Vijayapura: ಮೂರು ಕೋಟಿ ಶಿವಲಿಂಗ ಸ್ಥಾಪನೆಯ ಸಂಕಲ್ಪ: 1 ಗಂಟೆ ಓಂ ನಮಃ ಶಿವಾಯ ಮಂತ್ರ ಪಠಣೆ

By Govindaraj S  |  First Published Jan 27, 2023, 8:09 PM IST

ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿಯಲ್ಲಿ ರೇವಣಸಿದ್ದೇಶ್ವರ ದೇವಸ್ಥಾನ ಸಂಸ್ಥೆ ವತಿಯಿಂದ ತ್ರಿಕೋಟಿ ಶಿವಲಿಂಗಗಳ ಪ್ರಥಮ ಶಿವಲಿಂಗ ಪ್ರತಿಷ್ಠಾಪನೆ ಹಾಗೂ ತ್ರಿಕೋಟಿ ಶಿವ ಪಂಚಾಕ್ಷರಿ ಮಹಾ ಮಂತ್ರ ಜಪ ಯಜ್ಷ ಮತ್ತು ಧರ್ಮ ಸಭೆ ನಡೆಯಿತು.


ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಜ.27): ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿಯಲ್ಲಿ ರೇವಣಸಿದ್ದೇಶ್ವರ ದೇವಸ್ಥಾನ ಸಂಸ್ಥೆ ವತಿಯಿಂದ ತ್ರಿಕೋಟಿ ಶಿವಲಿಂಗಗಳ ಪ್ರಥಮ ಶಿವಲಿಂಗ ಪ್ರತಿಷ್ಠಾಪನೆ ಹಾಗೂ ತ್ರಿಕೋಟಿ ಶಿವ ಪಂಚಾಕ್ಷರಿ ಮಹಾ ಮಂತ್ರ ಜಪ ಯಜ್ಷ ಮತ್ತು ಧರ್ಮ ಸಭೆ ನಡೆಯಿತು.‌ ಸುಮಾರು 20-25 ಸಾವಿರ ಮಹಿಳಾ ಹಾಗೂ ಪುರುಷ ಭಕ್ತರು ಸಾಮೂಹಿಕವಾಗಿ ಶಿವಪೂಜೆ ನೇರವೇರಿಸಿದರು. ಸುಮಾರು 1 ಗಂಟೆಗಳ ಕಾಲ ಓಂ ನಮ ಶಿವಾಯಃ ಎನ್ನುವ ಮೂಲಕ ಶಿವಪೂಜೆ ನೇರವೇರಿಸಿದರು.‌

Tap to resize

Latest Videos

ಮುಕ್ಕೋಟಿ ಶಿವಲಿಂಗ ಸ್ಥಾಪನೆಯ ಸಂಕಲ್ಪ: ಹೋರ್ತಿಯ ರೇವಣಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಮೂರು ಕೋಟಿ ಶಿವಲಿಂಗ ಪ್ರತಿಷ್ಠಾಪನೆ ಸಂಕಲ್ಪ ಹೊಂದಿರುವ ದೇವಸ್ಥಾನ ಮಂಡಳಿ ಇದರ ಪ್ರಯುಕ್ತ ಶಿವಲಿಂಗ ಧ್ಯಾನ ಏರ್ಪಡಿಸಿತ್ತು. 20-25 ಸಾವಿರ ಭಕ್ತರು ಶಿವಲಿಂಗ ಧ್ಯಾನ್ಯ ಮಾಡುವ ಮೂಲಕ ಜಯಘೋಷ ಮೊಳಗಿಸಿದರು. 

ಬ್ರಹ್ಮಕ್ಷತ್ರಿಯ ಖತ್ರಿ ಸಮಾಜದ ಆರಾಧ್ಯ ದೈವ ಹಿಂಗ್ಲಾಜ್‌ ಮಾತಾಜಿ ಮಂದಿರಕ್ಕೆ ಅದ್ದೂರಿ ಚಾಲನೆ!

