Yadgir: ಬಾಬಾ ಕನಸಿನಲ್ಲಿ ಬಂದಿದ್ದಕ್ಕೆ ಭವ್ಯ ಸಾಯಿ ಮಂದಿರ ನಿರ್ಮಿಸಿದ ಉದ್ಯಮಿ ಮಹಾರಾಜ್ ದಿಗ್ಗಿ

By Govindaraj SFirst Published Jan 27, 2023, 9:22 PM IST
Highlights

ಆತ ಒಬ್ಬ ಯುವ ಉದ್ಯಮಿ. ಕಷ್ಟಪಟ್ಟು ಹಗಲಿರುಳು ದುಡಿದು ಒಬ್ಬ ಯಶಸ್ವಿ ಉದ್ಯಮಿದಾರನಾಗಿದ್ದಾನೆ. ಆತನಿಗೆ ಕಳೆದ ಕೆಲ ವರ್ಷಗಳ ಹಿಂದೆ ಸಾಯಿ ಬಾಬಾ ಕನಸಿನಲ್ಲಿ ಬಂದಿದ್ರಂತೆ. ಈ ಕಾರಣಕ್ಕೆ ಇವತ್ತು ಉದ್ಯಮಿ ಮಹಾರಾಜ ದಿಗ್ಗಿಯವರು ತಮ್ಮ ಸ್ವಂತ ಊರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಇಬ್ರಾಹಿಂಪುರದಲ್ಲಿ ಭವ್ಯವಾದ ಸಾಯಿ ಬಾಬಾ ಮಂದಿರ ನಿರ್ಮಾಣ ಮಾಡಿದ್ದಾರೆ.

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ

ಯಾದಗಿರಿ (ಜ.27): ಆತ ಒಬ್ಬ ಯುವ ಉದ್ಯಮಿ. ಕಷ್ಟಪಟ್ಟು ಹಗಲಿರುಳು ದುಡಿದು ಒಬ್ಬ ಯಶಸ್ವಿ ಉದ್ಯಮಿದಾರನಾಗಿದ್ದಾನೆ. ಆತನಿಗೆ ಕಳೆದ ಕೆಲ ವರ್ಷಗಳ ಹಿಂದೆ ಸಾಯಿ ಬಾಬಾ ಕನಸಿನಲ್ಲಿ ಬಂದಿದ್ರಂತೆ. ಈ ಕಾರಣಕ್ಕೆ ಇವತ್ತು ಉದ್ಯಮಿ ಮಹಾರಾಜ ದಿಗ್ಗಿಯವರು ತಮ್ಮ ಸ್ವಂತ ಊರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಇಬ್ರಾಹಿಂಪುರದಲ್ಲಿ ಭವ್ಯವಾದ ಸಾಯಿ ಬಾಬಾ ಮಂದಿರ ನಿರ್ಮಾಣ ಮಾಡಿದ್ದಾರೆ. ಬಾಬಾ ಆಶೀರ್ವಾದದಿಂದ ಸಾಕಷ್ಟು ಅಭಿವೃದ್ಧಿಯಾಗಿದ್ದರಿಂದ ಬಾಬರ ಮಂದಿರವನ್ನ ನಿರ್ಮಾಣ ಮಾಡಿದ್ದಾರೆ. ಬಾಬರ ಮಂದಿರವನ್ನು ಇವತ್ತು ಲೋಕಾರ್ಪಣೆ ಮಾಡಲಾಗಿದೆ. ಇದರ ಜೊತೆಗೆ ಈ ಸಂದರ್ಭದಲ್ಲಿ 51 ಜೋಡಿಗಳಿಗೆ ಮದುವೆ ಮಾಡಿಸಿದ್ದಾರೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ನಡೆಸಿದ್ದಾರೆ.

