ಮಂಗಳೂರು: ಪ್ರವಾಹ ಪರಿಹಾರ ಗೋದಾಮಿನಲ್ಲೇ ಬಾಕಿ..!

By Kannadaprabha News  |  First Published Dec 20, 2019, 8:33 AM IST

ನೆರೆ ಸಂತ್ರಸ್ತರಿಗೆ ಹಂಚಿಕೆ ಆಗಬೇಕಾದ ವಸ್ತುಗಳು ಗ್ರಾಮ ಪಂಚಾಯಿತಿ ಗೋದಾಮಿನ ಮೂಲೆಯೊಂದರಲ್ಲಿ ದಾಸ್ತಾನು ಇಟ್ಟಿದ್ದು, ಅದು ಇಲಿ, ಹೆಗ್ಗಣಗಳ ಪಾಲಾಗುತ್ತಿದೆ. ಇದು ಪುತ್ತೂರು ತಾಲೂಕು ಬಜತ್ತೂರು ಗ್ರಾಮ ಪಂಚಾಯಿತಿಯ ಕಥೆ. ಜನರಿಗೆ ಸೇರಬೇಕಿದ್ದ ಸಾಮಾಗ್ರಿ ಇಲಿ, ಹೆಗ್ಗಣಗಳ ಆಹಾರವಾಗುತ್ತಿರುವುದು ವಿಪರ್ಯಾಸ.


ಮಂಗಳೂರು(ಡಿ.20): 4 ತಿಂಗಳ ಹಿಂದೆ ಭೀಕರ ನೆರೆ, ಪ್ರವಾಹಗಳಿಗೆ ತುತ್ತಾಗಿ ಮನೆ, ನೆಲೆ ಕಳೆದುಕೊಂಡು ಸಂತ್ರಸ್ತರಾದವರಿಗೆ ವಿತರಣೆ ಮಾಡಲು ದಾನಿಗಳು ನೀಡಿರುವ ಬಟ್ಟೆ ಬರೆಗಳು ಸರಿಯಾಗಿ ವಿತರಣೆ ಮಾಡದೆ ಗ್ರಾಮ ಪಂಚಾಯಿತಿ ಗೋದಾಮಿನಲ್ಲೇ ಉಳಿದಿದೆ.

ಉಪ್ಪಿನಂಗಡಿ ಪುತ್ತೂರು ತಾಲೂಕು ಬಜತ್ತೂರು ಗ್ರಾಮ ಪಂಚಾಯಿತಿಯ ಗ್ರಂಥಾಲಯ ಹೊಂದಿರುವ ಪಂಚಾಯಿತಿ ಕಟ್ಟಡದಲ್ಲಿ ದಾಸ್ತಾನು ಇರಿಸಲಾಗಿದೆ. ನೆರೆ ಸಂತ್ರಸ್ತರಿಗೆ ಹಂಚಿಕೆ ಆಗಬೇಕಾದ ವಸ್ತುಗಳು ಕಟ್ಟಡದ ಮೂಲೆಯೊಂದರಲ್ಲಿ ದಾಸ್ತಾನು ಇಟ್ಟಿದ್ದು, ಅದು ಇಲಿ, ಹೆಗ್ಗಣಗಳ ಪಾಲಾಗುತ್ತಿದೆ.