ಸತತ ಒಂದು ಗಂಟೆ ಓಂ ನಮಃ ಶಿವಾಯ: ಸತತ ಒಂದು ಗಂಟೆಗಳ‌‌ ಕಾಲ ಬಿಟ್ಟುಬಿಡದೇ ಓಂ ಶಿವಾಯಃ ಜಪ ಮಾಡಿದರು. ಇದು ವಿಜಯಪುರ ಜಿಲ್ಲೆಯಲ್ಲಿಯೇ ದಾಖಲೆ ಪುಟದಲ್ಲಿ ಸೇರಿದಂತಾಗಿದೆ. ನಂತರ ಭಕ್ತರನ್ನುದ್ದೇಶಿಸಿ ಆರ್ಶಿವಚನ ನೀಡಿದ,  ಶ್ರೀಶೈಲದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಐತಿಹಾಸಿಕವಾದ ತ್ರಿಕೋಟಿ ಲಿಂಗ ಪ್ರತಿಷ್ಠಾಪನೆ, ಶಿವಪಂಚ ಮೂಲಕ ನೇರವೇರುತ್ತಿರುವದು, ಪುಣ್ಯದ ಕಾರ್ಯವಾಗಿದೆ ಎಂದರು.‌ 1 ಗಂಟೆಗಳ‌ ಕಾಲ‌ ಮೈ ಮರೆತುವ ಜಪ‌ ಮೂಲಕ 3ಕೋಟಿ ಲಿಂಗ ಇಂದೆ ಪ್ರತಿಷ್ಠಾಪನೆಯಾದಂತಾಗಿದೆ. ಶೀಘ್ರ 3 ಕೋಟಿ ಲಿಂಗ ಇಲ್ಲಿ ಸ್ಥಾಪನೆಯಾಗಲಿದೆ ಎಂದು ನುಡಿದರು. 

ಏಕಕಾಲದಲ್ಲಿ 25 ಸಾವಿರಕ್ಕಿಂತ ಹೆಚ್ಚು ಭಕ್ತರು ಶಿವನಾಮ ಜಪ ಮಾಡಿದ್ದು 3 ಕೋಟಿ ಲಿಂಗ ಸ್ಥಾಪನೆಗೆ ಸಮವಾಗಿದೆ ಎಂದರು. ಉಜ್ಜಯನಿಯ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿ, ಉಜ್ಜನಿಯ ಸದ್ಧರ್ಮ ಸಿಂಹಾಸನಾಧೀಶ್ವರ 1008 ಜಗದ್ಗುರುಗಳು ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದರು. ಇಂಡಿ ಶಾಸಕ ಯಶ ವಂತರಾಯಗೌಡ ಪಾಟೀಲ, ಚಲನಚಿತ್ರ‌ ನಿರ್ದೇಶಕ ಸುನೀಲ ಕುಮಾರ ದೇಸಾಯಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉಮೇಶ ಕಾರಜೋಳ ಸೇರಿ ಇತರರು ಉಪಸ್ಥಿತರಿದ್ದರು. 

ರಾಜಕಾರಣದಲ್ಲಿ ನಿಯತ್ತು ಮತ್ತು ನೀತಿ ಒಂದೇ ಇರಬೇಕು: ಸಿದ್ದುಗೆ ಟಾಂಗ್‌ ಕೊಟ್ಟ ಸಿ.ಟಿ.ರವಿ

ಮುಗಿಲು ಮುಟ್ಟಿದ ಭಕ್ತರ ಹರ್ಷೋದ್ದಾರ: 3 ಕೋಟಿ‌ ಲಿಂಗ ಪ್ರತಿಷ್ಠಾಪನೆಯ ಸಂಕಲ್ಪ ಹೊತ್ತು ಆಯೋಜನೆ ಮಾಡಿದ್ದ ಧಾರ್ಮಿಕ‌ ಕಾರ್ಯಕ್ರಮದಲ್ಲಿ ಭಕ್ತಿಯಲ್ಲಿ ಮಿಂದೆದ್ದ ಭಕ್ತಗಣ, ಉಜ್ಜಯನಿ ಪೀಠ, ರಂಭಾಪುರಿ ಪೀಠ, ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ನಮ್ಮ ಗ್ರಾಮದಲ್ಲಿ ತ್ರಿವೇಣಿ ಸಂಗಮದ ಅನುಭವವಾಯಿತು. ಇದೇ ರೀತಿ ಧಾರ್ಮಿಕ‌‌‌ ಕಾರ್ಯ ಜನ್ಮದಲ್ಲಿ‌ ಮತ್ತೊಮ್ಮೆ ನೋಡುತ್ತೇವೆ ಇಲ್ಲವೋ ಗೊತ್ತಿಲ್ಲ, ನಾವು ಸಹ ನಮ್ಮ ಕೈಲಾದಷ್ಟು ಭಕ್ತಿ ಮೆರೆಯಲು ಲಿಂಗ ಪ್ರತಿಷ್ಠಾಪಿಸುವ ಇಚ್ಚೆ ಇದೆ. ಅದು ಶೀಘ್ರ ನೇರವೇರಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇವೆ ಎಂದರು.

click me!