Latest Videos

ಯಾದಗಿರಿಯ ಇಬ್ರಾಹಿಂಪುರದಲ್ಲಿ ಭವ್ಯ ಸಾಯಿ ಮಂದಿರ: ಭಾರತ ದೇಶ ಒಂದು ಅಪಾರ ಭಕ್ತಿ-ಭಾವ ಹೊಂದಿರುವ ದೇಶ. ಇಲ್ಲಿ ಭಕ್ತನ ಭಕ್ತಿಗೆ ಆ ದೇವರೇ ಶಕ್ತಿ. ಇಂತಹ ಶಕ್ತಿ ಪುರುಷ ಸಾಯಿ ಬಾಬಾ ಭವ್ಯ ಮಂದಿರ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಇಬ್ರಾಹಿಮಪುರ ಗ್ರಾಮದಲ್ಲಿ ನಿರ್ಮಾಣವಾಗಿದ್ದು. ಈ  ಭವ್ಯವಾದ ಸಾಯಿಬಾಬಾ ಮಂದಿರವನ್ನ ನಿರ್ಮಾಣ ಮಾಡಲಾಗಿದೆ. ದೇವಸ್ಥಾನವನ್ನ ನಿರ್ಮಾಣ ಮಾಡಲು ಒಂದು ಬಲವಾದ ಕಾರಣವಿದೆ. ಕೆಲ ವರ್ಷಗಳ ಹಿಂದೆ ಇಬ್ರಾಹಿಂಪುರ ಗ್ರಾಮದ ಮಹಾರಾಜ್ ದಿಗ್ಗಿ ಎಂಬುವವರ ಕನಸಲ್ಲಿ ಸಾಯಿ ಬಾಬ ಬಂದಿದ್ರಂತೆ. ಇದೇ ಕಾರಣಕ್ಕೆ ಗ್ರಾಮದಲ್ಲಿ ಮುಂದೊಂದು ದಿನ ಭವ್ಯವಾದ ಮಂದಿರವನ್ನ ನಿರ್ಮಾಣ ಮಾಡಬೇಕು ಅಂತ ಮಹಾರಾಜ್ ದಿಗ್ಗಿ ಕನಸು ಕಂಡಿದ್ರು. ಹೀಗಾಗಿ ಇವತ್ತು 9 ವರ್ಷಗಳ ಬಳಿಕ ದೇವಸ್ಥಾನವನ್ನ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದೆ. ಒಂದುವರೆ ಕೋಟಿಗೂ ಅಧಿಕ ಹಣವನ್ನ ಖರ್ಚು ಮಾಡಿ ದೇವಸ್ಥಾನವನ್ನ ನಿರ್ಮಾಣ ಮಾಡಲಾಗಿದೆ. ಇದೆ ದೇವಸ್ಥಾನವನ್ನ ಇವತ್ತು ಲೋಕಾರ್ಪಣೆಯನ್ನ ಮಾಡಲಾಗಿದೆ. 

ಮೂರು ಕೋಟಿ ಶಿವಲಿಂಗ ಸ್ಥಾಪನೆಯ ಸಂಕಲ್ಪ: 1 ಗಂಟೆ ಓಂ ನಮಃ ಶಿವಾಯ ಮಂತ್ರ ಪಠಣೆ

51 ಜೋಡಿಗಳ ಸಾಮೂಹಿಕ ವಿವಾಹ ಮಾಡಿದ ದಿಗ್ಗಿ: ಒಂದು ಮದುವೆ ಮಾಡೋದು ಈಗಿನ ಕಾಲದಲ್ಲಿ ತಮಾಷೆಯ ಮಾತಲ್ಲ. ಲಕ್ಷ ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ. ಅಂತಹ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು, ಬಡವರು ಸಾಲ ಮಾಡಿ ಕಣ್ಣೀರಲ್ಲಿ ಕೈ ತೊಳೆಯಬಾರದು ಎಂದು ತನ್ನ ಸ್ಚಂತ ಖರ್ಚಿನಲ್ಲಿ ಮದುವೆ ಮಾಡಿಸಿದ್ದಾನೆ. ಇದರಿಂದ ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಆಗ್ಲಿ ಎನ್ನುವ ಉದ್ದೇಶದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ. ಜಿಲ್ಲೆಯ ನಾನಾ ಭಾಗದಿಂದ ಬಂದಿದ್ದ 51 ಜೋಡಿಗಳು ಇವತ್ತು ಹೊಸ ಜೀವನಕ್ಕೆ ಕಾಲಿಡೊಕ್ಕೆ ಅವಕಾಶ ಮಾಡಿಕೊಡಲಾಯಿತು. ಇನ್ನು ಇವತ್ತಿನ ದಿನದಲ್ಲಿ ಸಾಮಾನ್ಯವಾಗಿ ಬಡವರ ಮನೆಯ ಮದುವೆಯಂದ್ರೆ 3 ರಿಂದ 4 ಲಕ್ಷ ಹಣ ಖರ್ಚು ಆಗೋದು ಕಾಮನ್ ಆಗಿದೆ. ಇಷ್ಟು ಹಣವನ್ನ ಖರ್ಚು ಮಾಡದೆ ಇದ್ರೆ ಮದುವೆನೆ ಆಗಲ್ಲ ಎನ್ನುವ ರೀತಿಯಲ್ಲಿ ಸ್ಥಿತಿ ನಿರ್ಮಾಣವಾಗಿದೆ. ಇದೆ ಕಾರಣಕ್ಕೆ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಜೊತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ಸಾಹಾಯ ಆಗಲಿ ಎನ್ನುವ ಕಾರಣಕ್ಕೆ ದೇವಸ್ಥಾನ ಉದ್ಘಾಟನೆ ದಿನ ಸಾಯಿ ಮಂದಿರದ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯವನ್ನ ಮಹಾರಾಜ್ ದಿಗ್ಗಿ ಅವರು ನೆರವೇರಿಸಿದ್ದಾರೆ.