Latest Videos

undefined

ಮಂಗಳೂರಲ್ಲಿ 48 ತಾಸು ಇಂಟರ್ನೆಟ್‌ ಬಂದ್‌

ಜುಲೈ ಹಾಗೂ ಆಗಸ್ಟ್‌ ತಿಂಗಳಿನಲ್ಲಿ ಸುರಿದ ಭಾರಿ ಮಳೆ, ನೆರೆ, ಪ್ರವಾಹಕ್ಕೆ ಹಲವಾರು ಮನೆಗಳು ಕುಸಿದಿತ್ತು. ಅದರಲ್ಲಿ ಪುತ್ತೂರು ತಾಲೂಕಿನ ಬಜತ್ತೂರು, ಉಪ್ಪಿನಂಗಡಿ, 34-ನೆಕ್ಕಿಲಾಡಿ ಗ್ರಾಮದಲ್ಲಿಯೂ ಹಲವಾರು ಮಂದಿ ಮನೆ ಕಳೆದುಕೊಂಡಿದ್ದರು. ಅದೆಷ್ಟೋ ಕುಟುಂಬಗಳ ಮಂದಿ ಉಟ್ಟಬಟ್ಟೆಹೊರತು ಪಡಿಸಿದಂತೆ ಮಿಕ್ಕ ಎಲ್ಲವನ್ನೂ ಕಳೆದು ಕೊಂಡು ಸಂತ್ರಸ್ತರಾಗಿ ನೆರವು ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದರು.

ಬಜತ್ತೂರು ಮೊದಲಾದ ಕಡೆಯ ಸಂತ್ರಸ್ತರಿಗಾಗಿ ಬೆಂಗಳೂರು ಮೂಲದ ಸಂಸ್ಥೆ 1 ಲಾರಿ ಬಟ್ಟೆಗಳನ್ನು ಸರಬರಾಜು ಮಾಡಿತ್ತು. ಅದನ್ನು ಬಜತ್ತೂರು ಗ್ರಾಮ ಪಂಚಾಯಿತಿ ಇರಿಸಿಕೊಂಡಿತ್ತು. ಬಂದ ಬಟ್ಟೆಗಳನ್ನು ಬಜತ್ತೂರು ಗ್ರಾಮದಲ್ಲಿ ವಿತರಿಸಿ, ಬೇರೆ ಗ್ರಾಮ, ಊರಿಗೆ ವಿತರಣೆ ಮಾಡಲು ವ್ಯವಸ್ಥೆ ಮಾಡದ ಕಾರಣ ಸರಿಯಾಗಿ ಹಂಚಿಕೆ ಆಗದೆ ಹಾಗೆಯೇ ಉಳಿದುಕೊಂಡಿದೆ. ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪರಿಹಾರ ನಿಷ್ೊ್ರಯೋಜಕಗೊಳಿಸಿರುವ ಬಗ್ಗೆ ವ್ಯಾಪಕ ದೂರುಗಳು ವ್ಯಕ್ತವಾಗಿದೆ.

ರಾಜ್ಯ ಹೊತ್ತಿ ಉರಿಯುತ್ತೆ ಎಂದಿದ್ದ ಶಾಸಕ ಖಾದರ್ ವಿರುದ್ಧ ದೂರು

ನೆರೆ ಸಂತ್ರಸ್ತರಿಗಾಗಿ ಹಂಚಲು 1 ಲಾರಿಯಲ್ಲಿ ಬೆಂಗಳೂರಿನಿಂದ 10 ಲಕ್ಷ ರು. ಮೌಲ್ಯದ ವಸ್ತ್ರಗಳು ಪೂರೈಕೆಯಾಗಿತ್ತು. ಕಂದಾಯ ಇಲಾಖೆ ಶಾಸಕರ ಮೂಲಕ ಸಾಂಕೇತಿಕವಾಗಿ ಕೆಲವರಿಗೆ ಹಂಚಿಕೆ ಮಾಡಿತ್ತು. ತದ ನಂತರ ಇದರ ವಿಲೇವಾರಿ ಸರಿಯಾಗಿ ನಡೆಯಲಿಲ್ಲ. ಅರ್ಹ ಫಲಾನುಭವಿಗಳಿಗೆ ಇದರ ಪ್ರಯೋಜನ ದೊರೆತಿಲ್ಲ.

