತ್ತಪ್ಪ ಇದ್ದರು.

click me!