ನಾವು ಕರಾವಳಿಯನ್ನು ಹಿಂದುತ್ವದ ಪ್ರಯೋಗಶಾಲೆ ಮಾಡುತ್ತಿಲ್ಲ: ಸಿಎಂ ಬೊಮ್ಮಾಯಿ

ದಶಕದ ಕನಸು ನನಸಾಗಿದೆ: ಮಹಾರಾಜ ದಿಗ್ಗಿ: ಇನ್ನು ದಶಕದಿಂದ ಕನಸು ಕಂಡಿದ್ದ ಯುವ ಉದ್ಯಮಿ ಮಹಾರಾಜ ದಿಗ್ಗಿ ಅವರ ಕನಸು ನನಸಾಗಿದೆ. ತಾವು ಅಂದುಕೊಂಡಂತೆ  ಸಾಯಿ ಬಾಬಾ ಮಂದಿರ ಲೋಕಾರ್ಪಣೆ ಆಗಿದೆ. ಜೊತೆಗೆ 51 ಜೋಡಿಗಳಿಗೆ ಹೊಸ ಬಟ್ಟೆ, ಕಾಲುಂಗುರ, ಕೈಬಳೆ, ಕುಂಕುಮ ಸೇರಿದಂತೆ ಮದುವೆಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನ ಉಚಿತವಾಗಿ ಮಾಡಲಾಗಿತ್ತು. ವೇದಿಕೆ ಮೇಲಿದ್ದು ವಿವಿಧ ಮಠದ ಸ್ವಾಮೀಜಿಗಳು ಹಾಗೂ ವಿವಿಧ ಪಕ್ಷದ ಮುಖಂಡರ ಸಮ್ಮುಖದಲ್ಲಿ 51 ಜೋಡಿಗಳಿಗೆ ಮಾಂಗಲ್ಯವನ್ನ ನೀಡಿ ಅಕ್ಷತೆ ಹಾಕುವ ಮೂಲಕ ಮದುವೆಯನ್ನ ಮಾಡಿಸಿದ್ದಾರೆ. ಇನ್ನು 51 ಜೋಡಿಗಳ ಜೊತೆಗೆ ಬಂದಿದ್ದ ಸಂಬಂಧಿಕರು ಮನೆಯವರಿಗೆ ಭರ್ಜರಿಯಾಗಿ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಪ್ರತಿ ಒಂದು ವಸ್ತುವಿನಿಂದ ಹಿಡಿದು ಊಟದ ವರೆಗೆ ಉಚಿತವಾಗಿ ಆಯೋಜನೆ ಮಾಡಲಾಗಿತ್ತು. ಇನ್ನು ದೇವಸ್ಥಾನ ಕಟ್ಟಬೇಕು ಸಾಯಿ ಬಾಬನ ಬಗ್ಗೆ ಈ ಭಾಗದ ಜನರಿಗೆ ಪರಿಚಯ ಮಾಡಿಕೊಡಬೇಕು ಎನ್ನುವ ಕನಸು ಬಹುದಿನಗಳಿಂದ ಇತ್ತು. ಹೀಗಾಗಿ ಇವತ್ತು ದೇವಸ್ಥಾನವನ್ನ ಲೋಕಾರ್ಪಣೆ ಮಾಡಲಾಗಿದೆ ಜೊತೆಗೆ ಇದೆ ವೇಳೆ ಸಾಮೂಹಿಕ ವಿವಾಹವನ್ನ ಮಾಡಿಸಲಾಗಿದೆ ಎಂದು ಯುವ ಉದ್ಯಮಿ ಮಹಾರಾಜ್ ದಿಗ್ಗಿ ಸಂತಸ ಹಂಚಿಕೊಂಡರು.

click me!