ಅನಾಥಾಶ್ರಮಕ್ಕೆ ಕೊಡುವ ಬಗ್ಗೆ ನಿರ್ಧರಿಸಿದ್ದೇವೆ: ಸಂತೋಷ್‌ ಕುಮಾರ್‌ ಪರಂದಾಜೆ

ನೆರೆ ಸಂತ್ರಸ್ತರಿಗೆ ವಿತರಿಸಲು ಬೆಂಗಳೂರು ಸಂಸ್ಥೆಯೊಂದರಿಂದ 1 ಲಾರಿಯಲ್ಲಿ ಬಟ್ಟೆಬಂದಿತ್ತು. ಬಜತ್ತೂರು ಗ್ರಾಮದಲ್ಲಿ ಸುಮಾರು 30 ಮಂದಿ ಸಂತ್ರಸ್ತರಿಗೆ ವಿತರಿಸಿದ್ದೇವೆ. ಇಲ್ಲಿಗೆ ಸರಬರಾಜು ಮಾಡಿರುವ ಸಂಸ್ಥೆ ಜತೆ ಮಾತನಾಡಿ, ಇದನ್ನು ಬೇರೆಡೆಗೆ ಕೊಂಡೊಯ್ಯಲು ತಿಳಿಸಿದ್ದೆ. ಆದರೆ ಅವರು ತೆಗೆದುಕೊಂಡು ಹೋಗದ ಕಾರಣ ಉಳಿಕೆಯಾಗಿದೆ. ಇದೀಗ ಇದನ್ನು ಅನಾಥಾಶ್ರಮಕ್ಕೆ ಕೊಡುವ ಬಗ್ಗೆ ನಿರ್ಧರಿಸಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್‌ ಕುಮಾರ್‌ ಪರಂದಾಜೆ ತಿಳಿಸಿದ್ದಾರೆ.

ಮುಜರಾಯಿ ಇಲಾಖೆ ನಿರ್ಲಕ್ಷ್ಯ: ಹುಂಡಿಯೊಳಗೆ ಹಾಳಾಯ್ತು ಸಾವಿ ಸಾವಿರ ನೋಟು..!

ಬಜತ್ತೂರು ಗ್ರಾಮದಲ್ಲಿ ಕೇವಲ 2 ಮನೆ ಮಾತ್ರ ಕುಸಿದು ಬಿದ್ದಿದ್ದು, ಉಳಿದಂತೆ ಕೆಲವು ಮನೆಗಳಿಗೆ ನೀರು ನುಗ್ಗಿತ್ತು. ಆದರೆ ಕೆಲವು ಬೇನಾಮಿ ಹೆಸರಿನಲ್ಲಿ ಪರಿಹಾರ ಧನ ನೀಡಲಾಗಿದೆ. ಬಟ್ಟೆಗಳು ಇಲ್ಲದೆ ಇದಕ್ಕಾಗಿ ಕೈಚಾಚುವಂತಹ ಫಲಾನುಭವಿಗಳು ಬಜತ್ತೂರುನಲ್ಲಿ ಇಲ್ಲ. ಹೀಗಿರುವಾಗ 1 ಲಾರಿ ಬಟ್ಟೆಗಳನ್ನು ಇಲ್ಲಿ ಇರಿಸಿಕೊಂಡಿದ್ದೇ ತಪ್ಪು. ಆ ಬಳಿಕ ಇಲ್ಲಿಯವರಿಗೆ ವಿತರಣೆ ಮಾಡಿ ಉಳಿದ ಬಟ್ಟೆಗಳನ್ನು ಜಿಲ್ಲೆಯ ಚಾರ್ಮಾಡಿ, ದಿಡುಪೆ ಮೊದಲಾದ ಪ್ರದೇಶಗಳಿಗೆ ಕಳುಹಿಸಿ ಕೊಡಬಹುದಿತ್ತು. ಅದನ್ನೂ ಮಾಡದೆ ಈ ರೀತಿಯಾಗಿ ವಸ್ತುಗಳನ್ನು ಉಳಿಸಿರುವುದು ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಮಾಣಿಕ್ಯರಾಜ್‌ ಪಡಿವಾಳ್‌ ಹೇಳಿದ್ದಾರೆ.

click me!